More

    ಪ್ಯಾರಾ ಏಷ್ಯಾಡ್ ಕ್ರೀಡಾಕೂಟದಲ್ಲಿ ಪದಕ ವಿಜೇತರಿಗೆ ಸನ್ಮಾನ

    ಚಿಕ್ಕಮಗಳೂರು: ದೇಶದ ವಿವಿಧ ರಾಜ್ಯಗಳಲ್ಲಿ ಆ ರಾಜ್ಯದ ಕ್ರೀಡಾಪಟುಗಳು ಪ್ಯಾರಾ ಏಷ್ಯಾಡ್‌ನಲ್ಲಿ ವಿಜೇತರಾಗಿ ಪದಕಗಳಿಸಿ ಬಂದಾಗ ಅವರಿಗೆ ಅಭೂತಪೂರ್ವ ಸ್ವಾಗತ ನೀಡಿ ಗೌರವಿಸುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಇದಾವುದೂ ನಡೆಯದೆ ಕ್ರೀಡಾಪಟುಗಳಿಗೆ ಅವಮಾನ ಮಾಡಲಾಗಿದೆ ಎಂದು ಆಶಾಕಿರಣ ಅಂಧಮಕ್ಕಳ ಪಾಠಶಾಲೆಯ ಅಧ್ಯಕ್ಷ ಹಾಗೂ ಮಕ್ಕಳ ವೈದ್ಯ ಡಾ. ಜೆ.ಪಿ.ಕೃಷ್ಣೇಗೌಡ ಆರೋಪಿಸಿದರು.

    ನಗರದ ಲೈಫ್‌ಲೈನ್ ಸಂಸ್ಥೆಯಿಂದ ಪ್ಯಾರಾ ಏಷ್ಯಾಡ್ ಕ್ರೀಡಾಕೂಟದಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಪದಕ ವಿಜೇತರಿಗೆ ಸಾರ್ವಜನಿಕರಿಂದ ವಂತಿಕೆ ಸಂಗ್ರಹಿಸಿ ಗೌರವ ಸಮರ್ಪಣೆ ಮಾಡಿದ್ದೇವೆ. ರಾಜ್ಯ ಸರ್ಕಾರ ಈವರೆಗೆ ಇವರಿಗೆ ಯಾವುದೇ ರೀತಿ ಗೌರವ, ಸನ್ಮಾನ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಪ್ಯಾರಾ ಏಷ್ಯಾಡ್ ಕ್ರೀಡಾಕೂಟದಲ್ಲಿ ಪದಕ ವಿಜೇತರಾಗಿರುವ ಕ್ರೀಡಾಪಟುಗಳು ಒಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಬೇಕೆಂಬ ಕನಸು ಕಂಡಿದ್ದಾರೆ. ಅವರ ಕನಸು ನನಸಾಗಿ ಅಲ್ಲಿಯೂ ಅವರು ಪದಕ ಗೆಲ್ಲುವಂತಾಗಲಿ ಎಂದು ಹಾರೈಸಿದ ಅವರು, ಈ ಕ್ರೀಡಾಪಟುಗಳ ಸಂಪೂರ್ಣ ಖರ್ಚು ವೆಚ್ಚವನ್ನು ಲೈಫ್ ಲೈನ್ ಸಂಸ್ಥೆಯ ಕಿಶೋರ್ ಕುಮಾರ್ ಹೆಗ್ಡೆ ಅವರು ಭರಿಸುವ ಮೂಲಕ ಕ್ರೀಡಾಪಟುಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಶ್ಲಾಘಿಸಿದರು.
    ಲೈಫ್‌ಲೈನ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಕುಮಾರ್ ಹೆಗ್ಡೆ ಮಾತನಾಡಿ, ನಾಲ್ವರು ಕ್ರೀಡಾಪಟುಗಳ ಸಾಧನೆ ಅವಿಸ್ಮರಣೀಯ. ಈ ಕ್ರೀಡಾಪಟುಗಳ ಸಂಪೂರ್ಣ ಖರ್ಚು ವೆಚ್ಚವನ್ನು ನಮ್ಮ ಸಂಸ್ಥೆವತಿಯಿಂದ ನೋಡಿಕೊಳ್ಳುತ್ತೇವೆ. ಆದಾಯ ತೆರಿಗೆ ಅಧಿಕಾರಿಗಳು ಇದನ್ನು ಖರ್ಚುವೆಚ್ಚ ಎಂದು ತೀರ್ಮಾನಿಸಿದರೆ ತೊಂದರೆ ಇಲ್ಲ. ಆದರೆ ದೇಣಿಗೆ ಎಂದು ಪರಿಗಣಿಸಿದರೆ ೧ ಲಕ್ಷ ರೂಪಾಯಿಗೆ ೩೫ ಸಾವಿರ ರೂ. ತೆರಿಗೆ ಪಾವತಿಸಬೇಕೆಂಬ ನಿಯಮವಿದೆ ಎಂದು ತಿಳಿಸಿದರು.
    ಅನವಶ್ಯಕ ಖರ್ಚುಗಳಿಗೆ ಕಡಿವಾಣಾ ಹಾಕಿ ಈ ರೀತಿಯ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವುದು ಬಹಳ ಮುಖ್ಯ ಎಂದು ಭಾವಿಸಿದ್ದೇನೆ. ಆರ್ಥಿಕ ವ್ಯವಸ್ಥೆ ಸುಗಮವಾದಾಗ ಮಾತ್ರ ಆ ಕುಟುಂಬ ಚೆನ್ನಾಗಿರುತ್ತದೆ. ಇಲ್ಲವಾದರೆ ಹೊಡೆದಾಟ, ಬಡಿದಾಟ ಪ್ರಾರಂಭವಾಗುತ್ತದೆ. ಕೆಲವು ದೇಶಗಳಲ್ಲಿ ಇಂದು ನಾವು ಅಸ್ಥಿರತೆ ಕಾಣುತ್ತಿದ್ದೇವೆ. ನಾವು ಹೆಚ್ಚು ತೆರಿಗೆ ಪಾವತಿಸಿದಾಗ ದೇಶ ಸುಸ್ತಿರವಾಗಿರುತ್ತದೆ ಇದರಿಂದ ಆಸ್ಪತ್ರೆ, ರಸ್ತೆ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತದೆ ಎಂದರು.
    ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳ ತರಬೇತುದಾರ ಗಿರೀಶ್, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts