

ಬ್ರಾಡ್ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ನಿಂದ (ಬಿಇಸಿಎಲ್)ನಿಂದ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯಥಿರ್ಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಹುದ್ದೆಗಳ ವಿವರ
* ಸೀನಿಯರ್ ಸ್ಟಾಫ್ ನರ್ಸ್: 5
ನರ್ಸಿಂಗ್ ವಿಷಯದಲ್ಲಿ ಮೂರು ವರ್ಷ ಡಿಪ್ಲೊಮಾ ಪದವಿ ಪಡೆದಿರಬೇಕು. ನಸಿಂಗ್ ಕೌನ್ಸಿಲ್ನಲ್ಲಿ ನೋಂದಣಿ ಮಾಡಿಸಿಕೊಂಡಿರಬೇಕು. ನರ್ಸಿಂಗ್ ನಲ್ಲಿ ಬಿಎಸ್ಸಿ/ಎಂಎಸ್ಸಿ ಪದವಿ ಪಡೆದವರಿಗೆ ಮೊದಲ ಆದ್ಯತೆ ನೀಡಲಾಗಿದೆ. 45 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, 50,000 ರೂ. ಮಾಸಿಕ ವೇತನ ಇರಲಿದೆ.
ಸಂದರ್ಶನ ನಡೆಯುವ ದಿನಾಂಕ: 7.6.2022 ಬೆಳಗ್ಗೆ 10.30
* ಸ್ಟಾಫ್ ನರ್ಸ್: 15
ನರ್ಸಿಂಗ್‌ನಲ್ಲಿ ಡಿಪ್ಲೊಮಾ ಪದವಿಯೊಂದಿಗೆ ನರ್ಸಿಂಗ್ ಕೌನ್ಸಿಲ್ನಲ್ಲಿ ನೋಂದಣಿ ಮಾಡಿಸಿಕೊಂಡಿರಬೇಕು. ಈಗಷ್ಟೇ ಪದವಿ ಮುಗಿಸಿದವರೂ ಅರ್ಜಿ ಸಲ್ಲಿಸಲು ಅರ್ಹರು. 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, 30,000 ರೂ. ಮಾಸಿಕ ವೇತನ ಇರಲಿದೆ.
ಸಂದರ್ಶನ ನಡೆಯುವ ದಿನಾಂಕ: 9.6.2022 ಬೆಳಗ್ಗೆ 10.30
ಇತರ ಮಾನದಂಡ
ಶೈಕ್ಷಣಿಕ ಅರ್ಹತೆ ಮತ್ತು ವೃತ್ತಿ ಅನುಭವದ ಆಧಾರದ ಮೇಲೆ ನೇರ ಸಂದರ್ಶನದ ಮೂಲಕ ಅರ್ಹ ಅಭ್ಯಥಿರ್ಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆ ಪ್ರಕ್ರಿಯೆಯಲ್ಲಿ ಸಂಸ್ಥೆಯ ನಿರ್ಧಾರವೇ ಅಂತಿಮ. ಸಂದರ್ಶನಕ್ಕೆ ಹಾಜರಾಗಲು ಯಾವುದೇ ಭತ್ಯೆ ನೀಡುವುದಿಲ್ಲ. ಈಗಾಗಲೇ ಇದೇ ವೃತಿಯಲ್ಲಿ ತೊಡಗಿರುವವರಿಗೆ ಹೆಚ್ಚು ಪ್ರಾತಿನಿಧ್ಯ ನೀಡಲಾಗುತ್ತದೆ. ಮೇಲೆ ತಿಳಿಸಿದ ದಿನಾಂಕದಂದು ಅಗತ್ಯ ದಾಖಲೆಗಳೊಂದಿಗೆ ಹಾಜರಾಗತಕ್ಕದ್ದು.
ಸಂದರ್ಶನ ನಡೆಯುವ ಸ್ಥಳ: Chittaranjan National Cancer Institute (CNCI) Kolkata, Street No.299, DJ Block, Action Area-1, Newtown, Kolkata-700156
ಅಧಿಸೂಚನೆಗೆ: https://bit.ly/3Lz57Ch
ಮಾಹಿತಿಗೆ: http://www.becil.com