ಬಾಲಕಿ ಹೂವುಕಿತ್ತಳೆಂದು 40 ದಲಿತ ಕುಟುಂಬಕ್ಕೆ ಇವರು ಮಾಡಿದ್ದೇನು ನೋಡಿ!

dalith family
Published on

ದೆಂಕನಾಲ್‌ (ಒಡಿಶಾ): ಜಾತಿಯತೆಯ ಬಗ್ಗೆ ಎಷ್ಟೇ ಮಾತನಾಡಿದರೂ, ಜಾತಿ ಪದ್ಧತಿಯನ್ನು ಹೋಗಲಾಡಿಸುವ ಕುರಿತಾಗಿ ಎಷ್ಟೇ ತಿಳಿವಳಿಕೆ ಹೇಳಿದರೂ, ಅಭಿಯಾನಗಳು ನಡೆದರೂ ಮೇಲ್ಜಾತಿ, ಕೆಳಜಾತಿ ಎನ್ನುವ ಕಟ್ಟುಪಾಡಿನಿಂದ ಎಷ್ಟೋ ಊರುಗಳು ಹೊರಬರಲೇ ಇಲ್ಲ.

ಅಂಥದ್ದೊಂದು ಜಾತಿ ಪದ್ಧತಿಯ ಭೀಕರತೆಗೆ ಸಾಕ್ಷಿಯಾಗಿದೆ ಒಡಿಶಾದ ದೆಂಕನಾಲ್‌ ಎಂಬ ಗ್ರಾಮ. ಮೇಲ್ಜಾತಿಗೆ ಸೇರಿದವರ ತೋಟದಲ್ಲಿ ಒಬ್ಬಳು ಬಾಲಕಿ ಹೂ ಕಿತ್ತಳೆಂಬ ಕಾರಣಕ್ಕೆ 40 ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ನಡೆದಿದೆ.

ಒಡಿಶಾದ ದೆಂಕನಾಲ್‌ ಜಿಲ್ಲೆಯ ಕಾಂತಿಯೊ ಕಟೆನಿ ಎಂಬ ಗ್ರಾಮದಲ್ಲಿ ಈ ಘಟನೆ ಕೆಲ ದಿನಗಳ ಹಿಂದೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

ಮೇಲ್ಜಾತಿಯವರ ತೋಟದಲ್ಲಿ ನಮ್ಮ ಸುಮುದಾಯದ ಬಾಲಕಿ ಸೂರ್ಯಕಾಂತಿ ಹೂ ಕಿತ್ತಳು ಎಂಬ ಕಾರಣಕ್ಕೆ 40 ಕುಟುಂಬಗಳಿಗೆ ಬಹಿಷ್ಕಾರ ವಿಧಿಸಲಾಗಿದೆ. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೆವು. ಸಮಸ್ಯೆ ಬಗೆಹರಿಸಿಕೊಳ್ಳಲು ಪೊಲೀಸರು ಇಬ್ಬರನ್ನೂ ಸಭೆಗೆ ಕರೆದಿದ್ದರು. ಆದರೆ, ಅವರು ಬರಲಿಲ್ಲ. ಕೆಲ ದಿನಗಳ ನಂತರ ನಾವು ಮತ್ತೆ ದೂರು ನೀಡಿದ್ದೇವೆ ಎಂದು ಬಹಿಷ್ಕಾರಕ್ಕೊಳಗಾದ ಕುಟುಂಬಗಳಲ್ಲಿ ಒಬ್ಬರಾದ ಬಿಜಯ್‌ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮಾತನಅಡಿರುವ ಗ್ರಾಮದ ಮುಖಂಡ ಪ್ರಾಣಬಂಧು ದಾಸ್‌, ಕೆಲ ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಇದೀಗ ಜಾತಿಯ ತಿರುವು ಪಡೆದುಕೊಂಡಿದೆ. ಪೊಲೀಸರ ಎದುರು ಸಮಸ್ಯೆ ಬಗೆಹರಿಸಿಕೊಳ್ಳಲಾಗಿದೆ. ಸಭೆಯಲ್ಲಿ ಎಲ್ಲರೂ ಒಪ್ಪಿಕೊಂಡಂತೆ ಇಂಥ ನಿರ್ಧಾರದಿಂದ ನಾವು ಹಿಂದಕ್ಕೆ ಸರಿದಿದ್ದೇವೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net