More

    ಮೂಲಸೌಕರ್ಯ ನೀಡಿ, ಇಲ್ಲವೇ ಪನರ್ವಸತಿ ಕಲ್ಪಿಸಿ

    ಚಾಮರಾಜನಗರ : ಇಂಡಿಗನತ್ತ ಗ್ರಾಮದಲ್ಲಿ ಮತದಾನದ ವೇಳೆ ನಡೆದಿದ್ದ ಗಲಭೆ ಸಂಬಂಧ ಮೇ.9 ರಂದು ವಿವಿಧ ಸಂಘ-ಸಂಸ್ಥೆಗಳ ತಂಡ ಗ್ರಾವಗಳಿಗೆ ಭೇಟಿ ನೀಡಿ ಸತ್ಯಶೋಧನಾ ವರದಿ ತಯಾರಿಸಿದ್ದು, ಮೆಂದಾರೆ ಪೋಡಿಗೆ ಮೂಲಸೌಕರ್ಯ ಒದಗಿಸಬೇಕು. ಇಲ್ಲವೇ ಪುನರ್ವಸತಿ ಕಲ್ಪಿಸಬೇಕು ಎಂಬ ಹಕ್ಕೊತ್ತಾಯ ಸಲ್ಲಿಸಲಾಗಿದೆ ಎಂದು ಪಿಯುಸಿಎಲ್ ಸಂಸ್ಥೆಯ ಸದಸ್ಯ ಹಾಗೂ ಹಿರಿಯ ರಂಗಕರ್ಮಿ ಕೆ.ವೆಂಕಟರಾಜು ತಿಳಿಸಿದರು.

    ಇಂಡಿಗನತ್ತ ಮತ್ತು ಮೆಂದಾರೆ ಗ್ರಾಮಗಳಿಗೆ 7 ಜನರನ್ನು ಒಳಗೊಂಡ ತಂಡ ಭೇಟಿ ನೀಡಿ ಸತ್ಯಶೋಧನೆ ನಡೆಸಲಾಗಿದೆ. ಇಂಡಿಗನತ್ತ ಗ್ರಾಮದವರು ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಮಾ.26 ರಂದೇ ಕರೆ ನೀಡಿದ್ದರು. ಈ ಮೊದಲು ಸಾಕಷ್ಟು ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರ ಮಾಡಿದ್ದರು. ಅರಣ್ಯ ಇಲಾಖೆ ನಾಗಮಲೆಗೆ ವಾಹನ ಸಂಚಾರ ನಿಷೇಧ ಮಾಡಿದ ಪರಿಣಾಮವಾಗಿ ಇಂಡಿಗನತ್ತ ಗ್ರಾಮದವರ ಆದಾಯಕ್ಕೆ ಪೆಟ್ಟು ಬಿದ್ದಿತ್ತು. ಇದರಿಂದಾಗಿ ಈ ಬಾರಿ ಕಠಿಣವಾದ ನಿರ್ಧಾರವನ್ನು ಕೈಗೊಂಡಿದ್ದರು. ಈ ನಿಟ್ಟಿನಲ್ಲಿ ಅಧಿಕಾರಿಗಳು ತಾತ್ಕಾಲಿಕ ಮೂಲ ಸೌಕರ್ಯವನ್ನು ಕಲ್ಪಿಸಿದ್ದರು. ನೀರು ಸರಬರಾಜಿನಲ್ಲಿ ಗೊಂದಲವಾದ ಕಾರಣ ಬಹಿಷ್ಕಾರ ಮುಂದುವರಿಸಿದರು ಎಂದು ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಮತದಾನದ ದಿನದಂದು ಮೆಂದಾರೆ ಪೋಡಿನವರು ಮತದಾನ ಮಾಡದಿದ್ದರೆ ನಮಗೆ ದೊರೆಯುವ ಸರ್ಕಾರದ ಸೌಲಭ್ಯಗಳು ನಿಂತು ಹೋಗುತ್ತದೆ ಎಂಬ ಭಯದಿಂದ ಮ ಚಲಾಯಿಸಲು ಪೊಲೀಸರ ರಕ್ಷಣೆಯಲ್ಲಿ ಬಂದಿದ್ದಾರೆ. ಈ ವೇಳೆ ಗಲಭೆ ನಡೆದಿದ್ದು, ಬಳಿಕ ಸೋಲಿಗರ ಮಾದಯ್ಯ ಮೊದಲು ದೂರು ನೀಡಿದ್ದಾರೆ. ಬಳಿಕ ಚುನಾವಣಾ ಅಧಿಕಾರಿ ಮತ್ತು ಸರ್ಕಾರಿ ಅಧಿಕಾರಿಗಳು ದೂರು ನೀಡಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಮೂಸೌಕರ್ಯ ಕಾಣದ ಹೀನಾಯ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವುದು ಆಡಳಿತ ವರ್ಗ ತಲೆತಗ್ಗಿಸುವಂತಹ ವಿಚಾರ ಎಂದು ಬೇಸರ ವ್ಯಕ್ತಪಡಿಸಿದರು.

    ಜಿಲ್ಲಾಧಿಕಾರಿಗಳು ಎರಡು ಗ್ರಾಮಗಳ ಸಮಸ್ಯೆಯನ್ನು ಬಗೆಹರಿಸಬೇಕು. ಭಯದಲ್ಲೇ ಇರುವ ಮೆಂದಾರೆ ಪೋಡಿಗೆ ರಕ್ಷಣೆ ಒದಗಿಸಬೇಕು. ಅಲ್ಲಿನ ಜನರಿಗೆ ಕೂಲಿ ವ್ಯವಸ್ಥೆ ಮಾಡಬೇಕು. ಸರ್ಕಾರಿ ಸವಲತ್ತುಗಳು ದೊರೆಯದೆ ಇರುವವರಿಗೆ ಆದಷ್ಟು ಬೇಗ ಸವಲತ್ತು ಕಲ್ಪಿಸಬೇಕು ಎಂದು ಸಲಹೆ ನೀಡಿದರು.

    ರಾಜ್ಯ ಮೂಲ ಆದಿವಾಸಿ ವೇದಿಕೆ ಕಾರ್ಯದರ್ಶಿ ಮುತ್ತಯ್ಯ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಮತದಾನದ ಹಕ್ಕು ಚಲಾಯಿಸಲು ಮೆಂದಾರೆ ಗ್ರಾಮದವರು ಮುಂದಾಗಿದ್ದಾರೆ. ಅಣ್ಣ-ತಮ್ಮಂದಿರಂತೆ ಇದ್ದ ಎರಡು ಸಮುದಾಯದವರ ನಡುವೆ ಅಚಾನಕ್ಕಾಗಿ ಗಲಭೆ ನಡೆದು ಹೋಗಿದೆ. ಅದನ್ನು ನಾವು ಖಂಡಿಸುತ್ತೇವೆ. ಈ ಪ್ರಕರಣದಲ್ಲಿ ಆದಿವಾಸಿಗಳ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು, ಅವರಿಗೆ ಮೂಲಸೌಕರ್ಯ ಕಲ್ಪಿಸಲು ಆಡಳಿತ ವ್ಯವಸ್ಥೆ ಉಂದಾಗಬೇಕು. ಇಲ್ಲವೇ ಕಾಡಂಚಿನಲ್ಲೇ ಇರುವಂತೆ ಅವರನ್ನು ಸ್ಥಳಾಂತರಿಸಬೇಕು ಎಂದು ಮನವಿ ಮಾಡಿದರು.

    ಗೋಷ್ಠಿಯಲ್ಲಿ ಪಿಯುಸಿಎಲ್ ಸದಸ್ಯರಾದ ಅಬ್ರಹಾಂ ಡಿಸಿಲ್ವಾ, ಬ್ರಿಜೇಶ್ ಓಲಿವೇರಾ, ಪರಿಸರವಾದಿ ಪುಣಜನೂರು ದೊರೆಸ್ವಾಮಿ, ಪುನರ್ಚಿತ್ ಸಂಸ್ಥೆಯ ಡಾ.ವೀರಭದ್ರನಾಯಕ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts