ಚಿತ್ರರಂಗಕ್ಕೆ ನಟಿ ಶ್ರದ್ಧಾ ಗುಡ್​ಬೈ? ಟ್ವೀಟ್​ ಮಾಡಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟ `ಯೂ ಟರ್ನ್’ ಬೆಡಗಿ

shruddha
Published on

ಬೆಂಗಳೂರು: ಹಿಂದಿ, ತೆಲುಗು, ತಮಿಳು ಮಾತ್ರವಲ್ಲದೇ ಕನ್ನಡದಲ್ಲಿಯೂ ನಟಿಸಿ ಲಕ್ಷಾಂತರ ಅಭಿಮಾನಿಗಳನ್ನು ಪಡೆದಿರುವ ಬೆಡಗಿ ಶ್ರದ್ಧಾ ಶ್ರೀನಾಥ್​, ಇದೀಗ ಟ್ವೀಟ್​ ಒಂದರಿಂದ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದಾರೆ.

ಹೆಲೋ ಗುಡ್​ಬೈ (Hello goodbye) ಎಂದು ಅವರು ಟ್ವೀಟ್​ ಮಾಡಿ ತಮ್ಮ ಕಪ್ಪು-ಬಿಳುಪಿನ ಫೋಟೋ ಶೇರ್​ ಮಾಡಿರುವುದು ಅವರ ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ.

`ಯೂ ಟರ್ನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ಶ್ರದ್ಧಾ `ಆಪರೇಷನ್ ಅಲಮೇಲಮ್ಮ’, `ರುಸ್ತುಂ’ ಸೇರಿದಂತೆ ಕೆಲವು ಕನ್ನಡ ಚಿತ್ರಗಳಲ್ಲಿ ನಟಿಸಿ ಭಾರಿ ಬೇಡಿಕೆ ನಟಿಯಾಗಿದ್ದಾರೆ. ಇದಲ್ಲದೇ ತೆಲುಗು, ತಮಿಳು, ಮತ್ತು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಇವರು ರಾತ್ರಿಯ ವೇಳೆ ಗುಡ್​ಬೈ ಎಂದು ಟ್ವೀಟ್​ ಮಾಡಿರುವುದು ಏಕೆ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

ಇದು ತಮಾಷೆಗೆ ಮಾಡಿದ್ದು, ಸುದ್ದಿಯಾಗಲೆಂದೇ ಹೀಗೆ ಮಾಡಿರುವುದಾಗಿ ಕೆಲವರು ಹೇಳಿದ್ದರೆ, ಇಲ್ಲಾ ತಮ್ಮ ನೆಚ್ಚಿನ ನಟಿ ಹಾಗೆಲ್ಲಾ ಸುಳ್ಳು ಹೇಳುವುದಿಲ್ಲ, ಅವರ ವೈಯಕ್ತಿಕ ಜೀವನದಲ್ಲಿ ಏನಾದರೂ ಸಮಸ್ಯೆಯಾಗಿರಬೇಕು ಎಂದು ಕೆಲವರು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. ಇನ್ನು ಕೆಲವರು ಜಾಲತಾಣದಿಂದ ಈಕೆ ಗುಡ್​ಬೈ ಹೇಳಿರಬಹುದು ಎಂದಿದ್ದಾರೆ.

ಒಟ್ಟಿನಲ್ಲಿ ಅಭಿಮಾನಿಗಳ ತಲೆ ತಿಂತಿರೋ ಈ ಟ್ವೀಟ್​ನ ಒಳಾರ್ಥ ಏನು ಎಂದು ಖುದ್ದು ನಟಿಯೇ ಸ್ಪಷ್ಟಪಡಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net