

ಬೆಂಗಳೂರು: ಪೆಟ್ರೋಲ್ ದರದಲ್ಲಿ ಇಂದು ತುಸು ಏರಿಕೆಯಾಗಿದೆ. ನಿನ್ನೆ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 82.03 ರೂ ಇತ್ತು. ಅದು ಇಂದು 82.08 ರೂಪಾಯಿಗೆ ಏರಿದೆ. ಆದರೆ ಡೀಸೆಲ್ ಬೆಲೆ ಮಾತ್ರ ಕೆಲವು ದಿನಗಳಿಂದ ಪ್ರತಿ ಲೀಟರ್ಗೆ 73.56 ರೂಪಾಯಿಯಂತೆ ಮುಂದುವರೆದಿರುವುದಾಗಿ ಭಾರತೀಯ ತೈಲ ನಿಗಮ ಹೇಳಿದೆ.
ದೆಹಲಿಯಲ್ಲಿ ಒಟ್ಟಾರೆ ಕಳೆದ 18 ದಿನಗಳಲ್ಲಿ 15 ದಿನಗಳ ಕಾಲ ಪೆಟ್ರೋಲ್ ಏರಿಕೆ ಕಂಡು ಸುಮಾರು 1.64 ರೂಪಾಯಿ ಏರಿಕೆಯಾಗಿತ್ತು. ಇಂದು ಪ್ರಮುಖ ನಗರಗಳಲ್ಲಿ 4 ರಿಂದ 5 ಪೈಸೆ ಏರಿಕೆಯಾಗಿದೆ. ಕಳೆದ 20 ದಿನಗಳಿಂದ ದೆಹಲಿಯಲ್ಲಿ ಡೀಸೆಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆ ಕಾಣುತ್ತಿದ್ದು, ಬ್ರೆಂಟ್ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ ಬೆಲೆ 44.87 ಡಾಲರ್ನಷ್ಟಿದೆ.
ಇಂದು (ಸೆ.1) ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ ಈ ರೀತಿ ಇದೆ (ರೂಪಾಯಿಗಳಲ್ಲಿ)
ಬೆಂಗಳೂರು- ಪೆಟ್ರೋಲ್ 84.75- ಡೀಸೆಲ್ 77.88
ದೆಹಲಿ- ಪೆಟ್ರೋಲ್ 82.08- ಡೀಸೆಲ್ 73.56
ಕೋಲ್ಕತಾ- ಪೆಟ್ರೋಲ್83.57- ಡೀಸೆಲ್ 77.06
ಮುಂಬೈ- ಪೆಟ್ರೋಲ್88.73- ಡೀಸೆಲ್ 80.11
ಚೆನ್ನೈ- ಪೆಟ್ರೋಲ್ 85.04- ಡೀಸೆಲ್ 78.86