More

    ಸಮಾಜಮುಖಿ ಕಾರ್ಯಗಳಿಗೆ ನೆರವು ನೀಡಿ; ಎಸ್.ಎಸ್. ಪವಾರ

    ರಾಣೆಬೆನ್ನೂರ: ನಮ್ಮ ದುಡಿಮೆಯಲ್ಲಿ ಸಮಾಜಮುಖಿ ಕಾರ್ಯಗಳಿಗೆ ಕೈಲಾದ ನೆರವು ನೀಡುವ ಮೂಲಕ ಸಮಾಜದ ಋಣ ತೀರಿಸಬೇಕು ಎಂದು ನಗರದ ಮುಕ್ತಿಧಾಮ ಟ್ರಸ್ಟ್‌ನ ಖಜಾಂಚಿ ಡಾ. ಎಸ್.ಎಲ್. ಪವಾರ ಹೇಳಿದರು.
    ನಗರದ ಮೆಡ್ಲೇರಿ ರಸ್ತೆಯ ಆದಿಶಕ್ತಿ ದೇವಸ್ಥಾನದ ಸಭಾಭವನದಲ್ಲಿ ಮುಕ್ತಿಧಾಮ ಟ್ರಸ್ಟ್ ವತಿಯಿಂದ ಬುಧವಾರ ಏರ್ಪಡಿಸಿದ್ದ ಮುಕ್ತಿಧಾಮಕ್ಕೆ ಧನ ಸಹಾಯ ಮಾಡಿದ ದಾನಿಗಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
    2003ರಲ್ಲಿ ಲೋಕಾರ್ಪಣೆಯಾದ ಮುಕ್ತಿಧಾಮವು ಲಾಭ ನಷ್ಟ ರಹಿತ ಆಧಾರದ ಮೇಲೆ ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತ ಈವರೆಗೆ ಬೆಳೆದು ಬಂದಿದೆ. ಜನತೆಯ ಅನುಕೂಲಕ್ಕಾಗಿ ಇನ್ನೂ ಹಲವಾರು ಕೆಲಸಗಳನ್ನು ಮಾಡಬೇಕಾಗಿದೆ. ಇದಕ್ಕೆ ಜನರ ಸಹಕಾರ ಬಹುಮುಖ್ಯವಾಗಿದೆ ಎಂದರು.
    ಧನ ಸಹಾಯ ಮಾಡಿದ ಡಾ. ಎಂ.ಎಂ. ಅನಂತ ರಡ್ಡಿ, ಕರಬಸಪ್ಪ ಪಾಸ್ತೆ, ಪರಶುರಾಮ ರೋಖಡೆ, ಎಂ.ಕೆ. ಮೆಹರವಾಡೆ, ಎಸ್‌ಎಸ್‌ಕೆ ಸಮಾಜದ ಶಿವಾನಂದ ಮೆಹರವಾಡೆ, ಎನ್.ಎನ್. ಭೂತೆ, ಚಂದ್ರಶೇಖರ ಶೆಟ್ಟಿ, ಪಾಂಡಪ್ಪ ತಾಂಬೆ, ಸುಭಾಸ ಭೂತೆ, ಅಶೋಕ ಪೂಜಾರಿ, ಪ್ರೇಮನಾಥ ಅವರನ್ನು ಸನ್ಮಾನಿಸಲಾಯಿತು.
    ಟ್ರಸ್ಟ್‌ನ ಗೌರವಾಧ್ಯಕ್ಷ ಡಾ. ಬಿ.ಎಸ್. ಕರಜಗಿ, ಕಾರ್ಯಾಧ್ಯಕ್ಷ ವಾಲಜಿಭಾಯಿ ಪಟೇಲ, ಕಾರ್ಯದರ್ಶಿ ಕೆ.ವಿ. ಶ್ರೀನಿವಾಸ, ಟ್ರಸ್ಟಿಗಳಾದ ಅಮರನಾಥ ಭೂತೆ, ರೋಹಿತ್ ಅಗರವಾಲ್, ವಿಷ್ಣು ಜಿಂಗಾಡೆ, ಶ್ರೀನಿವಾಸ ಗುಪ್ತಾ, ಪ್ರಕಾಶ ಜೈನ, ಪರಶುರಾಮ ಮಾಳೋದೆ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts