More

    ರಸ್ತೆಯೂ ಇರಲ್ಲ, ವಾಹನಗಳೂ ಚಲಿಸಲ್ಲ… ಎಲ್ಲೆಲ್ಲೂ ಹಸಿರು… ಇದು ರಾಜಕುವರನ ಭವಿಷ್ಯದ ನಗರಿ…

    ರಿಯಾದ್ (ಸೌದಿ ಅರೇಬಿಯ): ಒಂದೇ ಒಂದು ಸುಂದರ ನಗರಿಯನ್ನು ಕಲ್ಪಿಸಿಕೊಳ್ಳಿ ಎಂದರೆ ಹೇಗಿರುತ್ತದೆ ನಿಮ್ಮ ಕಲ್ಪನೆ? ವಾಹನಗಳ ಕರ್ಕಶ ಶಬ್ದಗಳಿಂದ, ಹೊಗೆ ತುಂಬಿರುವ ಕಲುಷಿತ ಜೀವನದಿಂದ ಬಲುದೂರ… ಸುತ್ತಲೂ ಹಸಿರೋ ಹಸಿರು… ಎಲ್ಲೆಲ್ಲೂ ಹಕ್ಕಿಗಳ ನಿನಾದ… ಹೀಗೆ ಏನೇನೋ ಕಲ್ಪನೆಗಳು ಬರುತ್ತವಲ್ಲವೆ?

    ಅಂಥದ್ದೇ ಒಂದು ಸುಂದರ ನಗರಿಯನ್ನು ಕನಸಾಗಲು ಹೊರಟಿದ್ದಾರೆ ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್. ವಾಹನಗಳು, ರಸ್ತೆಗಳು ಹಾಗೂ ಇಂಗಾಲ ಅನಿಲಗಳ ಹೊರಸೂಸುವಿಕೆಯಿಲ್ಲದ ನಗರವೊಂದರ ಕಲ್ಪನೆಯನ್ನು ಅವರು ಮುಂದಿಟ್ಟಿದ್ದಾರೆ.
    ಇಂಥದ್ದೊಂದು ಯೋಜನೆಯ ಕುರಿತು ಅವರು ಮಾಹಿತಿ ನೀಡಿದ್ದಾರೆ. ನಿಯೋಮ್​ ಎಂಬ ಯೋಜನೆ ಇದಾಗಿದೆ. ಇದಕ್ಕಾಗಿ ದಿ ಲೈನ್​ ಎಂಬ ವಲಯವೊಂದನ್ನು ಸೃಷ್ಟಿಸುವ ಯೋಜನೆ ರಾಜಕುಮಾರನಿಗಿದೆ.

    ಸುಮಾರು 500 ಬಿಲಿಯ ಡಾಲರ್ (36.72 ಲಕ್ಷ ಕೋಟಿ ರೂಪಾಯಿ) ಯೋಜನೆಯ ಭಾಗವಾಗಿ 170 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಈ ವಲಯ ಸೃಷ್ಟಿಸಲಾಗುತ್ತದೆ ಎಂದು ಯುವರಾಜ ಸ್ಥಳೀಯ ಚಾನೆಲ್​ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ. ಇದೇ ಸಾಲಿನ ಪ್ರಥಮ ತ್ರೈಮಾಸಿಕದಲ್ಲಿ ಯೋಜನೆಯ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ.

    ಜೀವನ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶವನ್ನು ಅದು ಹೊಂದಿದೆ. ಆರೋಗ್ಯ ಕೇಂದ್ರಗಳು, ಶಾಲೆಗಳು ಮತ್ತು ಇತರ ಮೂಲಸೌಕರ್ಯಗಳು ಲಭ್ಯವಿರುತ್ತವೆ. ಮನರಂಜನೆ ಹಾಗೂ ಅತಿ ವೇಗದ ಪರ್ಯಾಯ ಸಾರಿಗೆ ವ್ಯವಸ್ಥೆ ಲಭಿಸುತ್ತದೆ. ಅದೂ ಅಲ್ಲದೆ, ಕೇವಲ 5 ನಿಮಿಷ ನಡೆದರೆ ಹಸಿರು ಪರಿಸರ ಸಿಗುವಂಥ ವಿನ್ಯಾಸ ರೂಪಿಸಲಾಗುವುದು ಎಂದು ಹೇಳಿದ್ದಾರೆ.

    ನಗರದಲ್ಲಿ ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ ಹಾಗೂ ಈ ಮೂಲಕ ಮಾನವರ ನಡುವಿನ ಸಂಪರ್ಕ ವಿಧಾನದಲ್ಲಿ ಕ್ರಾಂತಿಯನ್ನೇ ಮಾಡಲಿದೆ. ಇದು ನಿವಾಸಿಗಳು ಮತ್ತು ಕಂಪೆನಿಗಳ ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

    ಇದರ ಬಗ್ಗೆ ಈಗಾಗಲೇ ಹಲವಾರು ವಾದ-ಪ್ರತಿವಾದ ವಿವಾದಗಳೂ ಶುರುವಾಗಿದ್ದು, ಇಂಥದ್ದೊಂದು ನಗರದ ಕಲ್ಪನೆ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ ಹಲವರು.

    ಡಿವೋರ್ಸ್​ ಆದ ಕೆಲ ವರ್ಷಗಳ ನಂತರ ಜೀವನಾಂಶ ಕೇಳುವ ಅವಕಾಶವಿದೆಯೆ?

    ಕೇಂದ್ರ ಸರ್ಕಾರದಲ್ಲಿ ಖಾಲಿ ಇವೆ ಹುದ್ದೆಗಳು: ಪದವೀಧರರಿಗೂ ಸಿಗಲಿದೆ ಅವಕಾಶ

    ಕೃಷಿ ಕಾಯ್ದೆ: ನಿಮ್ಮ ಕೆಲಸ ನೀವು ಮಾಡಿ- ನಮ್ಮ ಕೆಲಸ ನಾವು ಮಾಡುತ್ತೇವೆ ಎಂದ ಸುಪ್ರೀಂಕೋರ್ಟ್​

    ವಿರಾಟ್​ ಕೊಹ್ಲಿ- ಅನುಷ್ಕಾ ಶರ್ಮಾ ಪಾಪುವಿನ ಪಾದ ಅದಲುಬದಲು- ಈ ಕಾಲು ಅದಲ್ಲ… ಅದು ಇದಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts