More

    LSG ವಿರುದ್ಧ ಹೀನಾಯ ಸೋಲಿನ ಬೆನ್ನಲ್ಲೇ ಭಾರೀ ದಂಡ ಕಟ್ಟಿದ ಹಾರ್ದಿಕ್​! ಪೆನಾಲ್ಟಿ ಹಣ ಕೇಳಿದ್ರೆ ಶಾಕ್ ಆಗ್ತೀರಾ

    ಲಖನೌ: ನಿನ್ನೆ (ಏ.30) ಇಲ್ಲಿನ ಏಕನಾ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ (Mumbai Indians) ಮತ್ತು ಲಕ್ನೋ ಸೂಪರ್ ಜೈಂಟ್ಸ್​ (Luknow Super Giants) ನಡುವಿನ ಪಂದ್ಯದಲ್ಲಿ ಎಲ್​ಎಸ್​​ಜಿ ತಂಡವು ನಾಲ್ಕು ವಿಕೆಟ್​ಗಳ ಅಂತರದಿಂದ ಮುಂಬೈ ವಿರುದ್ಧ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಖಂಡಿತ ಉತ್ತಮ ಪ್ರದರ್ಶನ ನೀಡಿ, ಸತತ ಸೋಲುಗಳಿಂದ ಹೊರಬರುತ್ತಾರೆ ಎಂದು ಭರವಸೆ ಹೊಂದಿದ್ದ ಎಂಐ ಅಭಿಮಾನಿಗಳಿಗೆ ಈ ಸೋಲು ಭಾರೀ ನಿರಾಸೆ ಉಂಟುಮಾಡಿತು.

    ಇದನ್ನೂ ಓದಿ: ಐಪಿಎಲ್​ನಲ್ಲಿ ಅಟ್ಟರ್​ ಫ್ಲಾಪ್​ ಆದ್ರೂ ಟಿ20 ವಿಶ್ವಕಪ್​ಗೆ​ ಉಪನಾಯಕ! ಹಾರ್ದಿಕ್​ ಆಯ್ಕೆ ಹಿಂದಿದೆ ಈ ಕಾರಣ

    ಸತತ ಸೋಲುಗಳಿಂದ ಹಾಗೂ ಉತ್ತಮ ಪ್ರದರ್ಶನವಿಲ್ಲದೆ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಅಲಂಕರಿಸಿರುವ ಮುಂಬೈ ಇಂಡಿಯನ್ಸ್​ ವಿರುದ್ಧ ಇದೀಗ ಫ್ಯಾನ್ಸ್ ಅತೀವ ಬೇಸರ ಹೊರಹಾಕಿದ್ದಾರೆ. ಅದರಲ್ಲೂ ಪ್ರತ್ಯೇಕವಾಗಿ ತಂಡದ ಕ್ಯಾಪ್ಟನ್ ಆದ ಹಾರ್ದಿಕ್ ಪಾಂಡ್ಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ಇದೆಲ್ಲದರಿಂದ ಕೆಂಗಟ್ಟಿದ್ದ ಹಾರ್ದಿಕ್​ಗೆ ಇದೀಗ ಮತ್ತೊಂದು ಆಘಾತ ಎದುರಾಗಿದ್ದು, ನಿನ್ನೆಯ ಪಂದ್ಯದಲ್ಲಿ ಮಂದಗತಿಯ ಓವರ್​-ರೇಟ್​ ಮಾಡಿದ್ದಕ್ಕೆ ಇಡೀ ತಂಡಕ್ಕೆ ಭಾರೀ ದಂಡ ವಿಧಿಸಲಾಗಿದೆ.

    ಈ ಸೀಸನ್​ನಲ್ಲಿ ಎರಡನೇ ಬಾರಿಗೆ ಮಂದಗತಿಯ ಓವರ್​-ರೇಟ್​ ಮಾಡಿದ್ದಕ್ಕೆ ಮುಂಬೈ ಇಂಡಿಯನ್ಸ್ ತಂಡದ ಪ್ರತಿ ಆಟಗಾರರಿಗೆ ಕೇವಲ 6 ಲಕ್ಷ ರೂ. ದಂಡ ವಿಧಿಸಿದರೆ, ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯಗೆ ಮಾತ್ರ 24 ಲಕ್ಷ ರೂ. ಪೆನಾಲ್ಟಿ ಹಾಕಲಾಗಿದೆ. ಈ ಮೂಲಕ ಈ ತಪ್ಪನ್ನು ಮತ್ತೊಮ್ಮೆ ಮಾಡದಂತೆ ತಂಡಕ್ಕೆ ಎಚ್ಚರಿಸಲಾಗಿದೆ. ಸದ್ಯ ಈ ವಿಷಯ ಕೇಳುತ್ತಿದ್ದಂತೆ ಫ್ಯಾನ್ಸ್ ಕಂಗಾಲಾಗಿದ್ದು, ಗಾಯದ ಮೇಲೆ ಮತ್ತೊಂದು ಬರೆ ಎಳೆದಂತಾಯಿತು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

    ಡೆಲ್ಲಿ ವಿರುದ್ಧದ ಸೋಲಿಗೆ ತಿಲಕ್ ವರ್ಮ ಕಾರಣ ಎಂದ ಹಾರ್ದಿಕ್ ಪಾಂಡ್ಯ! ನೀನೆಂಥ ಕ್ಯಾಪ್ಟನ್​? ಫ್ಯಾನ್ಸ್​ ಕಿಡಿ

    ಟೀಂ ಇಂಡಿಯಾದಲ್ಲಿ ಧೋನಿ ಸ್ಥಾನವನ್ನು ಈತ ತುಂಬಲಿದ್ದಾನೆ: ಯುವ ಸ್ಟಾರ್​​ ಆಟಗಾರನ ಮೇಲೆ ಸಿದ್ದು ಭರವಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts