More

    ಪುಲ್ವಾಮಾ ದಾಳಿ: ಪಾಕ್‌ನ ಉಗ್ರ ಮುಖ ಬಯಲು- 5 ಸಾವಿರ ಪುಟಗಳಲ್ಲಿದೆ ಮಾಹಿತಿ

    ನವದೆಹಲಿ: 2019ರ ಫೆಬ್ರುವರಿ 14ರಂದು ಪುಲ್ವಾಮಾದಲ್ಲಿ ಉಗ್ರರು ಅಟ್ಟಹಾಸ ಮೆರೆದು 40 ಮಂದಿ ಭಾರತೀಯ ಯೋಧರು ಪ್ರಾಣ ಕಳೆದುಕೊಂಡಿದ್ದರು. ಈ ದಾಳಿಯ ಕುರಿತಾಗಿ ಒಂದೂವರೆ ವರ್ಷಗಳ ತನಿಖೆ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇದೀಗ ದಾಳಿಯ ಹಿಂದಿನ ಸಂಚಿನ ಕುರಿತಂತೆ ಐದು ಸಾವಿರ ಪುಟಗಳ ಚಾರ್ಜ್‌ಷೀಟ್‌ ಸಿದ್ಧಪಡಿಸಿದೆ.

    ಈ ದಾಳಿಯ ಹಿಂದಿನ ಸಂಚು ಪಾಕಿಸ್ತಾನ ಇರುವ ಕುರಿತು ತನಿಖಾ ಸಂಸ್ಥೆ ವಿಸ್ಕೃತ ವರದಿಯನ್ನು ನೀಡಿದೆ. 5 ಸಾವಿರ ಪುಟಗಳ ಚಾರ್ಜ್‌ಶೀಟ್‌ನಲ್ಲಿ 20 ಭಯೋತ್ಪಾದಕರ ಹೆಸರುಗಳಿವೆ.

    ಜೈಷ್‌ ಸಂಘಟನೆಯ ಉಗ್ರ ಮಸೂದ್ ಅಜರ್ ಮತ್ತು ರೌಫ್ ಅಸ್ಗರ್ ಮಸೂದ್ ಅವರ ಹೆಸರು ಇದರಲ್ಲಿದೆ. ಮಸೂದ್ ಅಜರ್‌ನ ಸೋದರಳಿಯ ಉಮರ್ ಫಾರೂಕ್ ಮತ್ತು ಆದಿಲ್ ದಾರ್ ಅವರಲ್ಲದೆ ದಾಳಿಯಲ್ಲಿ ಭಾಗಿಯಾಗಿರುವ ಉಗ್ರರ ನಡುವೆ ಮಾತುಕತೆ ಮತ್ತು ವಾಟ್ಸ್‌ಆ್ಯಪ್‌ ಚಾಟ್‌ನ ವಿವರಗಳಿವೆ. ಪಾಕಿಸ್ತಾನದಿಂದ ಆರ್‌ಡಿಎಕ್ಸ್ ಅನ್ನು ಅಂತಾರಾಷ್ಟ್ರೀಯ ಗಡಿಯ ಮೂಲಕ ತರುವ ಸಂಪೂರ್ಣ ಪಿತೂರಿಯ ವಿವರಗಳು ಚಾರ್ಜ್‌ಶೀಟ್‌ನಲ್ಲಿದೆ.

    ಸಿಆರ್‌ಪಿಎಫ್ ಬೆಂಗಾವಲು ಮೇಲೆ ಹಲ್ಲೆ ನಡೆಸಿರುವ ಆರೋಪಿ ಪುಲ್ವಾಮ್‌ನ ಬಿಲಾಲ್ ಅಹ್ಮದ್ ಕುಚೆಯನ್ನು ಎನ್‌ಐಎ ಇದಾಗಲೇ ಬಂಧಿಸಿದೆ. ಜತೆಗೆ ಈವರೆಗೆ 7 ಭಯೋತ್ಪಾದಕರು ಸೆರೆ ಸಿಕ್ಕಿದ್ದಾರೆ. ಈತ ಇತರ ಉಗ್ರರಾದ ಆದಿಲ್ ಅಹ್ಮದ್ ದಾರ್‌ನನ್ನು ದಾಳಿಯ ಮೊದಲು ತನ್ನ ಮನೆಯಲ್ಲಿ ಅಡಗಿಕೊಳ್ಳಲು ಸಹಾಯ ಮಾಡಿದ್ದುದು ತಿಳಿದುಬಂದಿದೆ. ಪಾಕಿಸ್ತಾನದ ನೆರವಿನೊಂದಿಗೆ ದಾಳಿಯ ಸ್ಕೆಚ್‌ ರೂಪುಗೊಂಡದ್ದು ಇಲ್ಲಿಂದಲೇ.

    ಇದನ್ನೂ ಓದಿ: ಕರೊನಾ ಲಸಿಕೆ ಉತ್ಪಾದನೆಗೆ ಭಾರತದ ಮೇಲೆ ರಷ್ಯಾ ಒಲವು: ಮೋದಿ ಜತೆ ಮಾತುಕತೆ

    ‌ಈ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪದ ಮೇಲೆ ತಂದೆ-ಮಗಳು ತಾರಿಕ್ ಅಹ್ಮದ್ ಷಾ ಮತ್ತು ಇನ್ಶಾ ಜಾನ್ ಅವರನ್ನು ಎನ್ಐಎ ಬಂಧಿಸಿದೆ. ಈ ಪ್ರಕರಣದಲ್ಲಿ ಎನ್‌ಐಎ ಶಕೀರ್ ಬಶೀರ್ ಮಾರ್ಗರೆ, ತಾರಿಕ್ ಅಹಮ್ ಶಾ, ಇನ್ಶಾ ಜಾನ್, ವೈಜ್ ಉಲ್ ಇಸ್ಲಾಂ, ಮೊಹಮ್ಮದ್ ಅಬ್ಬಾಸ್ ರಾಥೋರ್ ಮತ್ತು ಮೊಹಮ್ಮದ್ ಇಕ್ಬಾಲ್ ರಾಥೋರ್ ಅವರನ್ನು ಈ ಪ್ರಕರಣದಲ್ಲಿ ಬಂಧಿಸಿದೆ.

    ಬಿಲಾಲ್ ದಾಳಿಯ ಹೊಣೆ ಹೊತ್ತಿದ್ದ ಉಗ್ರರಿಗೆ ದುಬಾರಿ ಮೊಬೈಲ್ ಫೋನ್‌ಗಳನ್ನು ನೀಡಿದ್ದ. ಈ ಮೂಲಕ ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ನಾಯಕರೊಂದಿಗೆ ಸಂವಹನ ನಡೆಸುತ್ತಿರುವ ಕುರಿತು ಚಾರ್ಜ್‌ಷೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಪಾಕಿಸ್ತಾನದ ಕುತಂತ್ರ ಬುದ್ಧಿ ಹೇಗೆಲ್ಲಾ ಈ ದಾಳಿಯನ್ನು ನಡೆಸಿದೆ ಎಂಬ ಸಂಪೂರ್ಣ ವರದಿ ಈ ಚಾರ್ಜ್‌ಷೀಟ್‌ನಲ್ಲಿ ಉಲ್ಲೇಖವಾಗಿದೆ.

    ಅತ್ಯಂತ ಕ್ರೂರವಾಗಿ ಲಾಕಪ್‌ ಡೆತ್‌ ಮಾಡಿದ್ದ ಆರೋಪಿ ಪೊಲೀಸ್‌ ಕರೊನಾಕ್ಕೆ ಬಲಿ

    ಮಚ್ಚು ಹಿಡಿದು ಚಿನ್ನದಂಗಡಿಗೆ ನುಗ್ಗಿದವನ ಚಚ್ಚಿದಳು ಚಿಕ್ಕಮಗಳೂರು ಮಹಿಳೆ!

    ಕೊಲೆಮಾಡಿ ಎಂದು ಪತಿಗೆ ಅಂಗಲಾಚಿದ ಗರ್ಭಿಣಿ: ಮುಂದೆಲ್ಲವೂ ಅನಾಹುತವೇ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts