

ಉತ್ತರ: ಹಿಂದೂ ಮೃತ ಪುರುಷ ಅಥವಾ ಸ್ತ್ರೀಯ ಸ್ವಯಾರ್ಜಿತ ಅಥವಾ ಪ್ರತ್ಯೇಕ ಆಸ್ತಿಯಲ್ಲಿ, ಅವರ ಎಲ್ಲ ಮಕ್ಕಳಿಗೂ ಸಮಭಾಗ ಇರುತ್ತದೆ. ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ಎನ್ನುವ ವ್ಯತ್ಯಾಸ ಇರುವುದಿಲ್ಲ. ಹಾಗೆಯೇ ಪಿತ್ರಾರ್ಜಿತ ಆಸ್ತಿಯಲ್ಲಿಯೂ ನಿಗದಿತ ಭಾಗ ಹೆಣ್ಣು ಮಕ್ಕಳಿಗೆ ಇದ್ದೇ ಇರುತ್ತದೆ.
ನಿಮ್ಮ ತಾಯಿ ಬದುಕಿದ್ದರೆ , ಮಕ್ಕಳ ಜೊತೆಗೆ ಅವರಿಗೂ ಭಾಗ ಬರುತ್ತದೆ. ತವರಿನವರು ಭಾಗ ಕೊಡದಿದ್ದರೆ, ನೀವು ವಿಭಾಗದ ದಾವೆ ಹಾಕಬಹುದು. ವಿಭಾಗದ ದಾವೆಗೆ ಕೋರ್ಟ್ ಶುಲ್ಕ ಬಹಳ ಕಡಿಮೆ ಇರುತ್ತದೆ.