More

    ಬದುಕೇ ಸಾಕಾಗಿದೆ ಎನ್ನುವಿರಾ? ದೇಹದ ಅರ್ಧಭಾಗ ತುಂಡಾಗಿದ್ದರೂ ನಗುತ್ತಿರುವ ಯುವಕನ ಕಥೆ ಕೇಳಿ…

    ವಾಷಿಂಗ್ಟನ್​: ಜೀವನದಲ್ಲಿ ಚೂರೇ ಚೂರು ಎಡವಟ್ಟಾದರೂ ಆತ್ಮಹತ್ಯೆಯನ್ನು ಮಾಡಿಕೊಳ್ಳುವವರಿಗೇನೂ ಕಮ್ಮಿ ಇಲ್ಲ. ಆತ್ಮಹತ್ಯೆಯ ಹಾದಿ ತುಳಿದವರ ಪೈಕಿ ಎಷ್ಟೋ ಮಂದಿಯ ಕಾರಣ ನೋಡಿದರೆ ತೀರಾ ಕ್ಷುಲ್ಲಕ ಎನಿಸಿಬಿಡುತ್ತದೆ.

    ಬದುಕೇ ಬೇಡ, ಬದುಕು ಸಾಕು ಸಾಕಾಗಿ ಹೋಗಿದೆ, ಏನಿದೆ ಈ ಜೀವನದಲ್ಲಿ ಎಂದೆಲ್ಲಾ ಒಮ್ಮೆಯಾದರೂ ಸಹಜವಾಗಿ ಎಲ್ಲರೂ ಅಂದುಕೊಳ್ಳುವುದು ಉಂಟು. ಅಂಥ ಯೋಚನೆ ಬಂದಿದ್ದರೆ ಈ ಯುವಕನ ಕುರಿತು ಒಮ್ಮೆ ಯೋಚಿಸಿಬಿಡಿ… ಈ ನಗುಮೊಗದ ಯುವಕ ಭಯಾನಕ ಘಟನೆಯನ್ನೊಮ್ಮೆ ನೆನೆಸಿಕೊಂಡು ಬಿಡಿ…

    ಹೌದು. ಈ ಚಿತ್ರದಲ್ಲಿ ನಗುಮೊಗದಿಂದ ಫೋಟೋಗೆ ಪೋಸ್​ ಕೊಟ್ಟಿರುವ ಯುವಕನ ಹೆಸರು ಲಾರೆನ್​ ಶಯೇರ್ಸ್​. 19 ವರ್ಷದ ಈ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಚಿತ್ರ ನೋಡಿದರೇ ತಿಳಿಯುತ್ತದೆ. ಆದರೆ ನಿಜವಾಗಿಯೂ ಅಸಲಿಯತ್ತು ಏನು ಗೊತ್ತೆ? ಈತನ ಸೊಂಟದ ಕೆಳಭಾಗದ ಸಂಪೂರ್ಣ ಅರ್ಧ ದೇಹವನ್ನು ವೈದ್ಯರು ತುಂಡರಿಸಿದ್ದಾರೆ!

    ಕೇಳಿದರೆ ಮೈ ಝಂ ಎನ್ನುವ ಭಯಾನಕ ಕಥೆ ಈ ಯುವಕನದ್ದು. ನಾಲ್ಕು ಟನ್‌ ಸಾಮರ್ಥ್ಯದ ಫೋರ್ಕ್‌ಲಿಫ್ಟ್ ಟ್ರಕ್ ಒಂದನ್ನು ಚಾಲನೆ ಮಾಡುತ್ತಿದ್ದ ವೇಳೆ ಅಪಘಾತಕ್ಕೆ ಒಳಗಾಗಿ ವಾಹನದ ಅಡಿಗೆ ಸಿಲುಕಿಬಿಟ್ಟಿದ್ದ. ಈತನ ದೇಹ ನಜ್ಜುಗುಜ್ಜಾಗಿ ಹೋಯಿತು. ಉಸಿರು ಒಂದು ಬಿಟ್ಟರೆ ದೇಹದಲ್ಲಿ ಇನ್ನೇನೂ ಇರಲಿಲ್ಲ.

    ಈತನನ್ನು ಉಳಿಸಿಕೊಳ್ಳಲು ದೇಹದ ಅರ್ಧ ಭಾಗವನ್ನೇ ಕತ್ತರಿಸಿ ತೆಗೆಯುವ ಅನಿವಾರ್ಯತೆ ವೈದ್ಯರಿಗಾಗಿತ್ತು. ಆದ್ದರಿಂದ ಅಪ್ಪಚ್ಚಿಯಾಗಿರುವ ಸೊಂಟದ ಕೆಳಭಾಗವನ್ನು ಸಂಪೂರ್ಣವಾಗಿ ಶಸ್ತ್ರಚಿಕಿತ್ಸೆ ಮೂಲಕ ತುಂಡರಿಸಿದ್ದಾರೆ. ದೇಹ ಸಂಪೂರ್ಣ ಜಜ್ಜಿಹೋಗಿರುವುದನ್ನು ಕಣ್ಣಾರೆ ಕಂಡ ಈ ಯುವಕ ಹೇಳುವುದು ಏನು ಗೊತ್ತಾ?

    ಇದನ್ನೂ ಓದಿ: ಮುಟ್ಟಿನ ಸಮಸ್ಯೆಯಿಂದ ಮುಕ್ತಿ ಹೊಂದಲು ಆಯುರ್ವೇದದಲ್ಲೇನು ಪರಿಹಾರ?

    “ನನ್ನ ಸೊಂಟದ ಕೆಳಗೆ ಅಪ್ಪಚ್ಚಿಯಾಗಿ ಹೋಗಿತ್ತು, ಉಸಿರು ಮಾತ್ರ ಇತ್ತು, ನನಗೆ ಎಚ್ಚರ ಇದ್ದುದರಿಂದ ನನ್ನ ದೇಹವನ್ನು ನೋಡಿಕೊಂಡೆ. ಆಸ್ಪತ್ರೆಗೆ ಸೇರಿಸಿದಾಗ ವೈದ್ಯರು ಸೊಂಟದ ಕೆಳಭಾಗವನ್ನು ಸಂಪೂರ್ಣವಾಗಿ ತುಂಡರಿಸಬೇಕಾದ ಕುರಿತು ಹೇಳಿದರು. ನನಗಿದ್ದುದು ಎರಡೇ ದಾರಿ. ಒಂದು ಸಾಯಬೇಕಿತ್ತು, ಇಲ್ಲವೇ ಅರ್ಧ ದೇಹದೊಂದಿಗೆ ಬದುಕಬೇಕಿತ್ತು. ನಾನು ಬದುಕುವ ದಾರಿ ಆಯ್ಕೆ ಮಾಡಿಕೊಂಡೆ” ಎಂದಿದ್ದಾನೆ ಲಾರೆನ್​.

    ಅದೇ ನಗುವಿನೊಂದಿಗೆ ಫೋಟೋಗೂ ಪೋಸ್​ ಕೊಟ್ಟಿದ್ದಾನೆ. ಜೀವನೋತ್ಸಾಹ, ಜೀವನ ಪ್ರೀತಿ ಎಂದರೆ ಇದೆ ಅಲ್ಲವೆ?

    ಮಗುವಿದ್ದರೂ ವಿವಾಹಿತನ ಸ್ನೇಹ ಬೆಳೆಸಿ ಹೆಣವಾದ ಗರ್ಭಿಣಿ- ಕೊಲೆ ಮಾಡಿ ಹೂತುಹಾಕಿದ ಪಾಪಿ!

    ಮತ್ತೆ ಬ್ಯಾನ್​ ಆದ್ವು 43 ಆ್ಯಪ್​ಗಳು: ಅವುಗಳ ಪಟ್ಟಿ ಇಲ್ಲಿದೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts