ವಿಜ್ಞಾನ ಪದವೀಧರರಿಗೆ ಭರ್ಜರಿ ಅವಕಾಶ: ಪಶುಪಾಲನೆ ಇಲಾಖೆಯಲ್ಲಿ 115 ಹುದ್ದೆಗಳಿಗೆ ಆಹ್ವಾನ

udyoga- animal
Published on

ಪಶುಪಾಲನೆ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆಯಡಿ ಕಲ್ಯಾಣ-ಕರ್ನಾಟಕ ಪ್ರದೇಶದ ಸ್ಥಳಿಯ ವೃಂದದ ಪಶು ವೈದ್ಯಕಿಯ ಪರೀಕ್ಷಕರ ಹಾಗೂ ಪಶುವೈದ್ಯಕಿಯ ಸಹಾಯಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳು: 115


ಪಶುಪಾಲನೆ ಮತ್ತು ಪಶುವೈದ್ಯಕಿಯ ಇಲಾಖೆಯಿಂದ ಈ ಮೊದಲು 2020ರಲ್ಲಿ ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈಗ ಅದೇ ಅಧಿಸೂಚನೆಯಲ್ಲಿ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಲಾಗಿದೆ. ಈ ಹುದ್ದೆಗಳಿಗೆ 2020ರ ಜುಲೈನಲ್ಲಿ ಆನ್​ಲೈನ್​ ಅರ್ಜಿ ಆಹ್ವಾನಿಸಲಾಗಿತ್ತು. ಆಗ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈಗ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ ಎಂದು ತಿಳಿಸಲಾಗಿದೆ.

ಹುದ್ದೆ ವಿವರ
* ಪಶುವೈದ್ಯಕಿಯ ಪರೀಕ್ಷಕ - 32
* ಪಶುವೈದ್ಯಕಿಯ ಸಹಾಯಕ - 83

ವಿದ್ಯಾರ್ಹತೆ: ಬಿಎಸ್ಸಿ ಪದವಿಯಲ್ಲಿ ಪ್ರಾಣಿಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಅಧ್ಯಯನ ಮಾಡಿರಬೇಕು. ಪ್ರಾಣಿಶಾಸ್ತ್ರ ಅಧ್ಯಯನ ಮಾಡಿರದ ಅಭ್ಯರ್ಥಿಗಳು ದೊರಕದಿದ್ದಾಗ, ಯಾವುದೇ ವಿಜ್ಞಾನ ವಿಷಯದಲ್ಲಿ ಪದವಿ ಪಡೆದಿರುವ ಮತ್ತು ಪಿಯುಸಿ ಯಲ್ಲಿ ಐಚ್ಛಿಕ ವಿಷಯವನ್ನಾಗಿ ಜೀವಶಾಸ್ತ್ರವನ್ನು ಅಭ್ಯಸಿಸಿರಬೇಕು. ಪಶು ಆರೋಗ್ಯ (ಪಶುಸಂಗೋಪನೆ) ಡಿಪ್ಲೊಮಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ವೃತ್ತಿ ಶಿಕ್ಷಣ (ಪದವಿ ಪೂರ್ವ ಶಿಕ್ಷಣ ಇಲಾಖೆ) ಕರ್ನಾಟಕ ಸರ್ಕಾರ ನಡೆಸಲಾಗುವ ಡೈರಿಗೆ ಸಂಬಂಧಿಸಿದ 2 ವರ್ಷಗಳ ಉದ್ಯೋಗ ಆಧಾರಿತ ಕೋರ್ಸ್​ನಲ್ಲಿ ಉತ್ತೀರ್ಣರಾಗಿರಬೇಕು.

ವೇತನ: ಪಶುವೈದ್ಯಕಿಯ ಪರೀಕ್ಷಕರಿಗೆ ಮಾಸಿಕ 23,500 ರಿಂದ 47,650 ರೂ., ಪಶುವೈದ್ಯಕಿಯ ಸಹಾಯಕರಿಗೆ ಮಾಸಿಕ 21,400 ರಿಂದ 42,000 ರೂ. ವೇತನ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಜ್ಞಾನ ಅವಶ್ಯ. ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಆಧರಿಸಿ, ಮೀಸಲಾತಿ, ವಯಸ್ಸು ಆಧರಿಸಿ ಶಾರ್ಟ್​ಲಿಸ್ಟ್​ ಸಿದ್ಧಪಡಿಸಿ ಆಯ್ಕೆ ಮಾಡಲಾಗುವುದು.

ಸೂಚನೆ: 2020ರ ಅಧಿಸೂಚನೆಯಲ್ಲಿ ಇದ್ದಂತೆ ಹುದ್ದೆಗಳ ವರ್ಗೀಕರಣ, ಷರತ್ತುಗಳು, ಅರ್ಜಿ ಶುಲ್ಕ, ಅರ್ಜಿ ನಮೂನೆ, ವೇತನ ಶ್ರೇಣಿಗಳು ಮುಂದುವರೆಯಲಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 16.8.2021
ಶುಲ್ಕ ಪಾವತಿಸಲು ಕೊನೇ ದಿನ: 20.8.2021
ಅಧಿಸೂಚನೆ: https://bit.ly/3AfILkq
ಮಾಹಿತಿಗೆ: http://ahvs.kar.nic.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net