More

    ತಂದೆಯ ಆಸ್ತಿಯಲ್ಲಿ ಮೃತ ಮಗಳ ಮಕ್ಕಳಿಗೂ ಪಾಲು ಇದೆಯಾ? ಕಾನೂನು ಹೇಳುವುದೇನು?

    ತಂದೆಯ ಆಸ್ತಿಯಲ್ಲಿ ಮೃತ ಮಗಳ ಮಕ್ಕಳಿಗೂ ಪಾಲು ಇದೆಯಾ? ಕಾನೂನು ಹೇಳುವುದೇನು?ನಮ್ಮ ತಂದೆ  ತೀರಿಹೋಗಿ ತುಂಬಾ ವರ್ಷಗಳಾಗಿವೆ. ನನ್ನ ಜೊತೆ ಹುಟ್ಟಿದವರು ಒಬ್ಬ ಅಣ್ಣ ಮತ್ತು ಇಬ್ಬರು ಅಕ್ಕಂದಿರು. ಈಗ ಅಣ್ಣ ಮತ್ತು  ಒಬ್ಬ ಅಕ್ಕ ತೀರಿಹೋಗಿದ್ದಾರೆ. ತೀರಿ ಹೋಗಿರುವ ಅಕ್ಕನ ಮಕ್ಕಳು ನಮ್ಮ ತಂದೆಯ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಾರೆ. ಅವರಿಗೂ ಪಾಲು ಕೊಡಬೇಕಾಗುತ್ತದೆ ಇಲ್ಲವೋ ಎಂದು ತಿಳಿಸಿ?

    ಉತ್ತರ: ಮೃತ ಹಿಂದೂ ಪುರುಷನ ಆಸ್ತಿಯಲ್ಲಿ ಅವರ ಎಲ್ಲ ಮಕ್ಕಳಿಗೂ ಸಮಪಾಲು ಇರುತ್ತದೆ. ಮಕ್ಕಳಲ್ಲಿ ಯಾರಾದರೂ ತೀರಿಹೋಗಿದ್ದರೆ, ಅಂತಹ ಮಕ್ಕಳ ಭಾಗ, ಆ ಮಕ್ಕಳ ವಾರಸುದಾರರಿಗೆ ಸಮವಾಗಿ ಸಲ್ಲುತ್ತದೆ. ಹೀಗಾಗಿ ನೀವು ನಿಮ್ಮ ಅಕ್ಕನ ಮಕ್ಕಳಿಗೆ ಭಾಗ ಕೊಡಬೇಕಾಗುತ್ತದೆ. ಅವರು ಒಪ್ಪಿದರೆ ರಾಜೀ ಮಾಡಿಕೊಂಡು ಹೆಚ್ಚೂ ಕಡಿಮೆ ತೆಗೆದುಕೊಳ್ಳುವುದು ಒಳ್ಳೆಯದು.

    VIDEO: ಭೀಮಾ ತಟದಲ್ಲಿ ಪ್ರವಾಹ: ಏಳು ಸೇತುವೆ ಮುಳುಗಡೆ; ಮಹಾರಾಷ್ಟ್ರಕ್ಕೆ ಸಂಪರ್ಕ ಕಟ್​

    ವೈಎಸ್​ಆರ್​ ಹತ್ಯೆಗೆ ಸಂಚು ರೂಪಿಸಿದ್ದೇ ತೆಲಂಗಾಣ ಸಿಎಂ: ಪುತ್ರಿ ಹೇಳಿಕೆಗೆ ಭಾರಿ ಕೋಲಾಹಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts