More

    ಲಯನ್ಸ್ ನಿಸ್ವಾರ್ಥ ಸೇವೆ ಅನುಕರಣೀಯ

    ಸಾಗರ: ಫಲಾಪೇಕ್ಷೆ ಇಲ್ಲದೆ ಸಾಮಾಜಿಕ ಸೇವೆ ಮಾಡುತ್ತಿರುವ ಲಯನ್ಸ್ ಕಾರ್ಯವೈಖರಿ ಅನುಕರಣೀಯ. ಸ್ವಾರ್ಥವಿಲ್ಲದ ಸೇವೆ, ಪ್ರಚಾರವಿಲ್ಲದ ದಾನ ಶ್ರೇಷ್ಠ ಎಂದು ಸಾಹಿತಿ ಡಾ. ನಾ.ಡಿಸೋಜ ಹೇಳಿದರು.
    ಸಾಗರದ ಲಯನ್ಸ್ ಸಂಸ್ಥೆಯಿಂದ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಸಾಮಾಜಿಕ ಸೇವೆಗೆ ನೀಡಲಾಗುವ ಸನ್ಮಾನ ಸ್ವೀಕರಿಸಿ ಮಾತನಾಡಿ, ಲಯನ್ಸ್ ಸಂಸ್ಥೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಸಂಸ್ಥೆಯ ಸಾಮಾಜಿಕ, ಪರಿಸರ, ಆರೋಗ್ಯ ಶಿಬಿರ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದೇನೆ ಎಂದರು.
    ಅಮೆರಿಕದ ವ್ಯಕ್ತಿಯೊಬ್ಬರು ಹುಟ್ಟು ಹಾಕಿದ ಲಯನ್ಸ್ ಸಂಸ್ಥೆ ಪ್ರಸ್ತುತ ದೇಶದೆಲ್ಲೆಡೆ ಕಾರ್ಯನಿರ್ವಹಿಸುತ್ತ ಜನಮೆಚ್ಚುಗೆ ಪಡೆದಿದೆ. ಸಂಸ್ಥೆ ನನ್ನನ್ನು ಗೌರವಿಸಿದ್ದು ಸಂತಸ ತಂದಿದೆ ಎಂದು ಹೇಳಿದರು.
    ಲಯನ್ಸ್ ಸಂಸ್ಥೆ ಸ್ಥಳೀಯ ಶಾಖೆ ಅಧ್ಯಕ್ಷೆ ಪ್ರಭಾವತಿ ಶ್ರೀಧರ್ ಮಾತನಾಡಿ, ಲಯನ್ಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಸೇವಾ ಕಾರ್ಯ ಮಾಡುತ್ತಿದೆಯೋ, ಸ್ಥಳೀಯವಾಗಿಯೂ ಅಂಥದ್ದೇ ಸೇವೆಗಳ ಮೂಲಕ ಜನರ ನಡುವೆ ಒಂದಾಗಿ ಸಾಗುತ್ತಿದೆ. ಸಂಸ್ಥೆಯಿಂದ ಇನ್ನಷ್ಟು ಸಾಮಾಜಿಕ, ಶೈಕ್ಷಣಿಕ, ಪರಿಸರ, ಆರೋಗ್ಯ ಶಿಬಿರ ಹಮ್ಮಿಕೊಳ್ಳುವ ಉದ್ದೇಶವಿದೆ ಎಂದು ಹೇಳಿದರು. ಜಿಲ್ಲಾ ಗೌರ್ನರ್ ಡಾ. ನೇರಿ ಕರ್ನಲಿಯೋ, ಒಪಿಲಿಯಾ ಕರ್ನಲಿಯೋ, ಸವಿತಾ ಮಹಾಬಲೇಶ್ವರ್, ಟಿ.ಬಿ.ಮಂಜುನಾಥ ಶೆಟ್ಟಿ, ಸರೋಜಾ ಶೆಟ್ಟಿ, ಈಳಿ ಶ್ರೀಧರ್, ಡಾ. ಟಿ.ಪ್ರಸನ್ನ, ನವೀನ್ ಇತರರಿದ್ದರು. ಇದಕ್ಕೂ ಮೊದಲು ಮುಂಗರವಳ್ಳಿಯ ಚೈತನ್ಯ ವಿಶೇಷ ಶಿಕ್ಷಣ ಶಾಲಾ ಮಕ್ಕಳಿಗೆ ಸಂಸ್ಥೆಯಿಂದ ಆರ್ಥಿಕ ನೆರವು ನೀಡಲಾಯಿತು. ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts