More

    ಡಿಪ್ಲೋಮಾ, ಹಿಂದಿ- ಇಂಗ್ಲಿಷ್​ನಲ್ಲಿ ಸ್ನಾತಕ ಪದವೀಧರರಿಗೆ ಭರ್ಜರಿ ಅವಕಾಶ: ರೈಲ್ವೆಯಲ್ಲಿ ಅರ್ಜಿ ಆಹ್ವಾನ

    ದಕ್ಷಿಣ ಮಧ್ಯ ರೈಲ್ವೆಯಲ್ಲಿ (ಸೌತ್ ಸೆಂಟ್ರಲ್) ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‍ಲೈನ್ ಅರ್ಜಿ ಸಲ್ಲಿಸತಕ್ಕದ್ದು.

    ಒಟ್ಟು ಹುದ್ದೆಗಳು: 96

    ತೆಲಂಗಾಣದ ಸಿಕಂದರಾಬಾದ್‍ನಲ್ಲಿರುವ ದಕ್ಷಿಣ ಮಧ್ಯ ರೈಲ್ವೆಯ ಇಂಜಿನಿಯರಿಂಗ್, ಸಿಬ್ಬಂದಿ ವಿಭಾಗದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳು ಆನ್‍ಲೈನ್ ಅರ್ಜಿ ಸಲ್ಲಿಸಿದರೆ ಸಾಕು. ಯಾವುದೇ ಪ್ರಿಂಟ್‍ಔಟ್ ಕಳುಹಿಸುವ ಅಗತ್ಯ ಇಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಹುದ್ದೆ ವಿವರ
    * ಜೂನಿಯರ್ ಇಂಜಿನಿಯರ್ (ಟ್ರ್ಯಾಕ್ ಮಷಿನ್)- 50
    ಮೆಕ್ಯಾನಿಕಲ್/ ಪ್ರೊಡಕ್ಷನ್/ ಆಟೋಮೊಬೈಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್/ ಇನ್‍ಸ್ಟ್ರುಮೆಂಟೇಷನ್ ಮತ್ತು ಕಂಟ್ರೋಲ್ ಇಂಜಿನಿಯರಿಂಗ್‍ನಲ್ಲಿ 3 ವರ್ಷದ ಡಿಪ್ಲೋಮಾ ಮಾಡಿರಬೇಕು. ಬಿಇ, ಬಿ.ಟೆಕ್ ಮಾಡಿದವರೂ ಅರ್ಹರು.

    * ಜೂನಿಯರ್ ಟ್ರಾನ್ಸ್‍ಲೇಟರ್ (ಹಿಂದಿ) – 18
    ಹಿಂದಿ/ ಇಂಗ್ಲಿಷ್‍ನಲ್ಲಿ ಸ್ನಾತಕೋತ್ತರ ಪದವಿ ಅಥವಾ ಯಾವುದೇ ಸ್ನಾತಕೋತ್ತರ ಪದವಿಯನ್ನು ಹಿಂದಿ/ ಇಂಗ್ಲಿಷ್ ಮಾಧ್ಯಮದಲ್ಲಿ ಅಧ್ಯಯನ, ಹಿಂದಿ, ಇಂಗ್ಲಿಷ್ ಟ್ರಾನ್ಸ್‍ಲೇಷನ್‍ನಲ್ಲಿ ಡಿಪೆÇ್ಲಮಾ ಪ್ರಮಾಣ ಪತ್ರ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    * ಸ್ಟೆನೋಗ್ರಫರ್ ಗ್ರೇಡ್ ಐಐಐ – 28
    ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಶಿಕ್ಷಣ ಮಾಡಿದ್ದು, ಪ್ರತಿ ನಿಮಿಷಕ್ಕೆ 80 ಪದ ಟೈಪಿಂಗ್ ಮಾಡಲು ಬರುವ ಅಭ್ಯರ್ಥಿಗಳು ಅರ್ಹರು.

    ವಯೋಮಿತಿ: 1.7.2021ಕ್ಕೆ ಅನ್ವಯವಾಗುವಂತೆ ಸಾಮಾನ್ಯ ವರ್ಗಕ್ಕೆ ಗರಿಷ್ಠ 42 ವರ್ಷ, ಇತರ ಹಿಂದುಳಿದ ವರ್ಗಕ್ಕೆ 45 ವರ್ಷ, ಎಸ್ಸಿ, ಎಸ್ಟಿಗೆ 47 ವರ್ಷ.

    ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗೆ 41 ಸ್ಥಾನ, ಎಸ್ಸಿಗೆ 18, ಎಸ್ಟಿಗೆ 9, ಇತರ ಹಿಂದುಳಿದ ವರ್ಗಕ್ಕೆ 28 ಸ್ಥಾನಗಳನ್ನು ಮೀಸಲಿರಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ: ಜೂ.ಇಂಜಿನಿಯರ್ ಹುದ್ದೆಗೆ ಸಾಮಾನ್ಯ ಜ್ಞಾನ, 10ನೇ ತರಗತಿ ಸಿಬಿಎಸ್‍ಇ ಪಠ್ಯದ ಫಿಜಿಕ್ಸ್ ಮತ್ತು ಕೆಮಿಸ್ಟ್ರಿ, ಬೇಸಿಕ್ ಆï ಕಂಪ್ಯೂಟರ್ಸ್ ಆ್ಯಂಡ್ ಅಪ್ಲಿಕೇಷನ್ಸ್, ಎನ್ವಿರಾನ್‍ಮೆಂಟ್ ಆ್ಯಂಡ್ ಪೆÇಲ್ಯೂಷನ್ ಕಂಟ್ರೋಲ್, ಟೆಕ್ನಿಕಲ್ ಎಬಿಲಿಟಿ ಕುರಿತ ಪ್ರಶ್ನೆಗಳನ್ನು ಕೇಳಲಾಗುವುದು. ಟ್ರಾನ್ಸ್‍ಲೇಟರ್ ಹುದ್ದೆಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುವುದು. ಜತೆಗೆ ಹಿಂದಿ ಹಾಗೂ ಇಂಗ್ಲಿಷ್ ಭಾಷೆ ಮೇಲಿನ ಹಿಡಿತ ಪರೀಕ್ಷಿಸಲಾಗುವುದು. ಸ್ಟೆನೋಗ್ರ್ರಾಫರ್ ಹುದ್ದೆಗೆ ಹಿಂದಿ ಹಾಗೂ ಇಂಗ್ಲಿಷ್ ಟೈಪಿಂಗ್ ಪರೀಕ್ಷೆ ಮಾಡಲಾಗುವುದು. ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಆಹ್ವಾನಿಸಲಾಗುವುದು.

    ವೇತನ: ಹುದ್ದೆಗಳಿಗೆ ಅನ್ವಯವಾಗುವಂತೆ 7ನೇ ವೇತನ ಶ್ರೇಣಿಯಲ್ಲಿ ಸ್ಟೆನೋಗ್ರಾÀರ್‍ಗೆ 4ನೇ ಹಂತ ಹಾಗೂ ಉಳಿದ ಹುದ್ದೆಗೆ 6ನೇ ಹಂತದ ವೇತನ ನೀಡಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 14.4.2021
    ಅಧಿಸೂಚನೆಗೆ: https://bit.ly/3970RJv
    ಮಾಹಿತಿಗೆ: https://iroams.com/RRC

    ಐಟಿಐ ಉತ್ತೀರ್ಣರಾಗಿರುವಿರಾ? ಕರ್ನಾಟಕ ವಿದ್ಯುತ್ ನಿಗಮದಲ್ಲಿ ನಿಮಗಿದೆ ಉತ್ತಮ ಅವಕಾಶ

    ವಿವಿಧ ಇಂಜಿನಿಯರಿಂಗ್ ಪದವೀಧರರಿಗೆ ಉತ್ತಮ ಅವಕಾಶ- ಮ್ಯಾನೇಜರ್​ ಹುದ್ದೆಗೆ ಆಹ್ವಾನ

    ವಿಜ್ಞಾನ ಪದವೀಧರರಿಗೆ ಉತ್ತಮ ಅವಕಾಶ: ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts