More

    ಮಕ್ಕಳಾಗದಿರುವುದಕ್ಕೂ, ಮಧುಮೇಹಕ್ಕೂ ಸಂಬಂಧವಿದೆಯೆ? ಆಯುರ್ವೇದ ವೈದ್ಯೆ ಏನು ಹೇಳಿದ್ದಾರೆ ನೋಡಿ..

    ಮಕ್ಕಳಾಗದಿರುವುದಕ್ಕೂ, ಮಧುಮೇಹಕ್ಕೂ ಸಂಬಂಧವಿದೆಯೆ? ಆಯುರ್ವೇದ ವೈದ್ಯೆ ಏನು ಹೇಳಿದ್ದಾರೆ ನೋಡಿ..ನಾನು ಮಹಿಳೆ. ವಯಸ್ಸು 32 ವಯಸ್ಸು. 28ನೇ ವಯಸ್ಸಿಗೆ ಮದುವೆಯಾಗಿದ್ದೇನೆ. ನನ್ನ ಪತಿಗೆ 35 ವರ್ಷ. ಅವರಿಗೆ ಸಕ್ಕರೆ ಕಾಯಿಲೆ ಇದೆ. ಕಳೆದ ಮೂರು ವರ್ಷದಿಂದಲೂ ಮಕ್ಕಳಾಗಲು ಪ್ರಯತ್ನಿಸುತ್ತಲೇ ಇದ್ದೇವೆ. ಆಗುತ್ತಿಲ್ಲ. ನನಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯೇ ಇಲ್ಲ. ಸಕ್ಕರೆ ಕಾಯಿಲೆ ಇದ್ದರೆ ಮಕ್ಕಳಾಗುವುದಿಲ್ಲವೇ? ನಮ್ಮ ಸಮಸ್ಯೆಗೆ ಪರಿಹಾರ ಸೂಚಿಸಿ.

    ಉತ್ತರ: ಸಕ್ಕರೆ ಕಾಯಿಲೆಗೂ ಮಕ್ಕಳಾಗದಿರುವುದಕ್ಕೂ ಸಂಬಂಧವಿಲ್ಲ. ನಿಮ್ಮ ಮದುವೆಯಾಗಿ ಮೂರು ವರ್ಷಗಳಾಗಿರುವುದರಿಂದ ಒಮ್ಮೆ ಇಬ್ಬರೂ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಒಳಿತು. ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವುದು ಒಳ್ಳೆಯದು. ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಮುಖ್ಯ.

    ನಿಮಗೆ ಲೈಂಗಿಕ ಆಸಕ್ತಿ ಇಲ್ಲ ಎಂದಿರುವಿರಿ. ಒಮ್ಮೆ ಕೌನ್ಸೆಲಿಂಗ್​ಗೆ ಹೋಗಿ ನೋಡಿ. ಬಯಕೆ ಪರಸ್ಪರ ಗಂಡ-ಹೆಂಡಿರಲ್ಲಿ ಒಡಮೂಡಿ ದೇಹ, ಮನಸ್ಸುಗಳೆರಡೂ ಸಿದ್ಧಗೊಂಡಾಗ ಲೈಂಗಿಕ ಕ್ರಿಯೆ ಸಾಧ್ಯ. ಪರಸ್ಪರರಲ್ಲಿ ಪ್ರೀತಿ ತುಂಬಿದ ನೋಟ, ಸ್ಪರ್ಶ, ಮಾತುಕತೆ ಎಲ್ಲವೂ ಇದಕ್ಕೆ ಕಾರಣವಾಗುತ್ತವೆ. ಇಬ್ಬರೂ ಒಲವಿನಿಂದ ಲೈಂಗಿಕ ಕ್ರಿಯೆಯಲ್ಲಿ ಒಳಗೊಳ್ಳಿ, ಖಂಡಿತ ಮಕ್ಕಳಾಗುತ್ತವೆ.

    ‘ಗಂಡ ಕಣೆ ಅಡ್ಜಸ್ಟ್‌ ಮಾಡ್ಕೋ’ ಅಂತಾರೆ… ಇಂಥ ನರಕದ ಬಾಳು ಹೇಗೆ ಬಾಳಲಿ ಮೇಡಂ? ನನಗೆ ಮುಕ್ತಿ ಇದೆಯಾ?

    ಯಾವ ಗಂಡನ್ನೂ ನಂಬಬಾರದು ಎಂದುಕೊಂಡ ನಾನು ವಿವಾಹಿತನಿಗೆ ಎಲ್ಲವನ್ನೂ ಅರ್ಪಿಸಿ ಒದ್ದಾಡುತ್ತಿರುವೆ… ಪ್ಲೀಸ್‌ ದಾರಿತೋರಿ ಮೇಡಂ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts