More

    ಗಗನಯಾತ್ರಿಗಳು ಆಕಾಶದಲ್ಲಿ ತಲೆಸ್ನಾನ ಮಾಡೋದು ಹೀಗೆ ನೋಡಿ…

    ವಾಷಿಂಗ್ಟನ್​: ಗಗನಯಾತ್ರಿಗಳ ಜೀವನ ಎಷ್ಟೊಂದು ವಿಚಿತ್ರವಾಗಿರುತ್ತದೆ, ಅದು ಎಷ್ಟು ಕಷ್ಟದಾಯಕ ಎನ್ನುವುದು ಸುಲಭದಲ್ಲಿ ಸಾಮಾನ್ಯ ಜನರ ಊಹೆಗೂ ನಿಲುಕದ ಮಾತು. ಭೂಮಿಯಿಂದ ಬೇರೆಯದ್ದೇ ಪ್ರಪಂಚಕ್ಕೆ, ಅದೂ ಗುರುತ್ವಾಕರ್ಷಣೆಯೂ ಇಲ್ಲದ ಲೋಕಕ್ಕೆ ಹೋಗಿ ಅಲ್ಲಿ ಜೀವಿಸಿ, ನಂತರ ಜೀವ ಸಹಿತವಾಗಿ ವಾಪಸ್​ ಭೂಮಿಯ ಮೇಲೆ ಬರಬೇಕು ಎಂದರೆ ಅಬ್ಬಾ! ಎಂತೆಂಥ ನೋವನ್ನು ಸಹಿಸಿಕೊಳ್ಳಬೇಕು.

    ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ…
    https://www.facebook.com/VVani4U/videos/374604443814030

    ಅಲ್ಲಿ ಬಲುಕಷ್ಟವಾಗಿರುವ ಕೆಲಸವೆಂದರೆ ಮಲ-ಮೂತ್ರ ವಿಸರ್ಜನೆ ಹಾಗೂ ಸ್ನಾನ ಮಾಡುವುದು. ಅದರಲ್ಲಿಯೂ ತಲೆಸ್ನಾನ ಮಾಡುವುದು ಎಂದರೆ ಅಲ್ಲಿ ಅಷ್ಟು ಸುಲಭದ ಮಾತಲ್ಲ.

    ಅದು ಎಷ್ಟು ಕಷ್ಟದ ಮಾತು ಎಂಬುದನ್ನು ಗಗನಯಾತ್ರಿಯೊಬ್ಬರು ಹಂಚಿಕೊಂಡಿದ್ದಾರೆ. ನಾಸಾ ಗಗನಯಾತ್ರಿ ಕ್ಯಾರನ್​ ನೈಬೆರ್ಗ್​ ಎಂಬುವವರು ಶಾಂಪೂ ಹಾಕಿ ಕೂದಲನ್ನು ತೊಳೆಯುತ್ತಿರುವ ವಿಡಿಯೋ ಇದೀಗ ಭಾರಿ ವೈರಲ್​ ಆಗಿದೆ. ಇದು ಕೆಲ ವರ್ಷಗಳ ಹಿಂದೆ ಅಪ್​ಲೋಡ್​ ಮಾಡಿರುವ ವಿಡಿಯೋ. ಆದರೆ ಈಗ ಇದು ಸಾಕಷ್ಟು ಜನರು ಶೇರ್​ ಮಾಡುತ್ತಿದ್ದಾರೆ.

    ಇದಕ್ಕೆ ಪ್ರಮುಖ ಕಾರಣ, ಅಲ್ಲಿ ಗುರುತ್ವಾಕರ್ಷಣೆ ಇಲ್ಲದೇ ಇರುವುದು, ನೀರು ತಲೆ ಮೇಲೆ ಹಾಕಿಕೊಂಡಾಗ ಅದು ನೆಲಕ್ಕೆ ಚೆಲ್ಲಲು ಕಾರಣ ಭೂಮಿಯ ಗುರುತ್ವಾಕರ್ಷಣೆ. ಆದರೆ ಗುರುತ್ವಾಕರ್ಷಣೆಯೇ ಇಲ್ಲದ ಆಗಸದಲ್ಲಿ ನೀರು ಕೆಳಕ್ಕೆ ಹೇಗೆ ಬರಲು ಸಾಧ್ಯ? ನೀರು ಅಲ್ಲಿಯೇ ತೇಲುತ್ತದೆ. ಇದರ ನಡುವೆಯೇ ಹೇಗೆಲ್ಲಾ ತಲೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲಾಗುವುದು ಎಂಬ ವಿಡಿಯೋ ಇದಾಗಿದೆ.

    ನಿರ್ಮಾಪಕ ಅಪ್ಪನ ಫಿಲ್ಮ್​ ಶೂಟಿಂಗ್​​ಗಾಗಿ ಮೇಕೆ ಕಳ್ಳರಾದ ‘ನಟ’ರು!

    ಶಾಂಘೈ ವೇದಿಕೆಯಲ್ಲಿ ಭಾರತ ಬೆಂಬಲಿಸಿದ ರಷ್ಯಾ: ಪಾಕ್, ಚೀನಾಕ್ಕೆ ಭಾರಿ ಮುಖಭಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts