More

    ಪುಲ್ವಾಮಾ ಹುತಾತ್ಮನ ತಂಗಿಯ ಮದುವೆ ನೆರವೇರಿಸಿದ ಯೋಧರು: ಅಣ್ಣನ ಸ್ಥಾನ ತುಂಬಿದ ಅವಿಸ್ಮರಣೀಯ ವಿವಾಹ

    ಲಖನೌ: 2019ರ ಫೆಬ್ರುವರಿ 14ರಂದು ಪುಲ್ವಾಮಾದಲ್ಲಿ ನಡೆದ ಬಾಂಬ್‌ ದಾಳಿಯಲ್ಲಿ ಹುತಾತ್ಮರಾದ ಯೋಧ ಶೈಲೇಂದ್ರ ಪ್ರತಾಪ್‌ ಸಿಂಗ್‌ ಅವರ ಸಹೋದರಿಯ ಮದುವೆಯನ್ನು ಖುದ್ದು ಸಿಆರ್‌ಪಿಎಫ್‌ ಯೋಧರೇ ಮುಂದೆ ನಿಂತು ಮಾಡಿಸಿಕೊಟ್ಟಿದ್ದಾರೆ.

    ಸಿಂಗ್‌ ಅವರ ಸಹೋದರಿ ಜ್ಯೋತಿ ಅವರ ಮದುವೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಯೋಧರು ತಾವೇ ಮುಂದೆ ನಿಂತು ಮದುವೆ ನಡೆಸಿಕೊಟ್ಟಿದ್ದಾರೆ. ಆಕೆಯ ಅಣ್ಣನ ಸ್ಥಾನವನ್ನು ತುಂಬಿ ಮದುವೆಯ ಸಕಲ ಜವಾಬ್ದಾರಿಯನ್ನು ವಹಿಸಿಕೊಟ್ಟಿದ್ದಾರೆ. ಮದುವೆ ಮನೆಗೆ ಮುಂಚೆಯೇ ಬಂದಿದ್ದ ಯೋಧರು ಎಲ್ಲಾ ಕಾರ್ಯಗಳ ಜವಾಬ್ದಾರಿ ವಹಿಸಿಕೊಂಡರು.

    ವಧುವನ್ನು ಮಂಟಪಕ್ಕೆ ಕರೆತರುವ ಮೂಲಕ ಸಹೋದರನನ್ನು ಕಳೆದುಕೊಂಡಿರುವ ಭಾವನೆ ಈ ಮದುಮಗಳಿಗೆ ಬರದಂತೆ ನೋಡಿಕೊಂಡರು. ಖುದ್ದು ಮುಂದೆ ನಿಂತು ಈ ಕಾರ್ಯವನ್ನು ನಡೆಸಿಕೊಟ್ಟರು.
    ‘ಹುತಾತ್ಮ ಯೋಧ ಶೈಲೇಂದ್ರ ಪ್ರತಾಪ್‌ ಸಿಂಗ್‌ ಅವರ ಸಹೋದರಿಯ ವಿವಾಹ ಕಾರ್ಯಕ್ರಮದಲ್ಲಿ ಹಿರಿಯ ಸಹೋದರರಾಗಿ ಸಿಆರ್‌ಪಿಎಫ್‌ ಯೋಧರು ಪಾಲ್ಗೊಂಡಿದ್ದರು’ ಎಂಬ ಶೀರ್ಷಿಕೆ ಇರುವ ಮದುವೆ ಫೋಟೋಗಳನ್ನು ಸಿಆರ್‌ಪಿಎಫ್‌ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಶೇರ್‌ ಮಾಡಿದೆ.

    ಯೋಧರ ಈ ಕಾರ್ಯವನ್ನು ಕಂಡು ಸಿಂಗ್‌ ಅವರ ಪಾಲಕರು ಭಾವುಕರಾದರು. ‘ನನ್ನ ಮಗ ಈಗ ಈ ಜಗತ್ತಿನಲ್ಲಿಲ್ಲ. ಆದರೆ ಈ ಎಲ್ಲಾ ಯೋಧರ ರೂಪದಲ್ಲಿ ನಾವು ಅನೇಕ ಮಕ್ಕಳನ್ನು ನಾವು ಹೊಂದಿದ್ದೇವೆ ಎನಿಸುತ್ತಿದೆ. ಕಷ್ಟ, ಸುಖದ ಸಂದರ್ಭದಲ್ಲಿ ಎಲ್ಲರೂ ನಮ್ಮೊಟ್ಟಿಗಿರುತ್ತಾರೆ’ ಎಂದು ಸಿಂಗ್‌ ಅವರ ತಂದೆ ನುಡಿದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts