

ಮುಂಬೈ: ಬ್ಲ್ಯೂಫಿಲ್ಮ್ಂ ಕೇಸ್ನಲ್ಲಿ ಸಿಲುಕಿರುವ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಉದ್ಯಮಿ, ರಾಜ್ ಕುಂದ್ರಾ ಅವರನ್ನು ಪೊಲೀಸರು ತೀವ್ರವಾಗಿ ತನಿಖೆ ನಡೆಸುತ್ತಿದ್ದಾರೆ. ಜತೆಗೆ ಈ ಪೋರ್ನ್ ವಿಡಿಯೋದಲ್ಲಿ ಭಾಗಿಯಾಗಿರುವವರನ್ನೆಲ್ಲಾ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.
ಅದೇ ರೀತಿ ಕುಂದ್ರಾ ಬಳಿಯಲ್ಲಿ ಕೆಲಸ ಮಾಡಿದ್ದ ಕಂಟೆಂಟ್ ಕ್ರಿಯೇಟರ್ ತನ್ವೀರ್ ಹಶ್ಮಿ ಅವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಅದಕ್ಕೆ ಹಶ್ಮಿ ಅವರು, ರಾಜ್ಕುಂದ್ರಾ ಯಾರೂ ಮಾಡದದ್ದೇನೂ ಮಾಡಿಲ್ಲ. ಅದೇನು ಬ್ಲೂ ಫಿಲ್ಮ್ಂ ಆಲ್ಲ, ಅದು ಅದು ಸಾಫ್ಟ್ ಪೋರ್ನ್ ಎಂದು ಹೇಳಿದ್ದಾರೆ. ಈ ಕುರಿತು ಮಾಧ್ಯಮದ ಜತೆಗೆ ಮಾತನಾಡಿರುವ ಅವರು, ಪೊಲೀಸರು ನನ್ನಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ರಾಜ್ ಕುಂದ್ರಾ ಪರಿಚಯ ಆಗಿದ್ದು ಯಾವಾಗ? ಇಬ್ಬರ ಮಧ್ಯೆ ವ್ಯವಹಾರ ಹೇಗಿತ್ತು? ಸಿನಿಮಾ ನಿರ್ಮಾಣದ ಕುರಿತ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದರು.
ನಾನು ರಾಜ್ ಕುಂದ್ರಾ ಒಡೆತನದ ಆ್ಯಪ್ಗೆ ಸಂಬಂಧಿಸಿದ ಕಂಟೆಂಟ್ ಸಿದ್ಧಪಡಿಸುವ ಕೆಲಸ ಮಾಡಿದ್ದೇನೆ. ಆದ್ರೆ ನಾನು ರಾಜ್ ಕುಂದ್ರಾ ಕಂಪನಿಯ ಉದ್ಯೋಗಿ ಅಲ್ಲ. ನಾವು ಸುಮಾರು 20 ರಿಂದ 25 ನಿಮಿಷದ ಅವಧಿಯ ಕಿರುಚಿತ್ರ ಮಾಡಿದ್ದೇವೆ. ಆದ್ರೆ ಅದ್ಯಾವುದು ಅಶ್ಲೀಲ ಚಿತ್ರಗಳಲ್ಲ. ಆ ಚಿತ್ರಗಳಿಗೆ ನಾವು ಸಾಫ್ಟ್ ಪೋರ್ನ್ ಅಷ್ಟೇ. ಇಷ್ಟೆಲ್ಲಾ ಮಾಡಿದರೂ ನಾನು ಒಮ್ಮೆಯೂ ರಾಜ್ ಕುಂದ್ರಾ ಅವರನ್ನು ಮುಖಾಮುಖಿಯಾಗಿ ಭೇಟಿಯಾಗಿಲ್ಲ ಎಂದಿದ್ದಾರೆ. ಇವೆಲ್ಲವನ್ನೂ ಪೊಲೀಸರಿಗೆ ಹೇಳಿದ್ರೂ ಜೈಲಿಗೆ ಕಳುಹಿಸಿದ್ದಾರೆ. ನಾನು ಕೋರ್ಟ್ನಲ್ಲಿ ಫೈಟ್ ಮಾಡುತ್ತೇನೆ ಎಂದಿದ್ದಾರೆ.
ಪ್ರಕಾರ ಎಲ್ಲವೂ ನಡೆಯುತ್ತದೆ. ಇದೇ ರೀತಿಯ ಬೋಲ್ಡ್ ಕಂಟೆಂಟ್ ಸಿದ್ಧಪಡಿಸುವ ಹಲವು ಪ್ಲಾಟ್ಫಾರಂಗಳಿದ್ದು, ಅವುಗಳ ಮೇಲೆ ಏಕೆ ಕ್ರಮ ಜರುಗಿಸಿಲ್ಲ, ಅವರನ್ನು ಬಿಟ್ಟು ಇವರನ್ನು ಬಂಧಿಸಿದ್ದು ಏಕೆ? ಅವರು ಮಾಡದ್ದನ್ನು ಕುಂದ್ರಾ ಮಾಡಿಲ್ಲವಲ್ಲ, ಇವರಿಗೆ ಮಾತ್ರ ಏಕೆ ಈ ಶಿಕ್ಷೆ ಎಂದು ಪ್ರಶ್ನಿಸಿದ್ದಾರೆ.