ಕರೊನಾ ಲಸಿಕೆ ಉತ್ಪಾದನೆಗೆ ಭಾರತದ ಮೇಲೆ ರಷ್ಯಾ ಒಲವು: ಮೋದಿ ಜತೆ ಮಾತುಕತೆ

lsike
Published on

ರಷ್ಯಾ: ಕರೋನವೈರಸ್ ಲಸಿಕೆ ಸ್ಫುಟ್ನಿಕ್ ವಿ. ತಯಾರಿಸಿರುವ ರಷ್ಯಾ, ಈ ಕುರಿತು ಭಾರತದ ಜತೆ ಸೇರಿ ಸಾಮೂಹಿಕ ಉತ್ಪಾದನೆ ಮಾಡಲು ಒಲವು ತೋರಿದೆ. ಇಷ್ಟೇ ಅಲ್ಲದೇ, ಈ ಲಸಿಕೆ ತಯಾರಿಕೆಗೆ ಸಂಬಂಧಿಸಿದ ಡಾಟಾಗಳನ್ನು ಭಾರತಕ್ಕೆ ನೀಡಲು ರಷ್ಯಾ ಮುಂದಾಗಿದೆ.

ಈ ಕುರಿತು ಚಿಂತನೆ ನಡೆಸಿರುವ ರಷ್ಯಾ, ಇದಾಗಲೇ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಔಪಚಾರಿಕವಾಗಿ ಸಂಪರ್ಕಿಸಿದೆ. ಮಂಗಳವಾರ ಮೋದಿ ಅವರನ್ನು ರಷ್ಯಾದ ರಾಯಭಾರಿ ಸಂಪರ್ಕಿಸಿದ್ದು ಈ ಕುರಿತು ಮಾತುಕತೆ ನಡೆಸಿರುವುದಾಗಿ ತಿಳಿದುಬಂದಿದೆ.

ಭಾರತದಲ್ಲಿನ ರಷ್ಯಾದ ರಾಯಭಾರಿ ನಿಕೋಲಾಯ್ ಕುಡಾಶೇವ್ ಅವರು ಭಾರತದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರಾಧ್ಯಾಪಕ ಕೆ.ವಿಜಯರಾಘವನ್, ಕಾರ್ಯದರ್ಶಿ ಡಿಬಿಟಿ (ಜೈವಿಕ ತಂತ್ರಜ್ಞಾನ ವಿಭಾಗ), ರಾನು ಸ್ವರೂಪ್ ಮತ್ತು ಆರೋಗ್ಯ ಸಂಶೋಧನಾ ವಿಭಾಗದ ಕಾರ್ಯದರ್ಶಿ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕರಾಗಿರುವ ಡಾ. ಬಲರಾಮ್ ಭಾರ್ಗವ ಅವರನ್ನು ಸಂಪರ್ಕಿಸಿರುವುದಾಗಿ ವರದಿಗಳು ಹೇಳಿವೆ.

ಇದನ್ನೂ ಓದಿ: ವೃದ್ಧೆಯನ್ನೇ ಹಿಂಬಾಲಿಸಿದ ಯುವಕ ಹೀಗಾ ಮಾಡೋದು? ಆತನ ದುಷ್ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆ!

“ಭಾರತದಲ್ಲಿನ ರಷ್ಯಾದ ರಾಯಭಾರಿ ಪ್ರಧಾನ ವೈಜ್ಞಾನಿಕ ಸಲಹೆಗಾರ ಮತ್ತು ಆರೋಗ್ಯ ಸಂಶೋಧನೆ ಮತ್ತು ಜೈವಿಕ ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿಗಳ ಕಚೇರಿಗಳೊಂದಿಗೆ ಈ ಕುರಿತು ಮಾತುಕತೆ ನಡೆಸಿದ್ದಾರೆ. ಲಸಿಕೆ ಕುರಿತು ಭಾರತದೊಂದಿಗೆ ವ್ಯವಹರಿಸಲು ರಷ್ಯ ಉತ್ಸುಕವಾಗಿದೆ. ಸ್ಪುಟ್ನಿಕ್ ವಿ ಕುರಿತು ಸಾಕಷ್ಟು ಮಾಹಿತಿ ಮತ್ತು ಡೇಟಾವನ್ನು ಸಕ್ರಿಯವಾಗಿ ಹಂಚಿಕೊಳ್ಳಲು ಕೂಡ ರಷ್ಯಾ ಮುಂದಾಗಿದೆ’ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಗಸ್ಟ್ 11 ರಂದು ರಷ್ಯಾವು ಕರೊನಾ ಲಸಿಕೆಯನ್ನು ಅನುಮೋದಿಸಿದ ವಿಶ್ವದ ಮೊದಲ ರಾಷ್ಟ್ರವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net