More

    ಫ್ಯಾಮಿಲಿ ಕೋರ್ಟ್‌ ಡಿವೋರ್ಸ್‌ ನೀಡಿದೆ- ಪತಿ ಮೇಲ್ಮನವಿ ಸಲ್ಲಿಸಲ್ಲ- ಕೂಡಲೇ ಮರುಮದುವೆಯಾಬಹುದೆ?

    ಫ್ಯಾಮಿಲಿ ಕೋರ್ಟ್‌ ಡಿವೋರ್ಸ್‌ ನೀಡಿದೆ- ಪತಿ ಮೇಲ್ಮನವಿ ಸಲ್ಲಿಸಲ್ಲ- ಕೂಡಲೇ ಮರುಮದುವೆಯಾಬಹುದೆ?ನಾನು ನನ್ನ ಪತಿಯಿಂದ ವಿಚ್ಛೇದನ ಪಡೆದಿದ್ದೇನೆ. ನನ್ನ ಪೂರ್ವ ಪತಿ ಅಪೀಲು ಹಾಕುವುದಿಲ್ಲ ಎನ್ನುವ ನಂಬಿಕೆ ನನಗಿದೆ.
    ಈಗ ನನಗೆ ಮತ್ತೊಬ್ಬರ ಜೊತೆ ಮದುವೆ ಆಗಬೇಕಿದೆ. ಕೂಡಲೇ ಮದುವೆಯಾಗಬಹುದೆ ಅಥವಾ ಕಾನೂನಿನಡಿ ಕಾಯುವ ಅವಧಿ ಅಂತೇನಾದರೂ ಇದೆಯೆ?

    ಉತ್ತರ:- ಹಿಂದೂ ವಿವಾಹ ಕಾಯ್ದೆಯ ಕಲಂ 15ರಂತೆ , ವಿಚ್ಛೇದನದ ಆದೇಶ ಆದ ನಂತರ , ಆ ಆದೇಶದ ಮೇಲೆ ಮೇಲ್ಮನವಿ (ಅಪೀಲ್​) ಹಾಕಲು ಇರುವ, ಅಪೀಲಿನ ಗಡುವು ತೀರುವವರೆಗೆ ನೀವು ಮರುಮದುವೆ ಆಗುವಂತಿಲ್ಲ.

    ಹಾಗೂ ಒಂದು ವೇಳೆ ನಿಮ್ಮ ಪೂರ್ವ ಪತಿ ಅಪೀಲು ದಾಖಲು ಮಾಡಿದರೆ, ಆ ಅಪೀಲು ವಜಾ ಆಗುವವರೆಗೆ ನೀವು
    ಮರುಮದುವೆ ಆಗುವಂತಿಲ್ಲ. ಒಂದುವೇಳೆ ನಿಮ್ಮ ಪತಿ ನಿಗದಿತ ಕಾಲಮಿತಿಯ ಒಳಗೆ ಅಪೀಲೇ ದಾಖಲು ಮಾಡದೇ ಇದ್ದರೆ, ಆಗ ನೀವು ಮರುಮದುವೆ ಆಗಬಹುದು.

    ಯಾವುದಕ್ಕೂ ನೀವು ನಿಮ್ಮ ವಿಚ್ಛೇದನದ ಪ್ರಕರಣದ ಸಂಖ್ಯೆಯನ್ನು ಹಾಕಿ, ಆ ಪ್ರಕರಣದ ಆದೇಶದ ಮೇಲೆ ಅಪೀಲು ದಾಖಲಾಗಿದೆಯೇ ಇಲ್ಲವೇ ಎನ್ನುವುದನ್ನು ಕಂಪ್ಯೂಟರಿನ ಸಹಾಯದಿಂದ ಪರೀಕ್ಷಿಸಿ , ಆ ನಂತರ ಮರುಮದುವೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದು.

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ   https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ನಾನು ಮಾನಸಿಕ ರೋಗಿ ಎಂದು ಸುಳ್ಳು ಹೇಳಿ ಪತಿ ವಿಚ್ಛೇದನ ಪಡೆಯುತ್ತಿದ್ದಾರೆ, ಪ್ಲೀಸ್​ ದಾರಿ ತೋರಿ..

    ಗಂಡ ಸಂಶಯಪಿಶಾಚಿ- ಅಮ್ಮನ ಮನೆಗೆ ಬಂದಿದ್ದೇನೆ; ಡಿವೋರ್ಸ್​ ಪಡೆದರೆ ನನ್ನ ವಸ್ತು ವಾಪಸ್​ ಸಿಗುವುದೆ?

    ಗಂಡ ಕೋರ್ಟ್​ಗೆ ಬರದ ಕಾರಣ ಡಿವೋರ್ಸ್​ ಕೇಸ್ ವಜಾ ಆದ್ರೆ ಅಲ್ಲಿಯೇ ಮತ್ತೊಮ್ಮೆ ಅರ್ಜಿ ಹಾಕಬಹುದಾ?

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts