ಆಂಧ್ರಪ್ರದೇಶ: ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಭಾಗಿಯಾದ ಟಾಲಿವುಡ್ನ ಖ್ಯಾತ ಸಂಗೀತ ನಿರ್ದೇಶಕ ಎಸ್. ಥಮನ್ ( S Thaman) ತಮ್ಮ ಜೀವನದಲ್ಲಿ ಅನುಭವಿಸಿದ ಹಾಗೂ ಎದುರಿಸಿದ ಕೆಲವು ಬೇಸರ ಸಂಗತಿಗಳನ್ನು ಇಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ. ನಂಬಿಕೆಯಿಟ್ಟ ವ್ಯಕ್ತಿಗಳೇ ತಮಗೆ ದ್ರೋಹ ಬಗೆದ ಬಗ್ಗೆ ಮೌನ ಮುರಿದ ಥಮನ್, ಒಂದಷ್ಟು ಕುತೂಹಲಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: MB Patil | ಯಾವೆಲ್ಲಾ ವಲಯಗಳಲ್ಲಿ ಹೆಚ್ಚು ಬಂಡವಾಳ ನೀರಿಕ್ಷೆ ಮಾಡಿದ್ದೀರಿ
ಇದೆಲ್ಲಾ ತುಂಬ ನೋಡಿದ್ದೇನೆ
ತಮ್ಮ ವೃತ್ತಿಜೀವನದ ಬಗ್ಗೆ ಮನಬಿಚ್ಚಿ ಮಾತನಾಡಿದ ಥಮನ್, ನಾನೂ ಕೆಲವರನ್ನು ನಂಬಿ ಮೋಸ ಹೋಗಿದ್ದೇವೆ. ನನ್ನ ಇದುವರೆಗಿನ ಸಿನಿ ಬದುಕಿನಲ್ಲಿ ಹಲವು ವಿಷಯಗಳನ್ನು ಕಲಿತಿದ್ದೇನೆ. ನಮ್ಮ ಜೀವನದಲ್ಲಿ ನಾವು ಅನೇಕರನ್ನು ನಂಬುತ್ತೇವೆ. ಅವರ ಮೇಲೆ ಬಹಳ ನಂಬಿಕೆಯೂ ಇಡುತ್ತೇವೆ. ಆದರೆ, ಒಂದು ಹಂತದಲ್ಲಿ ನಮಗೆ ಗೊತ್ತಿಲ್ಲದಂತೆ ದೊಡ್ಡದಾಗಿ ದ್ರೋಹ ಬಗೆಯುತ್ತಾರೆ. ಇಂತಹ ಅನುಭವಗಳನ್ನು ನಾನು ತುಂಬ ನೋಡಿದ್ದೇನೆ. ಇದೊಂದೇ ವಿಷಯಕ್ಕೆ ಹೆಚ್ಚಿನ ಹಣವನ್ನು ಕಳೆದುಕೊಂಡಿದ್ದು ಉಂಟು ಎಂದು ಥಮನ್ ಬಹಿರಂಗಪಡಿಸಿದ್ದಾರೆ.
ಜೀವನ ಪಾಠ
“ನನ್ನ ವೃತ್ತಿಜೀವನ ನನಗೆ ಹಲವಾರು ಜೀವನ ಪಾಠಗಳನ್ನು ಕಲಿಸಿಕೊಟ್ಟಿದೆ. ಕೆಲವರನ್ನು ನಂಬಿ ನಾನು ಬಹಳಷ್ಟು ಹಣವನ್ನು ಈಗಾಗಲೇ ಕಳೆದುಕೊಂಡಿದ್ದೇನೆ. ಇದಕ್ಕೆ ಕಾರಣ ನಂಬಿಕೆ. ನಾನು ಅವರನ್ನು ಬಲವಾಗಿ ನಂಬಿದ್ದರಿಂದಲೇ ಇಂದು ಅವರು ನನಗೆ ಮೋಸ ಮಾಡಿದ್ದಾರೆ. ನಮ್ಮಲ್ಲಿ ಅನೇಕರಿಗೆ ಇದೇ ರೀತಿಯ ಅನುಭವಗಳಾಗಿವೆ” ಎಂದರು.
“ನನಗೆ ಬಾಲ್ಯದಿಂದಲೂ ಕ್ರಿಕೆಟ್ ಎಂದರೆ ಪ್ರಾಣ. ಕೆಲಸದಲ್ಲಿ ಒತ್ತಡ ಹೆಚ್ಚಾದಾಗ, ತಕ್ಷಣ ಮೈದಾನಕ್ಕೆ ಹೋಗುತ್ತೇನೆ. ನಮಗೆ ವಿಶೇಷ ತಂಡ ಇರಬೇಕು ಎಂದು ಸದಾ ಯೋಚಿಸುತ್ತಿದ್ದೆ. ಸ್ಟಾರ್ ಕ್ರಿಕೆಟಿಗರು ಆಡಿದ ಮೈದಾನದಲ್ಲಿ ಆಡಬೇಕೆಂಬುದು ನನ್ನ ಆಸೆಯಾಗಿತ್ತು. ಅಂತೆಯೇ ಈಗ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಭಾಗವಾಗಿರುವುದರಿಂದ ಆ ನೋವು ಮರೆಯಾಗಿದೆ” ಎಂದು ಥಮನ್ ಹೇಳಿದ್ದಾರೆ. ಇತ್ತೀಚಿಗೆ ಚಿತ್ರಮಂದಿರಗಳಲ್ಲಿ ತೆರೆಕಂಡಿರುವ ರಾಮ್ ಚರಣ್ ಅಭಿನಯದ ‘ಗೇಮ್ ಚೇಂಜರ್’ ಚಿತ್ರಕ್ಕೆ ಥಮನ್ ಅವರೇ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).