ನವದೆಹಲಿ: ಸ್ಮಾರ್ಟ್ಫೋನ್ ಬಂದ ಮೇಲೆ ಲ್ಯಾಂಡ್ಲೈನ್ ಬಳಕೆ ಕಡಿಮೆಯಾಗಿದ್ದರೂ, ಕಚೇರಿಗಳಲ್ಲಿ ಹಾಗೂ ಕೆಲವೊಂದು ಮನೆಗಳಲ್ಲಿ ಇನ್ನೂ ಲ್ಯಾಂಡ್ಲೈನ್ಗಳು ಬಳಕೆಯಲ್ಲಿವೆ. ಇಂಥ ಲ್ಯಾಂಡ್ಲೈನ್ಗಳಲ್ಲಿ ಒಂದು ಮಾರ್ಪಾಟನ್ನು ಮಾಡಲಾಗಿದೆ.
ಜನವರಿ 1ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (TRAI) ಶಿಫಾರಸು ಮಾಡಿದ್ದು, ಅದನ್ನು ಟೆಲಿಕಾಂ ಇಲಾಖೆ ಒಪ್ಪಿಗೆ ಸೂಚಿಸಿದೆ.
ಇದನ್ನೂ ಓದಿ: ಬೆಂಗಳೂರಿನಿಂದಲೇ ಕಾರ್ಯಾಚರಣೆ ಮಾಡುತ್ತಿದೆ ಪಬ್ಜಿ
ಬದಲಾದ ನಿಯಮ ಏನೆಂದರೆ, ಯಾವುದೇ ಲ್ಯಾಂಡ್ಲೈನ್ ಫೋನ್ನಿಂದ ಮೊಬೈಲ್ ಫೋನ್ಗೆ ಕರೆ ಮಾಡುವಾಗ ಆರಂಭದಲ್ಲಿ ಜೀರೊ (0) ಸೇರಿಸುವುದು ಕಡ್ಡಾಯ. ವ್ಯಕ್ತಿಯು ಲ್ಯಾಂಡ್ಲೈನ್ನಲ್ಲಿ ಸೊನ್ನೆ ಒತ್ತದೇ ನೇರವಾಗಿ, ಮೊಬೈಲ್ ನಂಬರ್ಗೆ ಕರೆ ಮಾಡಿದರೆ ಆಗ ಸೊನ್ನೆ ಒತ್ತಬೇಕೆಂಬ ಬಗ್ಗೆ ವಾಯ್ಸ್ ರೆಕಾರ್ಡ್ ಪ್ಲೇ ಮಾಡುವಂತೆ ಇದಾಗಲೇ ನಿರ್ದೇಶನ ನೀಡಲಾಗಿದೆ.
ಟೆಲಿಕಾಮ್ ಸೇವೆಯಲ್ಲಿ ಸೂಕ್ತ ನಂಬರಿಂಗ್ ಸ್ಪೇಸ್ ಸೃಷ್ಟಿಸುವ ಸಲುವಾಗಿ ಇಂಥದ್ದೊಂದು ಬದಲಾವಣೆ ಮಾಡಲಾಗಿದೆ ಎಂದು ಟ್ರಾಯ್ ಹೇಳಿದೆ. ಮೊಬೈಲ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಡಯಲಿಂಗ್ ವಿಧಾನದಲ್ಲಿ ಈ ಬದಲಾವಣೆ ಮಾಡಿದರೆ ಟೆಲಿಕಾಂ ಕಂಪೆನಿಗಳು ಮೊಬೈಲ್ ಸೇವೆಗಳಿಗಾಗಿ 254.4 ಕೋಟಿ ಹೆಚ್ಚುವರಿ ಸಂಖ್ಯೆಗಳನ್ನು ರಚಿಸುವ ಸೌಲಭ್ಯವನ್ನು ಪಡೆಯಬಹುದಾಗಿದೆ.
ಕರೊನಾ ಪತ್ತೆಗೆ ಬರುತ್ತಿವೆ ನಾಯಿಗಳು! ನೀಡಲಿವೆ ರಿಸಲ್ಟ್ ಭಾರಿ ಫಾಸ್ಟ್…
ಬದುಕೇ ಸಾಕಾಗಿದೆ ಎನ್ನುವಿರಾ? ದೇಹದ ಅರ್ಧಭಾಗ ತುಂಡಾಗಿದ್ದರೂ ನಗುತ್ತಿರುವ ಯುವಕನ ಕಥೆ ಕೇಳಿ…