

ಬೆಂಗಳೂರು: ಚೀನಾ ಮೂಲದ ಆ್ಯಪ್ ಆಗಿದ್ದ ಪಬ್ಜಿಯನ್ನು ಬ್ಯಾನ್ ಮಾಡಿ ತಿಂಗಳುಗಳೇ ಕಳೆದಿವೆ. ಆದರೆ ಇದೀಗ ಕಂಪೆನಿಯ ರೂಪದಲ್ಲಿ ಭಾರತದಲ್ಲಿ ಮತ್ತೊಮ್ಮೆ ಪ್ರವೇಶ ಮಾಡಿದೆ.
ಪಬ್ಜಿ ಮೊಬೈಲ್ ಇಂಡಿಯಾ ಎಂಬ ಹೆಸರಿನಲ್ಲಿ ಅಧಿಕೃತವಾಗಿ ನೋಂದಣಿಯನ್ನು ಪೂರ್ಣಗೊಳಿಸಲಾಗಿದೆ. ಟೆಕ್ ವೆಬ್ಸೈಟ್ ಟಾಕ್ಸಪೋರ್ಟ್ ಪ್ರಕಾರ ಭಾರತ ಸರ್ಕಾರದ ಕಾರ್ಪೋರೆಟ್ ವ್ಯವಹಾರಗಳ ಸಚಿವಾಲಯ ಕಂಪನಿಗೆ ಅನುಮತಿ ನೀಡಿದೆ ಎನ್ನಲಾಗಿದೆ.
ಇನ್ನೊಂದು ವಿಶೇಷ ಎಂದರೆ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಈ ಕಂಪನಿಯ ನೋಂದಣಿಗೆ ನವೆಂಬರ್ 21ರಂದು ಅನುಮೋದನೆ ನೀಡಿದ್ದು, ಈ ಕಂಪೆನಿಯನ್ನು ಬೆಂಗಳೂರಿನಲ್ಲಿ ನೋಂದಾಯಿಸಲಾಗಿದೆ. ಭಾರತದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಡಿ 'ಪಬ್ಜಿ ಇಂಡಿಯಾ ಪ್ರೈವೆಟ್ ಲಿಮಿಟೆಡ್' ಆಗಿ ಪರಿವರ್ತನೆಗೊಂಡಿದೆ.
ಬಳಕೆದಾರರ ಹಳೆ ಐಡಿಯಲ್ಲಿಯೇ ಇದು ಕಾರ್ಯನಿರ್ವಹಿಸಲಿದ್ದು, ಗೇಮ್ ಪ್ಲೇಯರ್ಗಳು ಪ್ರತ್ಯೇಕ ಐಡಿ ರಚಿಸುವ ಅಗತ್ಯವಿಲ್ಲ ಎಂದು ಹೇಳಲಾಗಿದೆ. ಮಾತ್ರವಲ್ಲದೇ ಪಬ್ಜಿ ಗ್ಲೋಬಲ್ನಲ್ಲಿ ಬಳಸುತ್ತಿರುವ ಐಡಿಯೊಂದಿಗೆ ಭಾರತೀಯ ಆವೃತ್ತಿ ಬಳಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಪಬ್ಜಿ ಆವೃತ್ತಿ ಮೊದಲಿನ ಗೇಮ್ಗಿಂತ ಭಿನ್ನವಾಗಿದೆ. ಇದರ ಗಾತ್ರ ಚಿಕ್ಕದ್ದಾಗಿದ್ದು, ಕೇವಲ 610 ಎಂಬಿಗೆ ಇಳಿಸಲಾಗಿದ್ದು ಸುಲಭದಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಅಂದಹಾಗೆ ಪಬ್ಜಿಯ ಫುಲ್ ಫಾರ್ಮ್ 'ಪ್ಲೇಯರ್ ಅನ್ನೋನ್ಸ್ ಬ್ಯಾಟಲ್ ಗ್ರೌಂಡ್'. ದಕ್ಷಿಣ ಕೊರಿಯಾ ಮೂಲದ ಈ ಆಟವು ಚೀನಾದ ಸಹಯೋಗಿ ಸಂಸ್ಥೆ 'ಟೆನ್ಸೆಂಟ್' ಮೂಲಕ ಈ ಹಿಂದೆ ಭಾರತದಲ್ಲಿ ಕಾರ್ಯಾಚರಿಸುತ್ತಿತ್ತು. ನಂತರ ಇತರ ಆ್ಯಪ್ಗಳ ಜತೆ ಪಬ್ಜಿಯನ್ನೂ ಬ್ಯಾನ್ ಮಾಡಲಾಗಿತ್ತು.
ಇದನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೀಗೆ:
ಈ ಮೊಬೈಲ್ ಗೇಮ್ನ ಪ್ರೀ ರೆಜಿಸ್ಟರ್ ಮಾಡುವ ವಿಧಾನ ಇಲ್ಲಿದೆ:
* TapTap ವೆಬ್ಸೈಟ್ ಮೂಲಕ TapTap app ಡೌನ್ಲೋಡ್ ಮಾಡಿಕೊಳ್ಳಿ. APK ಲಿಂಕ್ ಮೂಲಕ ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
* ಮೊದಲೇ ಐಡಿ ಇದ್ದರೆ ಲಾಗಿನ್ ಆಗಬಹುದು ಇಲ್ಲವೇ ಹೊಸದಾಗಿ ಐಡಿ ಕ್ರಿಯೇಟ್ ಮಾಡಿಕೊಳ್ಳಬಹುದು.
* ಲಾಗಿನ್ ಆದ ತಕ್ಷಣ PUBG Mobile India ಎಂದು ಸರ್ಚ್ ಆಪ್ಷನ್ನಲ್ಲಿ ಟೈಪಿಸಿ ಅದರ ಮೇಲೆ ಕ್ಲಿಕ್ ಮಾಡಬೇಕು
* ನಂತರ pre-registration ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು