More

    ತುರ್ವಿಹಾಳ ರಸ್ತೆ ಕಾಮಗಾರಿ ನನೆಗುದಿಗೆ

    ಸಿಂಧನೂರು: ತಾಲೂಕಿನ ತುರ್ವಿಹಾಳದಲ್ಲಿ ರಸ್ತೆ ಕಾಮಗಾರಿ ಒಂದು ತಿಂಗಳಿಂದ ನನೆಗುದಿಗೆ ಬಿದ್ದಿದ್ದು, ಸಾರ್ವಜನಿಕರು ಸಂಚಾರಕ್ಕೆ ಸಂಕಟ ಪಡುವಂತಾಗಿದೆ.

    ಪಟ್ಟಣದಲ್ಲಿ ಬಹು ವರ್ಷಗಳ ನಂತರ ಕುಷ್ಟಗಿ ಹೆದ್ದಾರಿಯಿಂದ ಪೊಲೀಸ್ ಠಾಣೆವರೆಗೆ 345 ಮೀಟರ್ ರಸ್ತೆ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ನಗರೋತ್ಥಾನ ಯೋಜನೆಯ ನಾಲ್ಕನೇ ಹಂತದಲ್ಲಿ ಲೋಕೋಪಯೋಗಿ ಇಲಾಖೆಯಿಂದ 2.73 ಕೋಟಿ ರೂಪಾಯಿಯನ್ನು ಕಳೆದ ವರ್ಷ ಮಂಜೂರು ಮಾಡಲಾಗಿದೆ.
    ಆರೇಳು ತಿಂಗಳ ಹಿಂದೆ ಕಾಮಗಾರಿ ಆರಂಭಿಸಲಾಗಿದ್ದು, ಇನ್ನೂ ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಕಾಲಮಿತಿ ಮುಗಿಯಲಿದೆ. ಆದರೆ, ರಸ್ತೆಯುದ್ದಕ್ಕೂ ಜಲ್ಲಿಕಲ್ಲು ಹಾಕಿರುವುದು ಬಿಟ್ಟರೆ ಸಾಧನೆ ಶೂನ್ಯವಾಗಿದೆ. ಮೂಲ ಗುತ್ತಿಗೆದಾರರು ಬೇರೆಯಿದ್ದು, ಸ್ಥಳೀಯರೊಬ್ಬರು ಕಾಮಗಾರಿ ನಿರ್ವಹಿಸುತ್ತಿದ್ದಾರೆ.

    ಪಟ್ಟಣದ ಶಾಲೆ, ಕಾಲೇಜ್, ಪೊಲೀಸ್ ಠಾಣೆ ಹಾಗೂ ವಿವಿಧ ವಾರ್ಡ್‌ಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಅರೆಬರೆ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗಿವೆ. ವಾಹನಗಳು ಹೋಗುವಾಗ ಪಾದಚಾರಿಗಳಿಗೆ ಜಲ್ಲಿಕಲ್ಲು ಸಿಡಿಯುತ್ತಿವೆ. ಕಾಮಗಾರಿ ಅಪೂರ್ಣಕ್ಕೆ ಬಿಲ್ ಪಾವತಿ ವಿಳಂಬ ಕಾರಣವಾಗಿದೆ. ಹಣ ಬಿಡುಗಡೆಗೂ ಮುನ್ನ ಕಾಮಗಾರಿ ಆರಂಭಿಸುವ ಅವಶ್ಯ ಏನಿತ್ತು ಎನ್ನುವ ಪ್ರಶ್ನೆ ಕೇಳಿ ಬರುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts