ಈ ‘ನೀಲಿ’ ನಟನ ಮೇಲಿದೆ 25ಕ್ಕೂ ಅಧಿಕ ರೇಪ್‌ ಕೇಸ್‌: ಆರೋಪ ಸಾಬೀತಾದರೆ 250 ವರ್ಷ ಶಿಕ್ಷೆ!

bluefilm
Published on

ಲಾಸ್‌ ಏಂಜಲೀಸ್‌: ಇಲ್ಲಿಯ ನೀಲಿ ಚಿತ್ರ ತಾರೆ, ರಾನ್‌ ಜೆರೆಮಿ ವಿರುದ್ಧ 25ಕ್ಕೂ ಅಧಿಕ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.

15 ವರ್ಷದ ಬಾಲಕಿಯಿಂದ ಹಿಡಿದು ವೃದ್ಧೆಯವರೆಗಿನ 13 ಮಹಿಳೆಯರು ಈತನ ವಿರುದ್ಧ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯದ ಕೇಸು ದಾಖಲು ಮಾಡಿದ್ದಾರೆ.

ಇದನ್ನು ಹೊರತುಪಡಿಸಿದರೆ ಇದಾಗಲೇ 2014ರಿಂದ 2019ರ ಅವಧಿಯ ನಡುವೆಯೂ ಈತ ಅನೇಕ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿರುವುದಾಗಿ ಆರೋಪಿಸಲಾಗಿದ್ದು, ಈ ಪೈಕಿ ನಾಲ್ವರು ದೂರು ದಾಖಲು ಮಾಡಿದ್ದಾರೆ.

ನಾಲ್ಕು ದಶಕಗಳಿಂದ ಪೋರ್ನ್‌ ಸ್ಟಾರ್‌ ಆಗಿ ಹಲವಾರು ವಯಸ್ಕ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ರಾನ್‌ ಜೆರೆಮಿ, ಅಲ್ಲಿಂದ ಇಲ್ಲಿಯವರೆಗೂ ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಆರೋಪವಿದೆ. ಈತ ಇದಾಗಲೇ 1,700ಕ್ಕೂ ಅಧಿಕ ಚಿತ್ರಗಳಲ್ಲಿ ನಡೆಸಿದ್ದಾನೆ ಎಂದು ವರದಿಯಾಗಿದೆ.

ಈತನ ವಿರುದ್ಧ ಇರುವ ಎಲ್ಲಾ ಪ್ರಕರಣಗಳು ಇದೀಗ ಕೋರ್ಟ್‌ನಲ್ಲಿ ಮುಕ್ತಾಯ ಹಂತಕ್ಕೆ ತಲುಪಿದೆ. ಒಂದು ವೇಳೆ ಆರೋಪವೇನಾದರೂ ಸಾಬೀತಾದರೆ ಈತನಿಗೆ ಕನಿಷ್ಠ 250 ವರ್ಷಗಳ ಶಿಕ್ಷೆಯಾಗಲಿದೆ (ಇಷ್ಟು ವರ್ಷಗಳ ಜೈಲುವಾಸ ಒಬ್ಬ ಮನುಷ್ಯನಿಗೆ ಅಸಾಧ್ಯವಾದರೂ, ಘನಘೋರ ತಪ್ಪುಗಳನ್ನು ಮಾಡಿದಾಗ, ಒಟ್ಟಾರೆಯಾಗಿ ಆತ ಎಸಗಿರುವ ತಪ್ಪುಗಳನ್ನು ಗಣನೆಗೆ ತೆಗೆದುಕೊಂಡು ಕೋರ್ಟ್‌ ಜೈಲುವಾಸದ ಅವಧಿಯನ್ನು ತೀರ್ಮಾನ ಮಾಡುತ್ತದೆ. ಅಂದರೆ ಅಪರಾಧಿ ಜೀವನದ ಕೊನೆಯವರೆಗೂ ಜೈಲಿನಲ್ಲಿಯೇ ಇರಬೇಕು).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net