More

    ಐಪಿಎಲ್​ನಲ್ಲಿ ಅಟ್ಟರ್​ ಫ್ಲಾಪ್​ ಆದ್ರೂ ಟಿ20 ವಿಶ್ವಕಪ್​ಗೆ​ ಉಪನಾಯಕ! ಹಾರ್ದಿಕ್​ ಆಯ್ಕೆ ಹಿಂದಿದೆ ಈ ಕಾರಣ

    ನವದೆಹಲಿ: ಮುಂಬರುವ ಟಿ20 ವಿಶ್ವಕಪ್ ಟೂರ್ನಿಗಾಗಿ ಟೀಮ್​ ಇಂಡಿಯಾ ತಂಡ ನಿನ್ನೆಯಷ್ಟೇ (ಏಪ್ರಿಲ್​ 30) ಪ್ರಕಟವಾಗಿದೆ. ಬಹುತೇಕ ಸ್ಟಾರ್​ ಆಟಗಾರರ ಜತೆಗೆ ಯುವ ಆಟಗಾರರು ಕೂಡ ಟೀಮ್​ ಇಂಡಿಯಾದಲ್ಲಿದ್ದಾರೆ. ಆದರೆ, ಅಚ್ಚರಿಯ ಸಂಗತಿ ಏನೆಂದರೆ ಹಾರ್ದಿಕ್ ಪಾಂಡ್ಯ ಅವರನ್ನು ತಂಡದ ಉಪನಾಯಕನನ್ನಾಗಿ ಮಾಡಿರುವುದು.

    ಹಾರ್ದಿಕ್ ಆಯ್ಕೆ ಮತ್ತು ಉಪನಾಯಕತ್ವದ ವಿಷಯ ಈಗ ಹಾಟ್ ಟಾಪಿಕ್ ಆಗಿದೆ. ಈ ಬಾರಿಯ ಐಪಿಎಲ್‌ನಲ್ಲಿ ಹಾರ್ದಿಕ್ 9 ಪಂದ್ಯಗಳಲ್ಲಿ 197 ರನ್ ಗಳಿಸಿ ಕೇವಲ 4 ವಿಕೆಟ್ ಪಡೆದಿದ್ದಾರೆ. ಐಪಿಎಲ್​ನಲ್ಲಿ ಸಂಪೂರ್ಣ ವಿಫಲವಾಗಿದ್ದರೂ ಹಾರ್ದಿಕ್​ಗೆ ಅವಕಾಶ ನೀಡಿರುವುದು ಕ್ರೀಡಾಭಿಮಾನಿಗಳಲ್ಲಿ ಅಚ್ಚರಿಯನ್ನು ಉಂಟು ಮಾಡಿದೆ. ಅಲ್ಲದೆ, ಹಾರ್ದಿಕ್​ ಬೇಡ, ಅವರ ಸ್ಥಾನಕ್ಕೆ ಬೇರೆ ಯುವಕರಿಗೆ ಅವಕಾಶ ಕೊಡಬೇಕು ಎಂಬ ಬೇಡಿಕೆಗಳು ಕೇಳಿಬರುತ್ತಿವೆ.

    ಬಿಸಿಸಿಐ ಆಯ್ಕೆ ಮಂಡಳಿಯು ಈ ರೀತಿ ಏಕೆ ಮಾಡಿತು? ಬಿಸಿಸಿಐ ನಾಯಕರಿಗೆ ಏನಾಯಿತು? ಹಾರ್ದಿಕ್​ಗೆ ಯಾಕೆ ಇಷ್ಟು ದೊಡ್ಡ ಜವಾಬ್ದಾರಿ ನೀಡುತ್ತಿದ್ದೀರಿ? ತಂಡದಲ್ಲಿ ಸ್ಥಾನ ನೀಡುವುದೇ ದೊಡ್ಡ ವಿಷಯ, ಅದರಲ್ಲಿ ಉಪನಾಯಕತ್ವ ಕೂಡುವುದೆಷ್ಟು ಸರಿ? ಎಂದು ಪ್ರಶ್ನಿಸುವ ಮೂಲಕ ಕ್ರೀಡಾಭಿಮಾನಿಗಳು ಆಯ್ಕೆ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಬಿಸಿಸಿಐ ಹಾರ್ದಿಕ್‌ ಪಾಂಡ್ಯ ಅವರ ಮೇಲೆ ನಂಬಿಕೆ ಇಡಲು ಹಲವಾರು ಕಾರಣಗಳಿವೆ. ಅದೇನೆಂದು ನಾವೀಗ ತಿಳಿಯೋಣ.

    ಕಳೆದ ಕೆಲವು ವರ್ಷಗಳಿಂದ ಹಾರ್ದಿಕ್ ಪಾಂಡ್ಯ ಟೀಮ್​ ಇಂಡಿಯಾದಲ್ಲಿ ಖಾಯಂ ಆಟಗಾರ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಗಾಯದ ಸಮಸ್ಯೆಯಿಂದ ಗೈರು ಹಾಜರಾಗಿದ್ದನ್ನು ಹೊರತುಪಡಿಸಿದರೆ, ಪ್ರತಿ ಸರಣಿಯಲ್ಲೂ ಅವರು ತಂಡದ ಭಾಗವಾಗಿದ್ದರು. ಏಕಾಂಗಿಯಾಗಿ ಭಾರತ ತಂಡಕ್ಕೆ ಹಲವು ವಿಜಯಗಳನ್ನು ತಂದುಕೊಟ್ಟಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪಾರ ಅನುಭವ ಹೊಂದಿರುವುದು ಅವರಿಗೆ ಪ್ಲಸ್ ಆಗಿದೆ.

    ಇನ್ನೂ ಒತ್ತಡದಲ್ಲಿ ಹೇಗೆ ಆಡಬೇಕು ಎಂಬುದು ಪಾಂಡ್ಯಗೆ ಗೊತ್ತಿದೆ. ಈ ಹಿಂದೆ ಒತ್ತಡದ ಪರಿಸ್ಥಿತಿಯಿಂದ ತಂಡವನ್ನು ಹೊರತರುವ ದಾಖಲೆಯನ್ನು ಹೊಂದಿದ್ದು ಆಯ್ಕೆದಾರರಿಗೆ ಇದು ಹೆಚ್ಚಿನ ಭರವಸೆ ನೀಡಿದೆ. ರೋಹಿತ್‌ನ ಉತ್ತರಾಧಿಕಾರಿಯಾಗಿ, ಭವಿಷ್ಯದ ಟಿ20 ತಂಡದ ನಾಯಕನಾಗಿ ಅವರು ಸಿದ್ಧರಾಗುತ್ತಿದ್ದಾರೆ. ಅದಕ್ಕಾಗಿಯೇ ವಿಶ್ವಕಪ್ ತಂಡದಲ್ಲಿ ಹಾರ್ದಿಕ್​ ಸ್ಥಾನ ಪಡೆದಿದ್ದಾರೆ. ಕೋಚ್ ದ್ರಾವಿಡ್ ಮತ್ತು ಬಿಸಿಸಿಐ ಅಧಿಕಾರಿಗಳು ಪಾಂಡ್ಯ ಅವರತ್ತ ಗಮನಹರಿಸಿದ್ದರಿಂದ ಪಾಂಡ್ಯ ಅವರಿಗೆ ಉಪನಾಯಕ ಸ್ಥಾನ ಸಿಕ್ಕಿದೆ. (ಏಜೆನ್ಸೀಸ್​)

    ಮಹಿಳೆ ಹಸಿದಿದ್ದಾಗ ಬಾಯಿಗೆ ಅನ್ನ ಹಾಕಿ ಅದನ್ನಲ್ಲ… ಭಾರಿ ಸಂಚಲನ ಸೃಷ್ಟಿಸಿದ ನಟಿ ರಶ್ಮಿ ಪೋಸ್ಟ್​

    ರಾಷ್ಟ್ರ ರಾಜಧಾನಿಯಲ್ಲಿ 50ಕ್ಕೂ ಅಧಿಕ ಶಾಲೆಗಳಿಗೆ ಬಾಂಬ್​ ಬೆದರಿಕೆ! ಪೊಲೀಸ್​ ಇಲಾಖೆ ಹೈ ಅಲರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts