More

    ಗಂಡ ಕೋರ್ಟ್​ಗೆ ಬರದ ಕಾರಣ ಡಿವೋರ್ಸ್​ ಕೇಸ್ ವಜಾ ಆದ್ರೆ ಅಲ್ಲಿಯೇ ಮತ್ತೊಮ್ಮೆ ಅರ್ಜಿ ಹಾಕಬಹುದಾ?

    ಗಂಡ ಕೋರ್ಟ್​ಗೆ ಬರದ ಕಾರಣ ಡಿವೋರ್ಸ್​ ಕೇಸ್ ವಜಾ ಆದ್ರೆ ಅಲ್ಲಿಯೇ ಮತ್ತೊಮ್ಮೆ ಅರ್ಜಿ ಹಾಕಬಹುದಾ?ಮದುವೆಯಾಗಿ 11 ವರ್ಷ. ಗಂಡನ ಹಿಂಸೆ ತಾಳದೆ ಬೇರೆ ಊರಿಗೆ ಬಂದೆ. ನಂತರ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಹಾಕಿದೆವು. ಆದರೆ ಕಡೆಯದಿನ ನನ್ನ ಪತಿ ಕೋರ್ಟ್​ಗೆ ಬರದ ಕಾರಣ, ಕೇಸು ವಜಾ ಆಯಿತು. ಈಗ ಏಳು ವರ್ಷಗಳಿಂದ ಗಂಡ ಮತ್ತೆ ಹಿಂಸೆ ಕೊಡುತ್ತಿದ್ದಾರೆ. ಒಂದು ಸಲ ವಿಚ್ಛೇದನದ ಅರ್ಜಿ ವಜಾ ಆದರೆ ನಾನು ಮತ್ತೆ ವಿಚ್ಛೇದನ ಪಡೆಯಲು ಆಗುವುದಿಲ್ಲವಂತೆ. ಇದು ನಿಜವೆ?

    ಉತ್ತರ: ಈ ಹಿಂದೆ ನೀವಿಬ್ಬರೂ ಸೇರಿ ವಿಚ್ಛೇದನಕ್ಕೆ ಹಾಕಿದ್ದ ಪ್ರಕರಣ, ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಲು ಇರುವ ಒಂದು ಕಾನೂನು ಕ್ರಮ. ಈ ರೀತಿಯ ಪ್ರಕರಣ ಸಲ್ಲಿಸಿದಾಗ, ಪ್ರಕರಣ ಸಲ್ಲಿಸಿದ ಆರು ತಿಂಗಳ ನಂತರ ಹದಿನೆಂಟು ತಿಂಗಳ ಒಳಗೆ ವಿಚ್ಛೇದನದ ಆದೇಶವನ್ನು ಸಾಮಾನ್ಯವಾಗಿ ನ್ಯಾಯಾಲಯ ಕೊಡುತ್ತದೆ. ಆದರೆ ಆದೇಶದ ದಿನದವರೆಗೂ ವಿಚ್ಛೇದನಕ್ಕೆ ಇಬ್ಬರ ಒಪ್ಪಿಗೆಯೂ ಇರಲೇಬೇಕು.

    ನಿಮ್ಮ ಪತಿ ಬರದೇ ಇದ್ದುದರಿಂದ ಪ್ರಕರಣವನ್ನು ವಜಾ ಮಾಡಲಾಗಿದೆ. ಅದೇ ಪ್ರಕರಣವನ್ನು ಏಳು ವರ್ಷಗಳ ನಂತರ ಮುಂದುವರೆಸಲು ಕಾನೂನಿನಲ್ಲಿ ಅವಕಾಶವಿಲ್ಲ. ಬೇಕಿದ್ದರೆ ಪುನಃ ನೀವಿಬ್ಬರೂ ಸೇರಿ ಮತ್ತೊಮ್ಮೆ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಲು ಪ್ರಕರಣ ದಾಖಲಿಸಬಹುದು. ಪತಿ ಅದಕ್ಕೆ ಒಪ್ಪುವುದಿಲ್ಲ ಎನ್ನುವುದಾದರೆ, ನೀವು ಪ್ರತ್ಯೇಕವಾಗಿ ವಿಚ್ಛೇದನಕ್ಕೆ ಪ್ರಕರಣವನ್ನು ದಾಖಲಿಸಿ. ನಿಮಗೆ ನಿಮ್ಮ ಪತಿಯಿಂದ ಆಗಿರುವ ಕ್ರೂರತೆಯನ್ನು ವಿವರಿಸಿ. ನಿಮಗೆ ವಿಚ್ಛೇದನ ಸಿಗಬಹುದು. ಒಮ್ಮೆ ಪರಸ್ಪರ ಒಪ್ಪಿಗೆಯಿಂದ ಸಲ್ಲಿಸಿದ ವಿಚ್ಛೇದನದ ಪ್ರಕರಣ ವಜಾ ಆದ ಮಾತ್ರಕ್ಕೆ ನೀವು ಮತ್ತೆ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಯಾವ ತೊಡಕೂ ಇಲ್ಲ. ನೀವು ಹೆದರಬೇಕಾಗಿಲ್ಲ.

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ   https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ಅಪ್ಪನ ಕೆಲಸ ಅಮ್ಮನಿಗೆ ಸಿಕ್ಕರೆ ಅವರು ಬೇಕಾದವರಿಗೆ ಮಾತ್ರ ಆಸ್ತಿ ಬರೆಯಬಹುದೆ?

    ಅತ್ತೆ ಬ್ಲ್ಯಾಕ್​ಮೇಲ್​ ಮಾಡಿ ಮೃತ ಮಗನ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಾರೆ- ಅವರಿಗೂ ಕೊಡಬೇಕಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts