

ನವದೆಹಲಿ: ಚೀನಾ ಮೂಲಕ ಪಬ್ಜಿ ಆ್ಯಪ್ ಭಾರತ ನಿಷೇಧ ಹೇರಿರುವ ಬೆನ್ನಲ್ಲೇ ಅದರ ಭಯಾನಕತೆಯ ಒಂದೊಂದೇ ಕಥೆಗಳು ಹೊರಬರುತ್ತಿವೆ.
ಇದಾಗಲೇ ಹಲವಾರು ಮಂದಿ ಅದರಲ್ಲಿಯೂ ಚಿಕ್ಕಮಕ್ಕಳು ಈ ಆಟದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಹಲವಾರು ಘಟನೆಗಳು ನಡೆದಿವೆ. ಈ ಆಟದಲ್ಲಿ ನೀಡುವ ಟಾಸ್ಕ್ಗಳನ್ನು ಮಾಡಲು ಹೋಗಿ ಮಕ್ಕಳು, ಯುವಕರು ಜೀವ ಕಳೆದುಕೊಂಡಿದ್ದಾರೆ.
ಆದರೆ ಇಲ್ಲೊಬ್ಬ 15 ವರ್ಷದ ಬಾಲಕ, ಈ ಆಟದ ಗೀಳಿಗೆ ಬಿದ್ದು, ಬಿಎಸ್ಎನ್ಎಲ್ ಉದ್ಯೋಗದಿಂದ ನಿವೃತ್ತಿಯಾಗಿರುವ ತನ್ನ ಅಜ್ಜನ ಪಿಂಚಣಿ ಹಣವನ್ನು ಪೂರ್ತಿ ಗುಳುಂ ಮಾಡಿ ಹಾಕಿದ್ದಾನೆ! ಅಜ್ಜನ ಅಕೌಂಟ್‌ನಿಂದ 2.3 ಲಕ್ಷ ಖರ್ಚು ರೂಪಾಯಿ ಕದ್ದು ಆಟಕ್ಕಾಗಿ ವ್ಯಯಿಸಿದ್ದಾನೆ.
ಈ ಆಟದಲ್ಲಿ ಟಾಸ್ಕ್ ರೂಪದಲ್ಲಿ ಗನ್‌ಗಳು ಹಾಗೂ ಇತರ ಸಲಕರಣೆಗಳನ್ನು ಕೊಂಡುಕೊಳ್ಳುವಂತೆ ಹೇಳಲಾಗುತ್ತದೆ. ಅದನ್ನು ಕೊಂಡುಕೊಳ್ಳಲು ಈ ಬಾಲಕ ಅಜ್ಜನ ಬ್ಯಾಂಕ್ನಿಂದ ಅವರಿಗೆ ತಿಳಿಯದಂತೆ ಹಣವನ್ನು ಕಳ್ಳತನ ಮಾಡುತ್ತಿದ್ದ.
ಇದು ನಡೆಯುತ್ತಿದ್ದು ವರ್ಷಗಳೇ ಆಗಿದ್ದು, ಇದೀಗ ಅಜ್ಜನಿಗೆ ತನ್ನ ಅಕೌಂಟ್‌ನಿಂದ ಹಣ ಖಾಲಿಯಾಗಿರುವುದು ಕಂಡಿದೆ. ತನ್ನ ಪಾಸ್ಬುಕ್, ಪಾಸ್ವರ್ಡ್ ಎಲ್ಲವೂ ಮೊಮ್ಮನಿಗೆ ತಿಳಿದಿದ್ದ ಹಿನ್ನೆಲೆಯಲ್ಲಿ ಆತನನ್ನು ಅಜ್ಜ ಕೇಳಿದ್ದಾರೆ. ಅದಕ್ಕೆ 'ಬುದ್ಧಿವಂತ' ಬಾಲಕ, ಅಕೌಂಟ್ ಹ್ಯಾಕ್ ಆಗಿದೆ ಎಂದು ಹೇಳಿದ್ದಾನೆ.
ಇದರಿಂದ ಗಾಬರಿಗೊಂಡ ಅಜ್ಜ ಪೊಲೀಸರ ಬಳಿ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರಿಗೆ ಹ್ಯಾಕ್ ಆಗಿಲ್ಲ ಎನ್ನುವುದು ತಿಳಿದು, ಮನೆಯವರ ಮೇಲೆ ಸಂದೇಹ ಬಂದಿದೆ.
ಮನೆಯವರನ್ನೇ ವಿಚಾರಿಸಿದಾಗ ಹೆದರಿದ ಬಾಲಕ ಸತ್ಯ ಒಪ್ಪಿಕೊಂಡಿದ್ದಾನೆ. ತಾನೇ ಪಬ್ಜಿ ಆಡಲು ಹಣ ತೆಗೆಯುವಾಗ ಬರುತ್ತಿದ್ದ ಒಟಿಪಿ ಹಾಗೂ ಬ್ಯಾಂಕಿನ ಮೇಸೆಜ್‌ಗಳನ್ನ ಅಜ್ಜನ ಫೋನ್‌ನಿಂದ ಡಿಲೀಟ್ ಮಾಡಿರುವುದಾಗಿಯು ಹೇಳಿದ್ದಾನೆ. ಸದ್ಯ ಬಾಲಕನಿಗೆ ಕೌನ್ಸಿಲಿಂಗ್‌ಗೆ ಕಳುಹಿಸಲಾಗಿದೆ.
ಮಕ್ಕಳನ್ನು ನಂಬಿ ಬ್ಯಾಂಕ್ ಪಾಸ್ವರ್ಡ್ ಕೊಡುವುದು, ಅವರ ಕೈಯಲ್ಲಿ ಮೊಬೈಲ್ ಫೋನ್ ಕೊಡುವುದಕ್ಕೆ ಕಡಿವಾಣ ಹಾಕಬೇಕಿದೆ ಎಂದಿದ್ದಾರೆ ಪೊಲೀಸರು.