ಇನ್ನೂ ಮುಗಿದಿಲ್ಲ ಅಮೆರಿಕ ಫೈಟ್​: ಜಾರ್ಜಿಯಾದಲ್ಲಿ ಮರು ಎಣಿಕೆ!

trump-biden
Published on

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಜೋ ಬೈಡೆನ್​ ಅವರು ಚುನಾಯಿತರಾಗಿರುವುದಾಗಿ ಘೋಷಣೆಯಾಗಿದ್ದರೂ, ಸುಲಭದಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸೋಲನ್ನು ಒಪ್ಪುತ್ತಿಲ್ಲ. ಮತ ಎಣಿಕೆಯಲ್ಲಿ ಅನ್ಯಾಯ ನಡೆದಿರುವುದಾಗಿ ಅವರು ಹೇಳುತ್ತಲೇ ಬಂದಿದ್ದು, ಇದಕ್ಕಾಗಿ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ ಎಂದು ಇದಾಗಲೇ ಘೋಷಿಸಿದ್ದಾರೆ.

ಇದರ ಮೊದಲನೆಯ ಹಂತವಾಗಿ ಇದೀಗ ಭಾರಿ ಕುತೂಹಲ ಕೆರಳಿಸಿದ್ದ ಜಾರ್ಜಿಯಾ ರಾಜ್ಯದಲ್ಲಿ ಮರು ಮತ ಎಣಿಕೆ ಮಾಡಲು ನಿರ್ಧರಿಸಲಾಗಿದೆ!

ಜಾರ್ಜಿಯಾದಲ್ಲಿ ಕೊನೆ ಹಂತದವರೆಗೂ ಡೊನಾಲ್ಡ್​ ಟ್ರಂಪ್​ ಅವರೇ ಮುನ್ನಡೆ ಸಾಧಿಸಿದ್ದರು. ಅಂತಿಮ ಸುತ್ತಿನಲ್ಲಿ ಜೋ ಬೈಡೆನ್​ ಅವರು ಟ್ರಂಪ್​ ಅವರಿಗಿಂತ 14 ಸಾವಿರ ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿಯೇಬಿಟ್ಟರು.

ಇಲ್ಲಿ ಏನೋ ಮೋಸ ಆಗಿದೆ ಎನ್ನುವುದು ಟ್ರಂಪ್​ ವಾದ. ಇಲ್ಲಿರುವ 16 ಎಲೆಕ್ಟ್ರೋಲ್​ಗಳಲ್ಲಿ ಭಾರಿ ವಂಚನೆ ಮತ್ತು ಚುನಾವಣೆಯ ದುಷ್ಕೃತ್ಯ ನಡೆದಿದೆ ಎಂದು ಅವರು ಆರೋಪಿಸಿದ್ದರು. ಇದನ್ನು ಜಾರ್ಜಿಯಾದ ಅಧಿಕಾರಿಗಳು ನಿರಾಕರಿಸಿದ್ದರು. ಆದರೂ ಮರು ಮತ ಎಣಿಕೆ ಮಾಡಲು ನಿರ್ಧರಿಸಲಾಗಿದೆ. ಆದ್ದರಿಂದ 150 ಕೌಂಟಿಗಳಲ್ಲಿ ಮರು ಮತ ಎಣಿಕೆ ನಡೆಯಲಿದೆ.

ಈ ಫಲಿತಾಂಶ ಏನೇ ಬಂದರೂ ಬೈಡೆನ್​ ಅವರದ್ದೇ ಗೆಲುವು ಎನ್ನಲಾಗಿದೆ. ಬೈಡೆನ್ ಈಗಾಗಲೇ 538 ಎಲೆಕ್ಟ್ರೋಲ್ ಮತಗಳ ಪೈಕಿ 279 ಮತಗಳನ್ನು ಗಳಿಸಿದ್ದಾರೆ. ಒಂದು ವೇಳೆ ಜಾರ್ಜಿಯಾದಲ್ಲಿ ಅವರಿಗೆ ಕಡಿಮೆ ಮತಗಳು ದೊರೆತರೂ ಅವರು ಅಧ್ಯಕ್ಷರಾಗಲು ಬೇಕಾಗುವಷ್ಟು ಮತಗಳಿಗೆ ಕೊರತೆ ಆಗುವುದಿಲ್ಲ' ಎಂದು ವಿಶ್ಲೇಷಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net