More

    ಪಿಎಂ ಕೇರ್ಸ್‌ ಹಣ ವರ್ಗಾವಣೆಗೆ ಆದೇಶಿಸಲಾಗದು ಎಂದ ಸುಪ್ರೀಂಕೋರ್ಟ್‌

    ನವದೆಹಲಿ: ಪಿಎಂ ಕೇರ್ಸ್‌ ಫಂಡ್‌ಗೆ ಸಂದಾಯವಾಗಿರುವ ಹಣವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಗೆ (ಎನ್‌ಡಿಆರ್‌ಎಫ್‌) ವರ್ಗಾಯಿಸುವಂತೆ ಸೂಚಿಸಲು ಸ್ವಯಂ ಸೇವಾ ಸಂಸ್ಥೆಯೊಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಇಂದು ವಜಾ ಮಾಡಿದೆ.

    ಕರೊನಾ ವೈರಸ್‌ ವಿರುದ್ಧದ ಹೋರಾಟಕ್ಕೆ ನೆರವಾಗುವ ದೃಷ್ಟಿಯಿಂದ ಸ್ಥಾಪಿಸಲಾಗಿರುವ ‘ಪಿಎಂ ಕೇರ್ಸ್‌ ಫಂಡ್‌’ ಅನ್ನು ರಾಷ್ಟ್ರೀಯ ವಿಪತ್ತು ನಿರ್ವಹಣೆ ನಿಧಿಗೆ ವರ್ಗಾಯಿಸಲು ಆದೇಶಿಸಲು ಆಗದು ಎಂದು ಕೋರ್ಟ್‌ ಹೇಳಿದೆ.

    ಎನ್‌ಡಿಆರ್‌ಎಫ್‌ಗೆ ವರ್ಗಾಯಿಸಲು ಕೇಂದ್ರ ಸರಕಾರಕ್ಕೆ ಸೂಚನೆ ನೀಡುವಂತೆ ಕೋರಿ ಸ್ವಯಂ ಸೇವಾ ಸಂಸ್ಥೆಯೊಂದು ಅರ್ಜಿ ಸಲ್ಲಿಸಿತ್ತು. ಆದರೆ ಈ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ನೇತೃತ್ವದ ತ್ರಿಸದಸ್ಯ ಪೀಠ ವಜಾ ಮಾಡಿದೆ.

    ಪಿಎಂ ಕೇರ್ಸ್‌ಗೆ ಬಂದಿರುವಂತಹ ಹಣ ಸಾರ್ವಜನಿಕ ದತ್ತಿ ನಿಧಿಯಾಗಿ (ಚಾರಿಟೇಬಲ್‌ ಫಂಡ್‌) ಮಾನ್ಯವಾಗಿದೆ. ಹೀಗಾಗಿ ಇಲ್ಲಿಗೆ ಬಂದಿರುವ ಹಣವನ್ನು ಎನ್‌ಡಿಆರ್‌ಎಫ್‌ಗೆ ವರ್ಗಾಯಿಸುವ ಅಗತ್ಯವಿಲ್ಲ. ಕರೊನಾ ವೈರಸ್‌ ನಿಭಾಯಿಸಲು 2019ರ ನವೆಂಬರ್‌ನಲ್ಲಿ ರಚಿಸಲಾಗಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಯೋಜನೆ ಸಾಕು. ಹೀಗಾಗಿ ಹೊಸ ಕ್ರಿಯಾ ಯೋಜನೆ ಅಥವಾ ಆರೈಕೆಯ ಕನಿಷ್ಠ ಮಾನದಂಡಗಳನ್ನು ರಚಿಸುವ ಅಗತ್ಯವಿಲ್ಲ ಎಂದು ಕೋರ್ಟ್‌ ಅಭಿಪ್ರಾಯ ಪಟ್ಟಿದೆ.

    ಪಿಎಂಕೇರ್ಸ್‌ ಜನರೇ ಸ್ವಯಂಪ್ರೇರಿತವಾಗಿ ಹಣ ನೀಡಿದರೆ, ಎನ್‌ಡಿಆರ್‌ಎಫ್‌ಗೆ ಬಜೆಟ್‌ನಿಂದ ಹಣವನ್ನು ಮೀಸಲು ಇರಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ಪರ ವಕೀಲರು ಹೇಳಿದ್ದರು. ಇದನ್ನೇ ಉಲ್ಲೇಖಿಸಿದ ಕೋರ್ಟ್‌, ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ವಿಪತ್ತು ಪರಿಹಾರ ನಿಧಿಗೆ ಕೊಡುಗೆಯನ್ನು ನೀಡಬಹುದು ಎಂದು ಪೀಠ ಹೇಳಿದೆ.

    ವಿಪತ್ತು ನಿರ್ವಹಣಾ ಕಾಯ್ದೆ, 2005ರ ಸೆಕ್ಷನ್‌ 46 ಅಡಿಯಲ್ಲಿ ಎನ್‌ಡಿಆರ್‌ಎಫ್‌ ಶಾಸನಬದ್ಧ ನಿಧಿ ರೂಪಿಸಲಾಗಿದೆ. ಕರೊನಾದ ವೇಳೆ ಪಿಎಂ ಕೇರ್ಸ್‌ ನಿಧಿಯನ್ನು ಸ್ಥಾಪನೆ ಮಾಡಲಾಗಿದೆ. ಪ್ರಧಾನಿ ಹಾಗೂ ರಕ್ಷಣಾ ಸಚಿವರು ಇದರ ಮುಖ್ಯಸ್ಥರಾಗಿದ್ದು, ಹಣಕಾಸು ಹಾಗೂ ಗೃಹ ಇಲಾಖೆ ಸಚಿವರು ಇದರ ಟ್ರಸ್ಟಿಗಳಾಗಿದ್ದಾರೆ.

    ಎಟಿಎಂನಲ್ಲಿ ಹಣ ತೆಗೆಯುವಿರಾ? ಮೊದಲು ‘ದಂಡ’ದ ಹೊಸ ನಿಯಮ ತಿಳಿದುಕೊಳ್ಳಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts