More

    ಮೆಸೇಂಜರ್‌, ವಾಟ್ಸ್‌ಆ್ಯಪ್‌ನಲ್ಲಿ ಕೆಂಪು ಹಾರ್ಟ್‌ ಇಮೋಜಿ ಕಳುಹಿಸಿದರೆ ಜೈಲು ಶಿಕ್ಷೆ- 20 ಲಕ್ಷ ರೂ. ದಂಡ!

    ಸೌದಿ: ವಾಟ್ಸ್‌ಆ್ಯಪ್‌, ಮೆಸೇಂಜರ್‌ ಬಂದ ಮೇಲೆ ಒಂದು ವಾಕ್ಯವನ್ನು ಒಂದೇ ಇಮೋಜಿಯಲ್ಲಿ ಹೇಳಬಹುದಾಗಿದೆ. ಬೇಸರ, ನೋವು, ಕಷ್ಟ, ಖುಷಿ, ದುಃಖ, ಆಶ್ಚರ್ಯ, ಪ್ರೀತಿ, ಪೇಚು… ಹೀಗೆ ಒಂದಾ ಎರಡಾ? ಎಲ್ಲಾ ಭಾವನೆಗಳಿಗೂ ಈಗ ಒಂದೇ ಒಂದು ಇಮೋಜಿ ಸಾಕು.

    ಅದರಲ್ಲಿಯೂ ಸ್ನೇಹಿತರ ನಡುವೆ ಹೆಚ್ಚಾಗಿ ಶೇರ್‌ ಆಗುವ ಇಮೋಜಿ ಎಂದರೆ ಲವ್‌ ಇಮೋಜಿ. ಅದು ಪ್ರೇಮಿಗಳೇ ಆಗಿರಬೇಕೆಂದೇನೂ ಇಲ್ಲ. ತಮ್ಮ ಇಷ್ಟದವರು ಏನಾದರೂ ಒಳ್ಳೊಳ್ಳೆ ಇಷ್ಟವಾಗುವ ಸುದ್ದಿ ಅಥವಾ ಫೋಟೋ ಕಳುಹಿಸಿದಾಗ ಹಾರ್ಟ್‌ ಇಮೋಜಿ ಬಹಳ ಉಪಯೋಗ ಮಾಡುವುದು ಇದೆ.

    ಆದರೆ ಇದೀಗ ಈ ಇಮೋಜಿ ಮೇಲೆ ನಿರ್ಬಂಧ ವಿಧಿಸಲಾಗಿದೆ. ಒಂದು ವೇಳೆ ಮೆಸೇಂಜರ್‌, ವಾಟ್ಸ್‌ಆ್ಯಪ್‌ನಲ್ಲಿ ಹೃದಯ ಈ ಹಾರ್ಟ್‌ ಇಮೋಜಿ ಬಳಸಿದರೆ ಜೈಲು ಶಿಕ್ಷೆಯ ಜತೆಗೆ 20 ಲಕ್ಷ ರೂಪಾಯಿವರೆಗೆ ದಂಡವೂ ಇರಲಿದೆ.

    ಹಾಗೆಂದು ಭಾರತೀಯರು ಹೆದರಬೇಕಿಲ್ಲ. ಏಕೆಂದರೆ ಇಂಥದ್ದೊಂದು ವಿಚಿತ್ರ ಕಾನೂನು ಜಾರಿ ಮಾಡಿರುವುದು ಸೌದಿ ಅರೇಬಿಯಾದಲ್ಲಿ. ಯಾರಿಗಾದರೂ ಕೆಂಪು ಹೃದಯದ ಇಮೋಜಿ ಕಳುಹಿಸಿ ತಪ್ಪಿತಸ್ಥರೆಂದು ಸಾಬೀತಾದರೆ ಎರಡರಿಂದ ಐದು ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಇದಲ್ಲದೆ, ಕಳುಹಿಸುವವರಿಗೆ ಒಂದು ಲಕ್ಷ ಸೌದಿ ರಿಯಾಲ್ ದಂಡ (ಸುಮಾರು 20 ಲಕ್ಷ ರೂಪಾಯಿ) ವಿಧಿಸಬಹುದು.

    ಸೌದಿ ಅರೇಬಿಯಾದ ಆ್ಯಂಟಿ ಫ್ರಾಡ್ ಅಸೋಸಿಯೇಶನ್‌ ಈ ಕುರಿತು ಆದೇಶ ಹೊರಡಿಸಿದೆ. ಕೆಂಪು ಹೃದಯದ ಇಮೋಜಿಯನ್ನು ಕಳುಹಿಸುವುದು ಅಪರಾಧವಾಗಿದೆ. ಆನ್‌ಲೈನ್ ಚಾಟಿಂಗ್ ಸಮಯದಲ್ಲಿ ಸ್ವೀಕರಿಸುವವರು ಚಿತ್ರ ಅಥವಾ ಇಮೋಜಿಯೊಂದಿಗೆ ಪ್ರಕರಣವನ್ನು ದಾಖಲಿಸಿದರೆ, ಈ ಕಿರುಕುಳವು ಅಪರಾಧದ ವರ್ಗಕ್ಕೆ ಬರುತ್ತದೆ ಎಂದು ಹೇಳಿದ್ದಾರೆ. ಅಂತಹ ಸಂದೇಶವನ್ನು ಸ್ವೀಕರಿಸಿದವರು ದೂರು ಸಲ್ಲಿಸಿದರೆ ಮತ್ತು ನ್ಯಾಯಾಲಯದಲ್ಲಿ ಅಪರಾಧ ಸಾಬೀತಾದರೆ, ಶಿಕ್ಷೆ ಮತ್ತು ದಂಡ ವಿಧಿಸುವ ಅವಕಾಶ ಕಲ್ಪಿಸಲಾಗಿದೆ.

    ಕೆಂಪುಕೋಟೆ ಘಟನೆಯಲ್ಲಿ ಸಿಕ್ಕಿಬಿದ್ದದ್ದೇ ದೀಪ್‌ ಸಿಧು ಸಾವಿಗೆ ಕಾರಣವಾಯ್ತಾ? ಬೀದಿದೀಪ ಇಲ್ಲದ ಕಡೆ ಅಪಘಾತ! ಪೊಲೀಸರು ಹೇಳಿದ್ದೇನು?

    VIDEO: ನಗ್ನವಾಗಿ ಮಲಗಿ, ಅಂದ ಹೆಚ್ಚಿಸಿಕೊಳ್ಳಿ ಎಂದ ವಿಶ್ವದ ಹಾಟೆಸ್ಟ್‌ ಅಜ್ಜಿ- ಗುಟ್ಟು ಹೇಳಿದ ನಾಲ್ಕು ಮಕ್ಕಳ ಅಮ್ಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts