

ಎನ್‍ಬಿಸಿಸಿ (ಇಂಡಿಯಾ) ಎಂದೇ ಖ್ಯಾತಿ ಪಡೆದಿರುವ ನ್ಯಾಷನಲ್ ಬಿಲ್ಡಿಂಗ್ಸ್ ಕನ್‍ಸ್ಟ್ರಕ್ಷನ್ ಕಾರ್ಪೋರೇಷನ್ ಲಿಮಿಟೆಡ್ ನವರತ್ನ ಸಂಸ್ಥೆಗಳಲ್ಲಿ ಒಂದಾಗಿದೆ. ಭಾರತ ಹಾಗೂ ಜಾಗತಿಕ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹಲವು ವಿಸ್ತರಣಾ ಕಾರ್ಯಗಳಲ್ಲಿ ತೊಡಗಿದ್ದು, ಅರ್ಹ ಹಾಗೂ ಪ್ರತಿಭಾವಂತ ಅಭ್ಯರ್ಥಿಗಳಿಗೆ ಶೋಧ ನಡೆಸಿದೆ.
ಒಟ್ಟು ಹುದ್ದೆಗಳು: 35
ಎನ್‍ಬಿಸಿಸಿಯಲ್ಲಿನ ಪ್ರಾಜೆಕ್ಟ್ ಮ್ಯಾನೇಜ್‍ಮೆಂಟ್ ಕನ್ಸಲ್ಟಂಸಿ (ಪಿಎಂಸಿ) ರಿ-ಡೆವಲಪ್ಪಿಂಗ್, ರಿಯಲ್ ಎಸ್ಟೇಟ್ ಡೆವಲಪ್‍ಮೆಂಟ್ ಮತ್ತು ಇಪಿಸಿ ಕಾನಟ್ರಾಕ್ಟಿಂಗ್ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಲು ಅಭ್ಯರ್ಥಿಗಳ ಅವಶ್ಯಕತೆ ಇದ್ದು, ದೇಶ ಹಾಗೂ ವಿದೇಶದಲ್ಲಿ ಸಂಸ್ಥೆಯನ್ನು ಬೆಳೆಸಬಲ್ಲ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದ ತರಬೇತಿ ನೀಡಲಾಗುವುದು.
ಹುದ್ದೆ ವಿವರ
* ಮ್ಯಾನೇಜ್‍ಮೆಂಟ್ ಟ್ರೇನಿ (ಸಿವಿಲ್) - 25
* ಮ್ಯಾನೇಜ್‍ಮೆಂಟ್ ಟ್ರೇನಿ (ಎಲೆಕ್ಟ್ರಿಕಲ್) - 10
ವಿದ್ಯಾರ್ಹತೆ: ಸಿವಿಲ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಅಥವಾ ತತ್ಸಮಾನ ಶಿಕ್ಷಣ ಪಡೆದಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು.
ವಯೋಮಿತಿ: ಅರ್ಜಿ ಸಲ್ಲಿಕೆ ಕೊನೇ ದಿನಕ್ಕೆ ಅನ್ವಯವಾಗುವಂತೆ ಗರಿಷ್ಠ 29 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ 3 ರಿಂದ 5 ವರ್ಷ ವಯೋ ಸಡಿಲಿಕೆ ಇದೆ.
ವೇತನ: ಮಾಸಿಕ 40,000 - 1,40,000 ರೂ. ಇದೆ. ತರಬೇತಿ ಅವಧಿ ಮುಗಿದ ನಂತರ ವೇತನ ಜತೆ ಡಿಎ, ಮನೆ ಬಾಡಿಗೆ ಭತ್ಯೆ, ಕಾರ್ಯಕ್ಷಮತೆ ಭತ್ಯೆ, ಸಿಪಿಎï, ವೈದ್ಯಕೀಯ ಸೌಲಭ್ಯ, ಗ್ರಾಚುಟಿ, ರಜೆ ಭತ್ಯೆಗಳನ್ನು ಸಂಸ್ಥೆಯ ನಿಯಮದನುಸಾರ ನೀಡಲಾಗುವುದು.
ಮೀಸಲಾತಿ: 35 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 17 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 9, ಎಸ್ಸಿಗೆ 6, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 3 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಇದರಲ್ಲಿ 2 ಸ್ಥಾನಗಳನ್ನು ಅಂಗವಿಕಲ ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ. (ಅಂಗವಿಕಲ ಅಭ್ಯರ್ಥಿಗಳಿಗೆ ಶೇ.40 ಕ್ಕಿಂತ ಹೆಚ್ಚು ಅಂಗವೈಕಲ್ಯತೆ ಹೊಂದಿರಬಾರದು.)
ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಸಂಸ್ಥೆಯ ಅಭ್ಯರ್ಥಿಗಳನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳು 500 ರೂ. ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ: ಗೇಟ್ 2020ರ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಇದೆ. ಅಭ್ಯರ್ಥಿಗಳು ಗೇಟ್‍ನಲ್ಲಿ ಪಡೆದ ಅಂಕ ಆಧರಿಸಿ ಶಾರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದರ್ಶನ ದಿನಾಂಕ, ಸ್ಥಳ, ಸಮಯವನ್ನು ಮೇಲ್ ಮೂಲಕ ತಿಳಿಸಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 21.4.2021
ಅಧಿಸೂಚನೆಗೆ: https://bit.ly/3vJ1WBg
ಮಾಹಿತಿಗೆ: http://www.nbccindia.com
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ: