More

    ಅಬ್ಬಾ! ಇಂಥ ಸುಂದ್ರಿ ನನಗೆ ಸಿಕ್ಕಳಾ ಎಂದುಕೊಳ್ಳುವ ಹುಡುಗರೇ ಹುಷಾರ್​: ಈ ಏಳನೇ ಗಂಡನ ಕಥೆ ಕೇಳಿ….

    ಬಲ್ಲಭಗಢ (ಹರಿಯಾಣ): ಆನ್​ಲೈನ್​ನಲ್ಲಿ ಚಾಟ್​ ಮಾಡುವಾಗ ಹುಡುಗಿಯರನ್ನು ನೋಡಿ, ಅವರ ಸೌಂದರ್ಯವನ್ನು ನೋಡಿ, ಅವರಾಡುವ ಮಾತುಗಳನ್ನು ಕೇಳಿ ಸ್ವರ್ಗಕ್ಕೆ ಮೂರೇ ಗೇಣು ಎಂದುಕೊಳ್ಳುವ ಯುವಕರೇ ಎಚ್ಚರ ಎಚ್ಚರ! ಇದಾಗಲೇ ಹನಿಟ್ರ್ಯಾಪ್​ಗಳ ಬಗ್ಗೆ ಸಾಕಷ್ಟು ಕೇಳಿರುತ್ತೀರಾ, ಆದರೆ ಯುವತಿಯ ಬಣ್ಣಬಣ್ಣದ ಮಾತುಗಳಿಗೆ ಮರುಳಾಗಿ ಇವಳು ತನಗೊಬ್ಬನಿಗೇ ಸಿಕ್ಕವಳೆಂದು ತಿಳಿದುಕೊಂಡರೆ ನಿಮ್ಮಷ್ಟು ಮೂರ್ಖರು ಮತ್ತೊಬ್ಬರಿಲ್ಲ!

    ಹೀಗೆ ಆನ್​ಲೈನ್​ ಡೇಟಿಂಗ್​ ಆ್ಯಪ್​ನಲ್ಲಿ ಸಿಕ್ಕಾಕೆಯನ್ನು ಮದುವೆಯಾದ ಶಿಕ್ಷಕನೊಬ್ಬ ತಾನು ಆಕೆಗೆ ಏಳನೇ ಗಂಡ ಎಂದು ತಿಳಿಯುವಷ್ಟರಲ್ಲಿ ಎಲ್ಲಾ ಕಳೆದುಕೊಂಡು ಈಗ ಪೊಲೀಸ್​ ಠಾಣೆ ಅಲೆದಾಡುವ ಸ್ಥಿತಿ ತಲುಪಿದ್ದಾರೆ.

    ಏನಿದು ಘಟನೆ? ಹರಿಯಾಣದ ಬಲ್ಲಭಗಢದ ಶಿಕ್ಷಕ ಅಜಯ್ ಕುಮಾರ್ ಅವರು ಡೇಟಿಂಗ್​ ಆ್ಯಪ್​ನಲ್ಲಿ ಯುವತಿಗಾಗಿ ಹುಡುಕಾಟ ನಡೆಸಿದ್ದರು. ಆಗ ಇವರ ಕಣ್ಣಿಗೆ ಕಂಡದ್ದು ಓರ್ವ ಸುಂದರಿ. ಇಂಥವರು ಬರುವುದನ್ನೇ ಕಾಯುತ್ತಿದ್ದ ಈ ಮಾಯಾಂಗನೆ ತನ್ನನ್ನು ತಾನು ಕಾಜಲ್ ಗುಪ್ತಾ ಎಂದು ಪರಿಚಯಿಸಿಕೊಂಡಳು.

    ಅದು 2020ರ ಅವಧಿ. ಕರೊನಾದಿಂದ ಎಲ್ಲೆಡೆ ಲಾಕ್​ಡೌನ್​ ಆಗಿದ್ದ ವೇಳೆ. ಅದಕ್ಕಾಗಿ ಇವರು ಮುಖತಃ ಪರಿಚಯವಾಗಿರಲಿಲ್ಲ. ನಾಲ್ಕಾರು ತಿಂಗಳು ಮೆಸೇಜ್​, ಚಾಟಿಂಗ್​ನಲ್ಲಿಯೇ ಕಾಲ ಕಳೆದರು. ನಂತರ ಅಜಯ್​ ಅವರನ್ನು ತನ್ನ ಮಾತಿನಿಂದ ಮರಳು ಮಾಡಿದ ಈಕೆ, ಅವರನ್ನು ಮದುವೆಯಾಗುವುದಾಗಿ ಹೇಳಿದಳು. ಅದಾಗಲೇ ಆಕೆಯ ಮಾತಿನಿಂದ ಸಂಪೂರ್ಣವಾಗಿ ಕರಗಿ ಹೋಗಿದ್ದ ಅಜಯ್​ ಅವರು ಮದುವೆಗೆ ಒಪ್ಪಿಕೊಂಡರು.

    2020ರ ಆಗಸ್ಟ್​ನಲ್ಲಿ ಮದುವೆಯೂ ಆಯಿತು. ನಂತರ ಪತ್ನಿಯ ಇಚ್ಛೆಯಂತೆ ದೆಹಲಿಯ ಲಕ್ಷ್ಮಿ ನಗರದಲ್ಲಿ ಬಾಡಿಗೆ ಮನೆ ತೆಗೆದುಕೊಂಡರು. ದುಬಾರಿ ಬಾಡಿಗೆ ಮಾತ್ರವಲ್ಲದೇ ಆಕೆಯ ಇಚ್ಛೆಯಂತೆ ದುಬಾರಿ ಬಟ್ಟೆ, ಆಭರಣ, ಪೀಠೋಪಕರಣ ಎಲ್ಲಾ ತಂದರು.

    ಇದಾಗಲೇ ಕಾಜಲ್​ ತಾನು ಬ್ಯೂಟಿ ಪಾರ್ಲರ್ ತೆಗೆಯಬೇಕಿದೆ ಎಂದು ಗಂಡನಿಂದ ಹಣ ಕೇಳಿದಳು. ಅವಳಿಗೆ ಸಂಪೂರ್ಣ ಸೋತು ಹೋಗಿದ್ದ ಈ ಶಿಕ್ಷಕ, ಬ್ಯಾಂಕ್​ನಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿ, ಹಣವನ್ನು ಪತ್ನಿಗೆ ಕೊಟ್ಟರು. ಇದ್ದಕ್ಕಿಂತೆಯೇ ಈಕೆ ನಾಪತ್ತೆ! ಮನೆಯಲ್ಲಿದ್ದ ಚಿನ್ನಾಭರಣ, ಬೆಲೆ ಬಾಳುವ ವಸ್ತು ಎಲ್ಲವೂ ಮಾಯ, ಅದಾಗಲೇ ಗೊತ್ತಾದದ್ದು ಅಜಯ್​ ಕುಮಾರ್​ ಅವರಿಗೆ ತಾನು ಮೋಸ ಹೋಗಿದೆನೆಂದು. ನಂತರ ಪತ್ನಿಯ ಬಗ್ಗೆ ತನಿಖೆ ಶುರು ಮಾಡಿದಾಗ ಗೊತ್ತಾಯ್ತು ಆಕೆಗೆ ತಾನು ಏಳನೆಯ ಗಂಡನೆಂದು!

    ತನ್ನ ಹಾಗೆ ಶ್ರೀಮಂತ ಹುಡುಗರನ್ನು ಆನ್​ಲೈನ್​ನಲ್ಲಿ ಬಲೆಗೆ ಬೀಳಿಸಿ, ಅವರನ್ನು ಮದುವೆಯಾಗಿ ಚಿನ್ನಾಭರಣ, ಹಣದ ಜತೆ ಪರಾರಿಯಾಗುತ್ತಾಳೆ ಎನ್ನುವ ಸತ್ಯ ತಿಳಿಯುತ್ತಲೇ ಅಜಯ್​ ಅವರ ನೆಲವೇ ಕುಸಿದುಹೋದ ಅನುಭವ. ಕೂಡಲೇ ಅವರು ದೆಹಲಿಯಿಂದ ಹರಿಯಾಣ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದರು. ಆದರೆ ಪೊಲೀಸರು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಅಜಯ್​ ಆರೋಪಿಸಿದ್ದಾರೆ.

    ಬ್ಯಾಂಕ್​ನಿಂದ ಪತ್ನಿಗಾಗಿ ಮಾಡಿದ ಸಾಲಕ್ಕೆ ಬಡ್ಡಿ ಏರಿಕೆಯಾಗಿದ್ದು, ನೋಟಿಸ್​ ಬರುತ್ತಿದೆ. ಇನ್ನೊಂದೆಡೆ ಪೊಲೀಸರು ಏನೂ ಮಾಡುತ್ತಿಲ್ಲ ಎನ್ನುವ ಅಸಹಾಯಕತೆ. ತನ್ನ ಶಿಕ್ಷಕ ವೃತ್ತಿ ಬದಿಗಿಟ್ಟು ಪತ್ನಿಯ ವಿರುದ್ಧ ಸಾಕ್ಷ್ಯ ಸಂಗ್ರಹಿಸುವ ಕಾರ್ಯದಲ್ಲಿ ಇವರು ತೊಡಗಿದ್ದು, ಸಿಕ್ಕಿರುವ ಸಾಕ್ಷ್ಯಾಧಾರಗಳನ್ನು ಪೊಲೀಸರಿಗೆ ಕೊಟ್ಟಿದ್ದಾರೆ.

    ತಮ್ಮಿಂದ ಲೂಟಿ ಮಾಡಿದ ವಸ್ತುಗಳು ಮತ್ತು ಹಣವನ್ನು ಮರಳಿ ನೀಡಬೇಕು ಮತ್ತು ಮೂಲಕ ಹುಡುಗರನ್ನು ಬಲೆಗೆ ಬೀಳಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಅಂತಾ ಅಜಯ್ ಕುಮಾರ್​ ಆಗ್ರಹಿಸಿದ್ದಾರೆ.

    ಲವರ್‌ಗಾಗಿ ಜೀವ ಬೇಕಾದ್ರೂ ಕೊಡೋಕೆ ರೆಡಿ ಇದ್ದೀರಾ? ನಿಮಗೂ ಹೀಗೆಯೇ ಆಗ್ಬೋದು ಹುಷಾರ್‌..!

    ಅವಮಾನ ಆಯ್ತೆಂದು ಕೋರ್ಟ್‌ ತುಂಬ ಜಿರಳೆ ಬಿಟ್ಟ- ಅಲ್ಲೋಲ ಕಲ್ಲೋಲ: ಮುಚ್ಚಿದ ನ್ಯಾಯಾಲಯದ ಬಾಗಿಲು!

    ಕೊಲೆಗೆ ಹೊಸಪೇಟೆಯ ಕಾನ್ಸ್‌ಟೆಬಲ್‌ ಕೊಟ್ಟ ಸುಪಾರಿ- ಹತ್ಯೆ ಮಾಡಲು ಹೆದರಿದವ ಬಿಟ್ಟ ಬಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts