1.5 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಎಸ್.ಆರ್.ವಿಶ್ವನಾಥ್ ಭೂಮಿಪೂಜೆ

vishwa
Published on

ಯಲಹಂಕ: ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆವಲಹಳ್ಳಿ ಗ್ರಾಮದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಮತ್ತು ಶೌಚಗೃಹ ನಿರ್ಮಾಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್.ಆರ್. ವಿಶ್ವನಾಥ್ ಭಾನುವಾರ ಭೂಮಿಪೂಜೆ ನೆರವೇರಿಸಿದರು.

ಆವಲಹಳ್ಳಿ ಗ್ರಾಮದ ರಸ್ತೆಗಳ ಸಮಗ್ರ ಅಭಿವೃದ್ಧಿಗೆ 1.5 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳು, ಗುತ್ತಿಗೆದಾರರಿಗೆ ಸೂಚಿಸಿದ್ದೇನೆ. ಆವಲಹಳ್ಳಿ ಗ್ರಾಮಸ್ಥರು ಪಡಿತರ ಧಾನ್ಯ ಪಡೆಯಲು ಸಿಂಗನಾಯಕನಹಳ್ಳಿ ಗ್ರಾಮಕ್ಕೆ ತೆರಳಬೇಕಿತ್ತು. ಈ ಸಮಸ್ಯೆ ಪರಿಹಾರಕ್ಕೆ ಆವಲಹಳ್ಳಿ ಗ್ರಾಮದಲ್ಲೇ ಪಡಿತರ ವಿತರಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿಶ್ವನಾಥ್ ಹೇಳಿದರು.

ಸಿಂಗನಾಯಕನಹಳ್ಳಿ ಗ್ರಾಪಂ ಅಧ್ಯಕ್ಷೆ ಅಮರಾವತಮ್ಮ, ಉಪಾಧ್ಯಕ್ಷ ಜಿ.ಸಿ.ಮಂಜುನಾಥ್, ಮಾಜಿ ಅಧ್ಯಕ್ಷ ಟಿ. ಮುನಿರೆಡ್ಡಿ, ಮಾಜಿ ಉಪಾಧ್ಯಕ್ಷ ಎಸ್.ಜಿ.ಪ್ರಶಾಂತ್‌ರೆಡ್ಡಿ, ಹೇಮಂತ್ ಕುಮಾರ್, ಜೀವಿತಾ ಮುನಿಕೃಷ್ಣ, ಪ್ರಗತಿಪರ ರೈತ ಕೆ.ಎನ್.ರಾಜಣ್ಣ, ಯಲಹಂಕ ತಾಲೂಕು ಸೊಸೈಟಿ ಉಪಾಧ್ಯಕ್ಷ ಎ. ತಿಮ್ಮರಾಯಿಗೌಡ, ಗ್ರಾಪಂ ಸದಸ್ಯರಾದ ಪದ್ಮಶ್ರೀ ನಾಗರಾಜ್ ರೆಡ್ಡಿ, ನಂಜೇಗೌಡ, ಭಾಗ್ಯಲಕ್ಷ್ಮಿ, ಕಿರಣ್ ಕುಮಾರ್, ವೀಣಾ ಗಿರೀಶ್, ಸುಧರಾಣಿ ಮತ್ತು ಅಂಬರೀಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net