More

    VIDEO: ಎಂಟು ಮಂದಿಗೆ ಒಬ್ಬನೇ ಗಂಡ: ಜಗಳವೂ ಇಲ್ಲ, ಗಲಾಟೆಯೂ ಇಲ್ಲ… ಸುಖ ಸಂಸಾರದ ಗುಟ್ಟು ಬಿಚ್ಚಿಟ್ಟಾನೆ ಪತಿರಾಯ…

    ಬ್ಯಾಂಕಾಕ್: ಒಬ್ಬ ಪತಿ ಮತ್ತು ಓರ್ವ ಪತ್ನಿ ಒಟ್ಟಾಗಿ ಖುಷಿಯಾಗಿ ಸಂಸಾರ ಮಾಡುವುದೇ ಈಗಿನ ಕಾಲದಲ್ಲಿ ಬಹಳ ಕಷ್ಟ ಎನ್ನುವಂತಾಗಿದೆ. ಅದರಲ್ಲಿ ಇಬ್ಬರು ಪತ್ನಿಯರು ಇದ್ದರಂತೂ ಮುಗಿದೇ ಹೋಯ್ತು ಅವರ ಕಥೆ. ಅಂಥದ್ದರಲ್ಲಿ ಒಬ್ಬನೇ ಎಂಟು ಮಂದಿಯನ್ನು ಮದುವೆಯಾಗಿ ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ ಎಂದರೆ ನಂಬಬಲ್ಲಿರಾ?

    ನಂಬುವುದು ಕಷ್ಟವೇ. ಆದರೂ ಇಂಥದ್ದೊಂದು ಸುಖ ಸಂಸಾರ ಇರುವುದು ಥಾಯ್ಲೆಂಡ್‌ನಲ್ಲಿ. ಇದು ವಂಗ್ ಡ್ಯಾಮ್ ಸೊರೋಟ್ ಎಂಬುವವನ ಕುಟುಂಬ. ಈತ ತನ್ನ ಎಂಟು ಮಂದಿ ಪತ್ನಿಯರ ಜತೆ, ಅದೂ ಒಂದೇ ಮನೆಯಲ್ಲಿ ಯಾವುದೇ ಗದ್ದಲ-ಗಲಾಟೆ ಇಲ್ಲದೆ ಸುಖವಾಗಿ ಸಂಸಾರ ನಡೆಸುತ್ತಿದ್ದಾನೆ. ಇದೀಗ ಈತನ ಸಂಸಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ಎಲ್ಲರ ಅಚ್ಚರಿಕೆಗೆ ಕಾರಣವಾಗಿದೆ.

    ತನ್ನ ಸುಖ ಸಂಸಾರದ ಗುಟ್ಟನ್ನು ವಂಗ್‌ ಸ್ಥಳೀಯ ಪತ್ರಿಕೆಯೊಂದರಲ್ಲಿ ತೆರೆದಿಟ್ಟಿದ್ದಾನೆ. ಈ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಅವನು ಏನು ಹೇಳಿದ್ದಾನೆ ನೋಡಿ…

    ‘ನಾನೊಬ್ಬ ವೃತ್ತಿಪರ ಟ್ಯಾಟೂ ಕಲಾವಿದ. ನನಗೆ ಎಂಟು ಮಂದಿ ಪತ್ನಿಯರಿದ್ದು ಎಲ್ಲರೂ ಒಂದೇ ಮನೆಯಲ್ಲಿ ನನ್ನೊಟ್ಟಿಗೇ ವಾಸವಾಗಿದ್ದಾರೆ. ಯಾವತ್ತಿಗೂ ಅವರು ಕಚ್ಚಾಡಿಕೊಂಡದ್ದೇ ಇಲ್ಲ. ಪರಸ್ಪರ ಚೆನ್ನಾಗಿ ಇದ್ದಾರೆ. ಒಂದೇ ಕುಟುಂಬದವರಂತೆ ವಾಸ ಮಾಡುತ್ತಿದ್ದಾರೆ.

    ಈ ವಿಡಿಯೋವನ್ನು ಯೂಟ್ಯೂಬ್‌ನಲ್ಲಿಯೇ 30 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

    ಇಲ್ಲಿದೆ ನೋಡಿ ವಿಡಿಯೋ, ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ: (ಕೃಪೆ ಗರ್ಲ್ಸ್‌ ಕಾರ್ನರ್‌)

    https://www.facebook.com/watch/?v=683311549327942

     

    ಡ್ಯಾಡಿ… ಕೊನೆಯದಾಗಿ ಮುಖ ನೋಡಿಬಿಡಿ, ವಿಡಿಯೋ ಕಾಲ್‌ ಮಾಡಿ 6ನೇ ಮಹಡಿಯಿಂದ ಜಿಗಿದ ಖ್ಯಾತ ಮಾಡೆಲ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts