ಕೋವಿಡ್‌ ಸಂಕಷ್ಟಕ್ಕೆ ಮತ್ತೊಮ್ಮೆ ಧಾವಿಸಿದ ಇನ್‌ಫೋಸಿಸ್‌- 100 ಕೋಟಿ ರೂ. ಬಿಡುಗಡೆಗೆ ಆದೇಶ

infosys
Published on

ನವದೆಹಲಿ: ಇನ್‌ಫೋಸಿಸ್‌ ಪ್ರತಿಷ್ಠಾನ ಮತ್ತೆ ಔದಾರ್ಯ ಮೆರೆದಿದೆ. ಕಳೆದ ವರ್ಷದ ಕರೊನಾ ಬಿಕ್ಕಟ್ಟಿನ ಸಮಯದಲ್ಲಿ 100 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದ ಇನ್ಫೋಸಿಸ್ ಫೌಂಡೇಶನ್ ಇದೀಗ ಈ ವರ್ಷವೂ ಮತ್ತೆ 100 ಕೋಟಿ ರೂಪಾಯಿ ಬಿಡುಗಡೆ ಮಾಡಲಿದೆ.

ಈ ಕುರಿತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರು ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಬೆಂಗಳೂರಿನಲ್ಲಿ ಕೋವಿಡ್ ಆಸ್ಪತ್ರೆಗಾಗಿ 100 ಕೋಟಿ ರೂ. ನೀಡಿದ್ದ ಇನ್ಫೋಸಿಸ್ ಫೌಂಡೇಶನ್ ನೀಡಿತ್ತು. ಈ ವರ್ಷ ಪುನಃ 100 ಕೋಟಿ ರೂಪಾಯಿ ನೀಡುವುದರೊಂದಿಗೆ 200 ಕೋಟಿ ರೂಪಾಯಿ ಫೌಂಡೇಷನ್‌ ವತಿಯಿಂದ ಬಿಡುಗಡೆ ಮಾಡಿದಂತಾಗಿದೆ ಎಂದರು.

ವೆಂಟಿಲೇಟರ್, ಆಕ್ಸಿಜನ್ ಯಂತ್ರ ಪೂರೈಕೆಗೆ ಬಳಕೆ, ಮೂಲಸೌಕರ್ಯ ಬಳಕೆಗೆ 100 ಕೋಟಿ ರೂಪಾಯಿ ನೀಡುವುದಾಗಿ ಸುಧಾಮೂರ್ತಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net