9 ವರ್ಷದ ಬಾಲಕನನ್ನು ಮದ್ವೆಯಾಗಿ ಭಾರಿ ಸುದ್ದಿ ಮಾಡಿದ್ದ ನಟಿಗಿಂದು ಹುಟ್ಟುಹಬ್ಬದ ಸಂಭ್ರಮ

tejaswi
Published on

ಮುಂಬೈ: ಪ್ರಸಿದ್ಧ ಕಿರುತೆರೆ ನಟಿ, ಬಿಗ್​ಬಾಸ್​ 15ರ ವಿಜೇತೆ ನಟಿ ತೇಜಸ್ವಿ ಪ್ರಕಾಶ್​ ಅವರಿಗೆ 29ನೇ ಹುಟ್ಟುಹಬ್ಬದ ಸಂಭ್ರಮವಿಂದು. ಈ ಸಂದರ್ಭದಲ್ಲಿ ತಮ್ಮ ಸ್ನೇಹಿತರ ಜತೆ ಈಕೆ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕೆಲ ವರ್ಷಗಳಿಂದ ಕರಣ್ ಕುಂದ್ರಾ ಎನ್ನುವವರ ಜತೆ ಡೇಟಿಂಗ್​ನಲ್ಲಿರುವ ಈ ನಟಿ, ಈ ಬಾರಿ ಬರ್ತ್​ಡೇ ಆಚರಿಸಿಕೊಳ್ಳಲು ಗೋವಾಕ್ಕೆ ತೆರಳಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಜನಪ್ರಿಯತೆ ಗಳಿಸಿದ್ದರೂ, ತೇಜಸ್ವಿ ಪ್ರಕಾಶ್​ ಎಂದಾಕ್ಷಣ ನೆನಪಿಗೆ ಬರುವುದು ಈಕೆ 9 ವರ್ಷದ ಬಾಲಕನನ್ನು ಮದುವೆಯಾಗಿದ್ದ ಘಟನೆ. ಭಾರಿ ಸುದ್ದಿ ಮಾಡಿ, ಖುದ್ದು ತೇಜಸ್ವಿ ಅವರನ್ನೇ ಮುಜುಗರಕ್ಕೆ ಸಿಲುಕಿಸಿದ್ದ ಈ ಘಟನೆ.

 2017ರಲ್ಲಿ ತೇಜಸ್ವಿ ‘ಪಹೇರ್ದಾರ್ ಪಿಯಾ ಕಿ’ ಸರಣಿಯಲ್ಲಿ ನಟಿಸಿದ್ದರು. ಈ ಸರಣಿಯಲ್ಲಿ ಅವರು 9 ವರ್ಷದ ಹುಡುಗನನ್ನು ವಿವಾಹವಾಗುವ ಪಾತ್ರದಲ್ಲಿ ನಟಿಸಿದ್ದರು. ಈ ಧಾರಾವಾರಿಯ ಬಗ್ಗೆ ಆಗ ಸಾಕಷ್ಟು ಚರ್ಚೆಯಾಗಿತ್ತು. ಸಾಕಷ್ಟು ಪರ ವಿರೋಧದ ಚರ್ಚೆ ಕೂಡ ನಡೆದಿತ್ತು.

ಅಷ್ಟಕ್ಕೂ ತೇಜಸ್ವಿ ಅವರೇನೂ ನಿಜವಾಗಿಯೂ ಬಾಲಕನನ್ನು ಮದುವೆಯಾಗಿರಲಿಲ್ಲ. ಬದಲಿಗೆ, ಪಹರೀದಾರ್​ ಪಿಯಾ ಕೀ ಧಾರಾವಾಹಿಯಲ್ಲಿ ನಟಿಸುವ ವೇಳೆ ಈಕೆ ಅದರಲ್ಲಿ 9 ವರ್ಷದ ಬಾಲಕನನ್ನು ಮದುವೆಯಾಗಬೇಕಿತ್ತು. 2017ರಲ್ಲಿ ಪ್ರಸಾರ ಆಗುತ್ತಿದ್ದ ಈ ಧಾರಾವಾಹಿಯಲ್ಲಿನ ಈ ಸನ್ನಿವೇಶ ಮಾತ್ರ ಭಾರಿ ವಿವಾದ ಸೃಷ್ಟಿಸಿತ್ತು. ಇಡೀ ಧಾರಾವಾಹಿಯ ಪರಿಕಲ್ಪನೆಯು ಟೀಕೆಗೆ ಗುರಿಯಾಯಿತು.

ಇದು ನಟನೆ ಮಾತ್ರ ಎನ್ನುವುದನ್ನೂ ತಿಳಿಯದೇ ಎಷ್ಟೋ ಮಂದಿ ತೇಜಸ್ವಿ ಅವರ ವಿರುದ್ಧ ಹರಿಹಾಯ್ದಿದ್ದರು. ಭಾರಿ ವಿವಾದದ ಹಿನ್ನೆಲೆಯಲ್ಲಿ ಧಾರಾವಾಹಿಯ ಸಮಯವನ್ನು ರಾತ್ರಿ 10.30ಕ್ಕೆ ಬದಲಾಯಿಸಲಾಗಿತ್ತು. ಮನೋಜ್ಱ ಅಭಿನಯದಿಂದ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ತೇಜಸ್ವಿ ಅವರು, ಹೆಚ್ಚು ಪ್ರಚಲಿತಕ್ಕೆ ಬಂದದ್ದು ಈ ವಿವಾದಿತ ಧಾರಾವಾಹಿಯಿಂದಾಗಿ. ವಿವಾದದ ನಡುವೆ ಭಾರಿ ಜನಪ್ರಿಯತೆ ಗಳಿಸಿದರು. ನಂತರ ಬಿಗ್​-ಬಾಸ್​ನಲ್ಲಿ ವಿನ್ನರ್​ ಆದ ಬಳಿಕ ಇವರ ಹೆಸರು ಇನ್ನಷ್ಟು ಬೆಳಕಿಗೆ ಬಂದಿದೆ. ಸದ್ಯ ನಾಗಿನ್​-6 ಧಾರಾವಾಹಿಯಲ್ಲಿ ಇವರು ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net