

ವಿಜಯಪುರ: ಬಹುನಿರೀಕ್ಷಿತ ರಫೇಲ್ ಯುದ್ಧವಿಮಾನ ಕೆಲವು ವಿವಾದಗಳ ನಂತರ ಕೊನೆಗೂ ಭಾರತದ ಭೂಮಿಯನ್ನು ಬಂದು ಸೇರಲಿದೆ. ಅದಕ್ಕೆ ಇವತ್ತಿನ ಮುಹೂರ್ತವೂ ನಿಗದಿಯಾಗಿದೆ.
ಇಲ್ಲೊಂದು ಅತ್ಯಂತ ಖುಷಿಯ ವಿಚಾರ ಎಂದರೆ, ಫ್ರಾನ್ಸ್ನಿಂದ ಈ ಯುದ್ಧವಿಮಾನವನ್ನು ಕರೆತರುತ್ತಿರುವ ಪೈಲಟ್ಗಳ ಪೈಕಿ ಕರ್ನಾಟಕದಲ್ಲಿ ಕಲಿತ ವಿದ್ಯಾರ್ಥಿಯೊಬ್ಬರು ಸೇರಿದ್ದಾರೆ. ಫ್ರಾನ್ಸ್ನಿಂದ ಭಾರತಕ್ಕೆ ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿದ್ದಾರೆ ಇವರು.
ಇವರೇ 35 ವರ್ಷದ ವಿಂಗ್ ಕಮಾಂಡರ್ ಅರುಣ್ ಕುಮಾರ್. ವಿಜಯಪುರದ ಸೈನಿಕ ಶಾಲೆಯ ವಿದ್ಯಾರ್ಥಿ ಇವರು. ಫ್ರಾನ್ಸ್ನಿಂದ ರಫೇಲ್ ಯುದ್ಧ ವಿಮಾನವನ್ನ ಭಾರತಕ್ಕೆ ಹಾರಿಸಿಕೊಂಡು ಬರುವವರ ಪೈಕಿ ಇವರೂ ಒಬ್ಬರು.
ಅರುಣ್ ಕುಮಾರ್ ಮೂಲತಃ ಉತ್ತರ ಭಾರತದವರು. 1994ರಲ್ಲಿ 6ನೇ ತರಗತಿಯಲ್ಲಿರುವಾಗಲೇ ವಿಜಯಪುರದ ಸೈನಿಕ ಶಾಲೆಗೆ ಪ್ರವೇಶ ಪಡೆದಿದ್ದರು. ಬಾಲ್ಯದಿಂದಲೂ ಅತ್ಯಂತ ಬುದ್ಧಿವಂತ ವಿದ್ಯಾರ್ಥಿ ಎನಿಸಿಕೊಂಡಿದ್ದ ಇವರು. 2002ರಲ್ಲಿ ವಾಯುಸೇನೆಗೆ ನೇಮಕಾತಿಗೊಂಡರು. 15 ವರ್ಷಗಳಿಂದ ವಿಜಯಪುರದ ವಾಯು ಸೇನೆಯಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ.
ಫ್ರಾನ್ಸ್ನಲ್ಲಿ 3 ವರ್ಷದವರೆಗೆ ಸುಖೋಯ್ ಯುದ್ಧ ವಿಮಾನದಲ್ಲಿದ್ದುಕೊಂಡು ತರಬೇತಿ ಪಡೆದಿದ್ದಾರೆ. ಆನಂತರ ರಫೇಲ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈಗ ಭಾರತಕ್ಕೆ 5 ರಫೇಲ್ ಯುದ್ಧ ವಿಮಾನ ತರುವಲ್ಲಿ ಅರುಣಕುಮಾರ ಅವರು ಕಮಾಂಡರ್ ಆಗಿ ಕೆಲಸ ಮಾಡಿದ್ದಾರೆ.