ಡ್ಯಾಡಿ... ಕೊನೆಯದಾಗಿ ಮುಖ ನೋಡಿಬಿಡಿ, ವಿಡಿಯೋ ಕಾಲ್‌ ಮಾಡಿ 6ನೇ ಮಹಡಿಯಿಂದ ಜಿಗಿದ ಖ್ಯಾತ ಮಾಡೆಲ್‌!

gungun
Published on

ಜೈಪುರ: ಪ್ರಸಿದ್ಧ ಮಾಡಿಲ್‌ ಗುಂಗುನ್‌ ಉಪಾಧ್ಯಾಯ ಅವರು ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಜಸ್ಥಾನದ ಜೋಧ್‍ಪುರದಲ್ಲಿ ನಡೆದಿದೆ.

ಉದಯಪುರದಿಂದ ಜೋಧ್‍ಪುರಕ್ಕೆ ಆಗಮಿಸಿದ ಗುಂಗುನ್‌, ಅಲ್ಲಿ ಹೋಟೆಲ್‌ ಒಂದರಲ್ಲಿ ಉಳಿದುಕೊಂಡಿದ್ದಾರೆ. ನಂತರ ತಮ್ಮ ತಂದೆಗೆ ವಿಡಿಯೋ ಕಾಲ್‌ ಮಾಡಿದ ಈಕೆ, ‘ಕೊನೆಯದಾಗಿ ನನ್ನ ಮುಖ ನೋಡಿಬಿಡಿ ಡ್ಯಾಡಿ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದಿದ್ದಾರೆ. ಅವರ ತಂದೆ ಮಾತನಾಡುವ ಮುನ್ನವೇ ಕಾಲ್‌ ಕಟ್ ಆಗಿದೆ.

ಇದರಿಂದ ಭಯಗೊಂಡ ಅವರ ತಂದೆ ಗಣೇಶ್‌ ಉಪಾಧ್ಯಾಯ ಅವರು, ಪೊಲೀಸರಿಗೆ ಕಡೆ ಮಾಡಿ ಮಾಹಿತಿ ನೀಡಿದ್ದಾರೆ. ಮಗಳು ಎಲ್ಲಿ ಉಳಿದುಕೊಂಡಿದ್ದಾಳೆ ಎಂಬ ಸುಳಿವು ಕೂಡ ಅವರಿಗೆ ಇರಲಿಲ್ಲ.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಫೋನ್‌ ಟ್ರೇಸ್‌ ಮಾಡಿ ಗುಂಗುನ್ ಇರುವ ಸ್ಥಳ ಪತ್ತೆ ಹಚ್ಚಿದ್ದಾರೆ. ಪೊಲೀಸರು ಸ್ಥಳಕ್ಕೆ ಹೋಗುವ ಮುನ್ನವೇ ಹೋಟೆಲ್‍ನ ಆರನೇ ಮಹಡಿಯಿಂದ ಜಿಗಿದಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಾಗಿದೆ. ಆದರೆ ಕಾಲು ಮತ್ತು ಎದೆಯ ಭಾಗದ ಮೂಳೆಗಳು ಮುರಿದು ಹೋಗಿರುವ ಕಾರಣ ಸಾವು -ಬದುಕಿನ ನಡುವೆ ಇದೀಗ ಹೋರಾಡುತ್ತಿದ್ದಾರೆ.

ವಿಪರೀತ ರಕ್ತಸ್ರಾವವಾಗಿದ್ದರಿಂದ ವೈದ್ಯರು ರಕ್ತ ಕೊಡುತ್ತಿದ್ದಾರೆ. ಆದರೆ ಈಗಲೇ ಏನು ಎಂದು ಹೇಳುವುದು ಕಷ್ಟ ಎಂದಿದ್ದಾರೆ ವೈದ್ಯರು. ಗುಂಗುನ್ ಸಾಯುವ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಎಂಬುವುದು ಇನ್ನೂ ತಿಳಿದುಬಂದಿಲ್ಲ. ಪ್ರಜ್ಞೆ ಬಂದರೆ ವಿಷಯ ತಿಳಿಯಬೇಕಿದೆ. ಈಕೆ ಈ ಭಾಗದಲ್ಲಿ ಖ್ಯಾತ ಮಾಡೆಲ್‌ ಎಂದು ಗುರುತಿಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net