

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 2021-22ನೇ ಸಾಲಿನ ಬ್ಯಾಕ್ಲಾಗ್ ಬೋಧಕ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ವಿಭಾಗ ಮತ್ತು ಯೂನಿವಸಿರ್ಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ (ಯುವಿಸಿಇ)ನಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಹೊರ ರಾಜ್ಯದ ಹಾಗೂ ವಿದೇಶದಲ್ಲಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದು ತಿಳಿಸಲಾಗಿದೆ.
ಹುದ್ದೆ ವಿವರ
* ಪ್ರೊಫೆಸರ್ – 5
– ಕೆಮಿಸ್ಟ್ರಿ – 1
– ಝೂಲಜಿ – 1
– ಮೆಕ್ಯಾನಿಕಲ್ ಇಂಜಿನಿಯರ್ – 1
– ಎಲೆಕ್ಟ್ರಿಕಲ್ ಇಂಜಿನಿಯರ್- 1
– ಫಿಲೋಸಫಿ – 1
* ಅಸೋಸಿಯೇಟ್ ಪ್ರೊಫೆಸರ್ – 6
– ಇಂಗ್ಲಿಷ್ – 1
– ಫಿಜಿಕ್ಸ್ – 1
– ಮ್ಯಾಥಮೆಟಿಕ್ಸ್ – 1
– ಝೂಲಜಿ – 1
– ಮೆಕ್ಯಾನಿಕಲ್ ಇಂಜಿನಿಯರ್ – 1
– ಎಲೆಕ್ಟ್ರಿಕಲ್ ಇಂಜಿನಿಯರ್ – 1
* ಅಸಿಸ್ಟೆಂಟ್ ಪ್ರೊಫೆಸರ್ – 3
– ಫಿಜಿಕ್ಸ್ – 1
– ಅಪ್ಪರಲ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್ಮೆಂಟ್ – 1
– ಲೈಬ್ರರಿ ಆ್ಯಂಡ್ ಇನ್ಮೇರ್ಷನ್ ಸೈನ್ಸ್ – 1
ಸೂಚನೆ: ವಿದ್ಯಾರ್ಹತೆ, ಇತರ ಅರ್ಹತೆ, ಅರ್ಜಿ ನಮೂನೆ ಹಾಗೂ ಇತರ ಸಾಮಾನ್ಯ ಸೂಚನೆಗಳ ಮಾಹಿತಿಯನ್ನು ವಿಶ್ವವಿದ್ಯಾಲಯದ ವೆಬ್ಸೈಟ್ನಲ್ಲಿ 2021ರ ಜೂನ್ 23ರಂದು ಪ್ರಕಟಿಸುವುದಾಗಿ ತಿಳಿಸಲಾಗಿದೆ.
ವೇತನ: ಪ್ರೊಫೆಸರ್ ಹುದ್ದೆಗೆ ಮಾಸಿಕ 1,44,200-2,18,200 ರೂ., ಅಸೋಸಿಯೇಟ್ ಪ್ರೊಫೆಸರ್ಗೆ ಮಾಸಿಕ 1,31,400-2,17,100 ರೂ., ಅಸಿಸ್ಟೆಂಟ್ ಪ್ರೊಫೆಸರ್ಗೆ ಮಾಸಿಕ 57,700-1,82,400 ರೂ. ವೇತನ ಇದೆ.
ಅರ್ಜಿ ಶುಲ್ಕ: ಪ್ರೊಫೆಸರ್ ಹಾಗೂ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ 500 ರೂ., ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ 250 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 30.7.2021
ಅರ್ಜಿ ಸಲ್ಲಿಕೆ ವಿಳಾಸ: The Rigistrar, Bangalore University, bengalore – 560056
ಅಧಿಸೂಚನೆಗೆ: https://bit.ly/3wvvYZ6
ಮಾಹಿತಿಗೆ: https://bangaloreuniversity.ac.in