

ನವದೆಹಲಿ: ಮನೆಯೊಳಕ್ಕೆ ನುಗ್ಗಿದ ದರೋಡೆಕೋರರು ಮನೆಯ ಮಂದಿಗೆ ಬಂದೂಕು ತೋರಿಸಿ ದರೋಡೆ ಮಾಡಿದ್ದು, ಈ ಭಯಾನಕ ದೃಶ್ಯ ಸಿಸಿಟಿಯಲ್ಲಿ ದಾಖಲಾಗಿದೆ.
ದೆಹಲಿಯ ಉತ್ತಮ್ ನಗರ ಪ್ರದೇಶದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ನಾಲ್ವರು ದರೋಡೆಕೋರರು ತಾವು ಎಲೆಕ್ಟ್ರೀಷಿಯನ್ ಎಂದು ಪರಿಚಯಿಸಿಕೊಂಡಿದ್ದು, ಮನೆಯೊಳಕ್ಕೆ ಬಂದು ಈ ಕೃತ್ಯ ಎಸಗಿದ್ದಾರೆ. ಮನೆಯಲ್ಲಿದ್ದ ದಂಪತಿ ಹಾಗೂ ಚಿಕ್ಕ ಮಗುವಿಗೆ ಗನ್ ಪಾಯಿಂಟ್ ಇಟ್ಟು ದರೋಡೆ ಮಾಡಿದ್ದಾರೆ. ಪತಿಯ ಕೈಗೆ, ಕಾಲು ಕಟ್ಟಿಹಾಕಿದ್ದಾರೆ. ಇವೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸದ್ಯ ಯಾರನ್ನೂ ಬಂಧಿಸಿಲ್ಲ ಎನ್ನಲಾಗಿದೆ.
ಈ ಭಯಾನಕ ದೃಶ್ಯದ ವಿಡಿಯೋ ಇಲ್ಲಿದೆ ನೋಡಿ: