

ಹೊಸಪೇಟೆ: ಕರೊನಾ ವೈರಸ್ ಹಾಗೂ ಲಾಕ್ಡೌನ್ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡವರು ಅದೆಷ್ಟೋ ಮಂದಿ. ಇಂಥವರಲ್ಲಿ ಒಬ್ಬರು ಪ್ರವಾಸಿ ತಾಣಗಳಲ್ಲಿ ಟೂರಿಸ್ಟ್ ಗೈಡ್ಸ್ಗಳಾಗಿ ಸೇವೆ ಸಲ್ಲಿಸುತ್ತಿರುವವರು.
ಹಂಪಿಯ ವಿವಿಧ ದೇಗುಲಗಳಿಗೆ ಭೇಟಿ ಕೊಡುವ ಪ್ರವಾಸಿಗರಿಗೆ ಗೈಡ್ಸ್ಗಳಾಗಿ ಸೇವೆ ಸಲ್ಲಿಸುವವರು ಇದೀಗ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಇಂಥ 100 ಮಂದಿ ಗೈಡ್ಸ್ಗಳ ನೆರವಿಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ನೆರವಿಗೆ ಧಾವಿಸಿದ್ದಾರೆ.
ನೂರು ಮಂದಿ ಗೈಡ್ಗಳಿಗೆ ತಲಾ 10 ಸಾವಿರ ರೂಪಾಯಿ ನೀಡಿರುವ ಅವರು, ನೇರವಾಗಿ ಗೈಡ್ಗಳ ಖಾತೆಗೆ ಹಣ ಜಮೆ ಮಾಡಿದ್ದಾರೆ. ಪ್ರವಾಸಿಗರು ಇಲ್ಲದೇ ಸಂಕಷ್ಟಕ್ಕೆ ಸಿಲುಕಿರುವ ತಮಗೆ ಆಸರೆಯಾಗುವಂತೆ ಗೈಡ್ಸ್ಗಳು ಸುಧಾ ಮೂರ್ತಿಯವರಿಗೆ ಮನವಿ ಸಲ್ಲಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆಯೇ ಸುಧಾ ಮೂರ್ತಿ ಅವರ ನೆರವಿಗೆ ಧಾವಿಸಿದ್ದಾರೆ.