More

    ಪತ್ನಿಗೆ ಟಾರ್ಚರ್​ ಕೊಡ್ತಿದ್ದ- ಯುವತಿಯನ್ನು ಮಂಚಕ್ಕೆ ಕರೀತಿದ್ದ: ಅಸಲಿಯತ್ತು ಗೊತ್ತಾಗಿ ತಲೆತಿರುಗಿ ಬಿದ್ದ ಪೊಲೀಸಪ್ಪ​!

    ಇಂದೋರ್​: ಪತ್ನಿಗೆ ಟಾರ್ಚರ್​ ಕೊಡುತ್ತಾ, ಪರಿಚಯವೇ ಇಲ್ಲದ ಯುವತಿಯೊಬ್ಬಳ ಜತೆ ಚಾಟಿಂಗ್​ನಲ್ಲೇ ಮಂಚಕ್ಕೆ ಕರೆಯುತ್ತಾ ಖುಷಿ ಪಡುತ್ತಿದ್ದ ಪೊಲೀಸ್​ ಒಬ್ಬ ಅಸಲಿಯತ್ತು ಗೊತ್ತಾಗುಷ್ಟರಲ್ಲಿಯೇ ಕೋರ್ಟ್​ ಅಲೆಯುತ್ತಿರುವ ಘಟನೆ ಇಂದೋರ್‌ನ ಸುಖ್ಲಿಯಾದಲ್ಲಿ ನಡೆದಿದೆ.

    ಸತ್ಯಂ ಬೆಹ್ಲ್ ಎಂಬ ಪೊಲೀಸನ ಕಥೆಯಿದು. ಕೊನೆಗೆ ಚಾಟಿಂಗ್​ ಮಾಡುತ್ತಿದ್ದ ಯುವತಿಯ ಅಸಲಿಯತ್ತು ಗೊತ್ತಾಗಿ ತಲೆ ತಿರುಗಿ ಬಿದ್ದಿರೋ ಪೊಲೀಸಪ್ಪ, ಇದೀಗ ಪತ್ನಿ ನೀಡಿರುವ ದೂರಿನ ಮೇಲೆ ಆಕೆಗೆ ಭಾರಿ ಪ್ರಮಾಣದ ಪರಿಹಾರವನ್ನು ನೀಡಬೇಕಿದೆ.

    ಏನಿದು ಘಟನೆ?
    ಸತ್ಯಂ ಬೆಹ್ಲ್​ನ ಮದುವೆ 2019ರಲ್ಲಿ ಮನೀಶಾ ಚವಂದ್ ಎನ್ನುವವರ ಜತೆ ನಡೆದಿದೆ. ಮೊದಮೊದಲಿಗೆ ಪತ್ನಿಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ ಸತ್ಯಂ ಕೊನೆಗೆ ಆಕೆಗೆ ಟಾರ್ಚರ್​ ಕೊಡಲು ಶುರು ಮಾಡಿದನಂತೆ. ಪದೇ ಪದೇ ಜಗಳವಾಡಿ ಪತ್ನಿಯನ್ನು ಹಲವು ಗಂಟೆ ಬಾತ್ ರೂಂನಲ್ಲಿ ಬೀಗ ಹಾಕಿ ಕೂರಿಸುತ್ತಿದ್ದ. ಹೊಡೆದು ಬಡಿದು ನೆಲದ ಮೇಲೆ ಗಂಟೆಗಟ್ಟಲೆ ಮಲಗುವಂತೆ ಹೇಳುತ್ತಿದ್ದ, ವರದಕ್ಷಿಣೆಯ ರೂಪದಲ್ಲಿ ಬೈಕ್ ಕೊಡಿಸುವಂತೆ ನಿರಂತರವಾಗಿ ಪೀಡಿಸುತ್ತಿದ್ದ ಎನ್ನುವುದು ಪತ್ನಿಯ ಆರೋಪ.

    ಗಂಡನ ಹಿಂಸೆ ಹೆಚ್ಚಾಗುತ್ತಿದ್ದಂತೆಯೇ ಮನೀಶಾ ಈ ಬಗ್ಗೆ ಪಾಲಕರ ಬಳಿ ಅವಲತ್ತುಕೊಂಡಿದ್ದರು. ಮಾತ್ರವಲ್ಲದೇ ಗಂಡನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. ಇದರಿಂದ ಪತಿಯನ್ನು ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಆತನನ್ನು ಹೊರಕ್ಕೆ ಬಿಡಲಾಗಿದೆ.

    ಈ ನಡುವೆಯೇ, ಸತ್ಯಂ ಬೆಹ್ಲ್​ನ ಫೇಸ್​ಬುಕ್​ ಅಕೌಂಟ್​ಗೆ ಯುವತಿಯೊಬ್ಬಳ ಫ್ರೆಂಡ್​ ರಿಕ್ವೆಸ್ಟ್​ ಬಂದಿದೆ. ಅಲ್ಲಿರುವ ಫೋಟೋ ನೋಡಿ ಹಾಗೂ ಆಕೆಯಿನ್ನೂ ಸಿಂಗಲ್​ ಎನ್ನುವುದನ್ನು ನೋಡಿದ ಪೊಲೀಸಪ್ಪ ಆಕೆಗೆ ಮೆಸೇಜ್​ ಮಾಡಿದ್ದಾನೆ. ಆಕೆ ಕೂಡ ಅದಕ್ಕೆ ರಿಪ್ಲೈ ಮಾಡಿದ್ದಾಳೆ. ಹೀಗೆ ಇಬ್ಬರ ನಡುವೆ ಅನ್ಯೋನ್ಯತೆ ಹೆಚ್ಚಾಗಿದೆ. ಆಕೆಯ ಮೆಸೇಜ್​ಗಳಿಂದ ಮನಸೋತ ಪೊಲೀಸಪ್ಪಾ ಅವಳನ್ನು ಮಂಚಕ್ಕೆ ಕರೆದಿದ್ದಾನೆ. ತಾನೂ ಸಿಂಗಲ್​ ಎಂದು ಹೇಳಿಕೊಂಡ ಈತ ಕಿಸ್​ ಮಾಡು ಬಾ, ಸೆಕ್ಸ್​ ಮಾಡೋಣ ಬಾ ಎಂದೆಲ್ಲಾ ಮೆಸೇಜ್​ ಹಾಕಿದ್ದಾನೆ. ಅದಕ್ಕೆ ಆ ಯುವತಿ ಮೌನವಾಗಿದ್ದುಕೊಂಡು ಸಮ್ಮತಿ ನೀಡಿದ್ದಾಳೆ.

    ಇತ್ತ ಪತಿ ವಿರುದ್ಧ ಪತ್ನಿ ಸಲ್ಲಿಸಿರುವ ದೂರಿಗೆ ಸಂಬಂಧಿಸಿದ ವಿಚಾರಣೆ ಕೋರ್ಟ್​ ಮುಂದೆ ಬಂದಿದೆ. ಅಲ್ಲಿ ತನ್ನ ಗಂಡ ಆ ಯುವತಿಗೆ ಕಳುಹಿಸಿರುವ ಅಶ್ಲೀಲ ಚಾಟ್​ನ ಸ್ಕ್ರೀನ್​ಷಾಟ್​ ಕೋರ್ಟ್​ ಎದುರಿಗೆ ಇಟ್ಟಾಗ ಪೊಲೀಸಪ್ಪ ಶಾಕ್​! ಕೊನೆಗೆ ತಿಳಿದದ್ದು ಏನೆಂದರೆ ಆ ಯುವತಿ ಬೇರೆ ಯಾರೂ ಅಲ್ಲ, ಗಂಡನಿಗೆ ಬುದ್ಧಿ ಕಲಿಸಲು ಹೆಂಡತಿಯೇ ಬೇರೊಂದು ಫೋಟೋ ಹಾಕಿಕೊಂಡು ಗಂಡನಿಗೆ ಬೇರೊಂದು ಹೆಸರಿನಲ್ಲಿ ಫ್ರೆಂಡ್​ ರಿಕ್ವೆಸ್ಟ್​ ಕಳುಹಿಸಿ ಚಾಟ್​ ಮಾಡುತ್ತಿದ್ದಳೆಂದು! ಪೊಲೀಸ್​ನಿಗೆ ತಲೆ ತಿರುಗಿ ಹೋಗಿದೆ.

    ತನಗೆ ಗಂಡ ನೀಡುತ್ತಿದ್ದ ಟಾರ್ಚರ್​ ಹಾಗೂ ಈ ಮೆಸೇಜ್​ ಎಲ್ಲವನ್ನೂ ಪತ್ನಿ ಕೋರ್ಟ್​ ಮುಂದೆ ಇಟ್ಟಿದ್ದಾಳೆ. ಗಂಡನ ವಿರುದ್ಧ ಇವುಗಳನ್ನು ಸಾಕ್ಷ್ಯವಾಗಿ ಪರಿಗಣಿಸುವುದಾಗಿ ನ್ಯಾಯಾಧೀಶರು ಹೇಳಿದ್ದಾರೆ.

    ಸದ್ಯ ವಿಚಾರಣೆ ನಡೆಯುತ್ತಿದೆ. ಪತ್ನಿಗೆ ತಾತ್ಕಾಲಿಕವಾಗಿ ಆಹಾರದ ವೆಚ್ಚವಾಗಿ 2 ಲಕ್ಷ ರೂ., ಹಾಗೂ ಜೀವನಾಂಶಕ್ಕಾಗಿ ಪ್ರತಿ ತಿಂಗಳು 7 ಸಾವಿರ ರೂ.ಗಳನ್ನು ನೀಡುವಂತೆ ಪತಿಗೆ ಕೋರ್ಟ್​ ಆದೇಶಿಸಿದೆ.

    ಅಬ್ಬಾ! ಇಂಥ ಸುಂದ್ರಿ ನನಗೆ ಸಿಕ್ಕಳಾ ಎಂದುಕೊಳ್ಳುವ ಹುಡುಗರೇ ಹುಷಾರ್​: ಈ ಏಳನೇ ಗಂಡನ ಕಥೆ ಕೇಳಿ….

    ಅತಿಯಾದ ವಯಾಗ್ರ ಸೇವಿಸಿ ನವವಿವಾಹಿತನ ಗೋಳಾಟ: ಜೀವನಪೂರ್ತಿ ಇದೇ ಗತಿಯೆಂದ ವೈದ್ಯರು!

    ಅವಮಾನ ಆಯ್ತೆಂದು ಕೋರ್ಟ್‌ ತುಂಬ ಜಿರಳೆ ಬಿಟ್ಟ- ಅಲ್ಲೋಲ ಕಲ್ಲೋಲ: ಮುಚ್ಚಿದ ನ್ಯಾಯಾಲಯದ ಬಾಗಿಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts