More

    ದಮ್ಮಯ್ಯ ಅಂತೀವಿ, ಕೈಬಿಡಬೇಡ್ರಪ್ಪೋ… ಗೋಳೋ ಎಂದು ಕಣ್ಣೀರು ಸುರಿಸ್ತಿದೆ ಪಾಕಿಸ್ತಾನ!

    ಕರಾಚಿ: ಭಾರತವು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದತಿ ಮಾಡುತ್ತಿದ್ದಂತೆಯೇ ಅತ್ತ ಪಾಕಿಸ್ತಾನದಲ್ಲಿ ಉರಿ ಹತ್ತಿರುವುದು ಹೊಸ ವಿಷಯವೇನಲ್ಲ. ಆದರೆ, ಈ ಬಗ್ಗೆ ಸೌದಿ ಅರೇಬಿಯಾ ಚಕಾರ ಎತ್ತುತ್ತಿಲ್ಲ ಎಂದು ಅದರ ವಿರುದ್ಧ ಬಾಯಿಗೆ ಬಂದ ಹಾಗೆ ಮಾತನಾಡಿದ್ದ ಪಾಕಿಸ್ತಾನ ಇದೀಗ ತಲೆತಲೆ ಚಚ್ಚಿಕೊಳ್ಳುವಂತಾಗಿದೆ.

    ಪಾಕಿಸ್ತಾನಕ್ಕೆ ತಾನು ನೀಡುತ್ತಿದ್ದ ಎಲ್ಲಾ ಸೌಲಭ್ಯಗಳನ್ನೂ ಬಂದ್‌ ಮಾಡಿರುವ ಸೌದಿ ಅರೇಬಿಯಾದಿಂದಾಗಿ ಕಂಗೆಟ್ಟು ಹೋಗಿರುವ ಪಾಕಿಸ್ತಾನ ಸೌದಿ ಅರೇಬಿಯಾದ ರಾಜನ ಕೈ-ಕಾಲು ಹಿಡಿದಾದರೂ ಸರಿ, ತಾನು ಮಾತನಾಡಿದ್ದನ್ನು ಕ್ಷಮಿಸಿಬಿಡು ಎನ್ನುವಂಥ ಸ್ಥಿತಿ ನಿರ್ಮಾಣವಾಗಿದೆ.

    ಇದಕ್ಕಾಗಿಯೇ ಸೌದಿಗೆ ತೆರಳಿರುವ ಕಾಶ್ಮೀರದ ವಿದೇಶಾಂಗ ಸಚಿವ ಷಾ ಮೊಹಮ್ಮದ್‌ ಖುರೇಷಿ ಹಾಗೂ ಇಡೀ ಪಾಕಿಸ್ತಾನವನ್ನು ಹತೋಟಿಯಲ್ಲಿ ಇಟ್ಟುಕೊಂಡಿರುವ ಜನರಲ್‌ ಖಮರ್‌ ಜಾವೇದ್‌ ಬಜ್ವಾ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಜತೆ ಮಾತುಕತೆ ನಡೆಸಲು ಆರಂಭಿಸಿದ್ದಾರೆ.

    ಅಷ್ಟಕ್ಕೂ ಕಾಶ್ಮೀರಕ್ಕೂ, ಪಾಕಿಸ್ತಾನಕ್ಕೂ, ಸೌದಿ ಅರೇಬಿಯಾಕ್ಕೂ ಎತ್ತಣತ್ತ ಸಂಬಂಧ ಎಂದು ನೀವು ಕೇಳಬಹುದು. ಅಲ್ಲಿಯೇ ಇರುವುದು ಇಂಟರೆಸ್ಟಿಂಗ್‌ ವಿಷಯ.

    ಇದರ ಮೂಲ ಹುಡುಕಬೇಕೆಂದರೆ ಮೊದಲು 2019ರ ಮಾರ್ಚ್‌ ತಿಂಗಳಿನತ್ತ ಗಮನ ಹರಿಸಬೇಕು. ಇದು ಭಾರತ ಮಾತ್ರವಲ್ಲದೇ ಸೌದಿ ಅರೇಬಿಯಾದ ಇತಿಹಾಸದಲ್ಲಿಯೇ ದಾಖಲೆ ಬರೆದ ದಿನ. ಮುಸ್ಲಿಂ ರಾಷ್ಟ್ರಗಳೆಲ್ಲಾ ಪ್ರತಿ ವರ್ಷ ನಡೆಸುವ ಶೃಂಗಸಭೆಯಲ್ಲಿ ಮುಸ್ಲಿಮೇತರೊಬ್ಬರು ಭಾಗವಹಿಸಿ ಇತಿಹಾಸ ಸೃಷ್ಟಿಸಿದ್ದರು. ಅವರು ಬೇರಾರೂ ಅಲ್ಲ. ಈಚೆಗಷ್ಟೇ ನಿಧನರಾದ ಸಚಿವೆ ಸುಷ್ಮಾ ಸ್ವರಾಜ್‌. ಮುಸ್ಲಿಮೇತರ ಮಾತ್ರವಲ್ಲದೇ ಒಬ್ಬ ಮಹಿಳೆ ಇಂಥದ್ದೊಂದು ಸಭೆಯಲ್ಲಿ ಭಾಗವಹಿಸಿದ್ದ ಕಾರಣ ಇಡೀ ವಿಶ್ವವೇ ಭಾರತದತ್ತ ದೃಷ್ಟಿ ನೆಟ್ಟಿತ್ತು.

    ಇದನ್ನು ಪಾಕಿಸ್ತಾನ ಸಹಿಸದಾಯಿತು. ಈ ಶೃಂಗಸಭೆಯನ್ನು ಪಾಕ್‌ ಬಹಿಷ್ಕರಿಸಿತ್ತು ಕೂಡ. ಅದಾದ ಬೆನ್ನಲ್ಲೇ ಬಂದದ್ದು ಕಾಶ್ಮೀರದ ವಿವಾದ.

    ಯಾವಾಗ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದಾಯಿತೋ ಆಗ, ಸೌದಿ ಅರೇಬಿಯಾವೂ ಈ ಬಗ್ಗೆ ಹೆಚ್ಚಿನ ಮಾತುಕತೆ ನಡೆಸಲಿಲ್ಲ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಸೌದಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಭೇಟಿಯಾಗಿ ಬಂದರು. ಪಾಕಿಸ್ತಾನ ಒತ್ತಾಯ ಮಾಡುತ್ತಿದ್ದರೂ, ಸೌದಿ ರಾಜ ಮಾತ್ರ ಭಾರತದೊಂದಿಗೆ ಸಹಭಾಗಿತ್ವ ವಿಸ್ತರಣೆಯಲ್ಲಿ ತೊಡಗಿರುವ ನಾವು ಕಾಶ್ಮೀರ ವಿಚಾರಕ್ಕೆ ಪ್ರತ್ಯೇಕ ಚರ್ಚೆ ಆಯೋಜಿಸುವುದಕ್ಕೆ ಸಾಧ್ಯವಿಲ್ಲ ಎಂದಿದ್ದರು.

    ಮೊದಲೇ ಉರಿದುಕೊಳ್ಳುತ್ತಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮೊಹಮ್ಮದ್‌ ಖುರೇಷಿ ಸೌದಿ ರಾಜನನ್ನು ಬಾಯಿಗೆ ಬಂದ ಹಾಗೆ ಮಾತನಾಡಿದರು. ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋ- ಆಪರೇಷನ್ (ಓಐಸಿ) ಕಾಶ್ಮೀರ ವಿಚಾರದಲ್ಲಿ ಅಗತ್ಯ ಪ್ರಮಾಣದಲ್ಲಿ ಏನನ್ನೂ ಮಾಡುತ್ತಿಲ್ಲ ಎಂದು ಅವರು ಟೀಕೆ ಮಾಡಿದ್ದರು. ಈ ವಿಚಾರವಾಗಿಯೇ ಒಂದು ಹಂತದಲ್ಲಿ ಓಐಸಿಯನ್ನೇ ವಿಭಜಿಸುವುದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವರು ಬೆದರಿಕೆಯೊಡ್ಡಿದ್ದರು.

    ಇದನ್ನೂ ಓದಿ: ಪಿಎಂ ಕೇರ್ಸ್‌ ಹಣ ವರ್ಗಾವಣೆಗೆ ಆದೇಶಿಸಲಾಗದು ಎಂದ ಸುಪ್ರೀಂಕೋರ್ಟ್‌

    ಇದರಿಂದ ಸಿಟ್ಟುಗೊಂಡಿರುವ ಸೌದಿ, ಪಾಕಿಸ್ತಾನಕ್ಕೆ ಇನ್ನು ಮುಂದೆ ಈಗಾಗಲೇ ಘೋಷಣೆ ಮಾಡಿರುವ ಸಾಲವನ್ನೂ ಕೊಡುವುದಿಲ್ಲ, ಅದಕ್ಕೆ ಈಗಾಗಲೇ ವಾಗ್ದಾನ ಮಾಡಿರುವ ತೈಲವನ್ನೂ ಕೊಡುವುದಿಲ್ಲ ಎಂದು ಖಂಡತುಂಡವಾಗಿ ನುಡಿದಿದೆ.

    2018ರ ಅಂತ್ಯದಲ್ಲಿ ಸೌದಿ ಅರೇಬಿಯಾವು 6.2 ಬಿಲಿಯನ್ ಡಾಲರ್ ಪ್ಯಾಕೇಜನ್ನು ಪಾಕಿಸ್ತಾನಕ್ಕೆ ನೀಡುವುದಾಗಿ ಘೋಷಿಸಿತ್ತು. ಅದರಲ್ಲಿ 3 ಬಿಲಿಯನ್ ಹಣದ ರೂಪದ ಸಾಲ ಹಾಗೂ 3.2 ಬಿಲಿಯನ್ ಮೊತ್ತದ ತೈಲವನ್ನು ಸಾಲವನ್ನು ನೀಡುವ ಒಪ್ಪಂದವಾಗಿತ್ತು. 2019ರ ಫೆಬ್ರವರಿಯಲ್ಲಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದರು.

    ಆದರೆ ಈಗ ಪಾಕಿಸ್ತಾನಕ್ಕೆ ತಾನು ಹಣದ ಸಾಲ ಮತ್ತು ಇಂಧನ ಪೂರೈಕೆ ಮಾಡುವುದಿಲ್ಲ ಎಂದು ಸೌದಿ ಘೋಷಣೆ ಮಾಡಿದೆ. ಇದರಿಂದ ಪಾಕ್‌ ಈಗ ಅಕ್ಷರಶಃ ನಲುಗಿ ಹೋಗಿದೆ. ಪಾಕಿಸ್ತಾನದಲ್ಲಿ ಪ್ರಧಾನಿ ಎನ್ನುವುದು ನಾಮ್‌ಕೇವಾಸ್ತೆ ಮಾತ್ರ. ಅಲ್ಲಿ ಏನಿದ್ದರೂ ಸೇನೆಯ ಪ್ರಬಲತೆಯಷ್ಟೇ. ಅದೇ ಕಾರಣಕ್ಕೆ ಸೇನಾ ಮುಖ್ಯಸ್ಥ ಹಾಗೂ ವಿದೇಶಾಂಗ ಸಚಿವರು ಸೌದಿ ರಾಜನ ಮನವೊಲಿಕೆಗೆ ಯತ್ನ ನಡೆಸುತ್ತಿದ್ದಾರೆ.

    ಸೆಪ್ಟೆಂಬರ್‌ನಲ್ಲಿ ಶಾಲೆ ಶುರುವಾಗತ್ತಾ? ಸಚಿವ ಸುರೇಶ್‌ಕುಮಾರ್‌ ಏನು ಹೇಳಿದ್ದಾರೆ ಕೇಳಿ…

    ಮಚ್ಚು ಹಿಡಿದು ಚಿನ್ನದಂಗಡಿಗೆ ನುಗ್ಗಿದವನ ಚಚ್ಚಿದಳು ಚಿಕ್ಕಮಗಳೂರು ಮಹಿಳೆ!

    ನಾಯಿಗಳು ಕಚ್ಚಿ ತಿಂದ ಕರೊನಾ ಸೋಂಕಿತನ ಶವ!

    ಪಾಕ್‌ಗೆ ಬಿಗ್‌ ಷಾಕ್‌: ಸಾಲವೂ ಬಂದ್‌, ತೈಲವೂ ಬಂದ್‌ ಎಂದ ಸೌದಿ ಅರೇಬಿಯಾ!

    ಫ್ರಿಜ್‌ ಟ್ರೇ ಬಳಸಿ ಆನ್‌ಲೈನ್‌ ಕ್ಲಾಸ್‌: ಶಿಕ್ಷಕಿಯ ಪ್ಲ್ಯಾನ್‌ಗೆ ಅಪಾರ ಮೆಚ್ಚುಗೆ

    ದಫನ್‌ ಆಗಿದ್ದವ ರಾತ್ರಿ ಹೆಂಡತಿಗೆ ಪ್ರತ್ಯಕ್ಷನಾಗಿ ನಾನೇ ನಿನ್ನ ಗಂಡ ಎಂದ!

    ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಪತ್ನಿ ಡೆಲಿವರಿ: ಶ್ಲಾಘನೆಗಳ ಮಹಾಪೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts