More

    ಕೆಲವೆಡೆ ಇವಿಎಂನಲ್ಲಿ ತಾಂತ್ರಿಕ ದೋಶ

    ಬೇಲೂರು : ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆ ಅಂಗವಾಗಿ ಬೇಲೂರು ವಿದಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ತಾಲೂಕಿನ ಕೆಲ ಮತಗಟ್ಟೆಯಲ್ಲಿ ಇವಿಎಂ ಮಿಷನ್ ಕೆಲ ಸಮಯ ಕೈಕೊಟ್ಟಿದ್ದು ಬಿಟ್ಟರೆ, ಯಾವುದೇ ಅಹಿತಕರ ಘಟನೆಗಳಿಗೂ ಅವಕಾಶವಾಗದಂತೆ ಶಾಂತಿಯುತವಾಗಿ ಶೇ. 76.27 ರಷ್ಟು ಮತದಾನ ನಡೆಯಿತು.
    ತಾಲೂಕಿನಾದ್ಯಂತ ಎಲ್ಲ ಮತಗಟ್ಟೆಗಳಲ್ಲೂ ಬೆಳಗ್ಗೆ 7ರಿಂದ ಪ್ರಾರಂಭವಾದ ಮತದಾನ ಬಿರುಸಿನಿಂದ ಕೂಡಿತ್ತು. ಮಧ್ಯಾಹ್ನವಾಗುತ್ತಿದ್ದಂತೆ ನಿಧಾನ ಗತಿಯಲ್ಲಿ ಸಾಗಿತು. ಸಂಜೆ 4ರ ನಂತರ ಬಿರುಸು ಗೊಂಡಿತು. ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
    ಬೆಳಗಿನ ಅವಧಿಯಲ್ಲಿ ಗ್ರಾಮಾಂತರ ಪ್ರದೇಶದ 4- 5 ಮುತಗಟ್ಟೆಗಳಲ್ಲಿ ಇವಿಎಂ ಮತಯಂತ್ರ ಕೈಕೊಟ್ಟಿತು. ಇವಿಎಂ ಸೆಕ್ಟರ್ ಅಧಿಕಾರಿಗಳ ತಂಡ ಆಗಮಿಸಿ ಪೊಲೀಸರ ಸಮ್ಮುಖದಲ್ಲಿ ತುರ್ತು ಕಾರ್ಯಾಚರಣೆ ನಡೆಸಿ ಸರಿಪಡಿಸಿತು. ಮತ್ತೆ ಮತದಾನ ಮುಂದುವರಿಯಿತು. ಸಂಜೆ 6ರ ನಂತರ ಆಗಮಿಸಿದ ಮತದಾರರಿಗೂ ಕೆಲವೆಡೆ ಹಕ್ಕು ಚಲಾವಣೆಗೆ ಅವಕಾಶ ಕಲ್ಪಿಸಲಾಯಿತು.
    ವಿಶೇಷವೆಂದರೆ ಮತಗಟ್ಟೆಗೆ ಬಂದಿದ್ದ ಮತದಾರರು ಬಿಸಿಲಿನ ತಾಪಕ್ಕೆ ತುತ್ತಾಗಬೇಕಾಯಿತು. ಪ್ರಥಮ ಬಾರಿಗೆ ಮತದಾನ ಮಾಡಲು ಆಗಮಿಸಿದ ಯುವ ಮತದಾರರು ಸಂತೋಷದಿಂದ ಹಕ್ಕು ಚಲಾಯಿಸಿದರು.
    ಮುಖಂಡರು ಭಾಗಿ: ಶಾಸಕ ಎಚ್.ಕೆ.ಸುರೇಶ್, ಬೇಲೂರು ಪಟ್ಟಣದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಎಲ್ಲ ಮತಗಟ್ಟೆಗಳಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts