ಖ್ಯಾತ ನಟಿ, ಸಂಸದೆ ನುಸ್ರತ್‌ ಮಿಸ್ಸಿಂಗ್‌: ಊರ ತುಂಬೆಲ್ಲಾ ಪೋಸ್ಟರ್‌- ನೋಡಿದವರು ಶಾಕ್‌!

nusrath
Published on

ಕೋಲ್ಕತಾ: ಗರ್ಭಿಣಿಯಾಗಿದ್ದಾಗ ಮಗು ಯಾರದ್ದು ಎಂಬ ಬಗ್ಗೆ ಸರಿಯಾಗಿ ಹೇಳದೇ ಭಾರಿ ಟ್ರೋಲ್‌ಗೆ ಒಳಗಾಗಿದ್ದ ನಟಿ, ಬಸಿರ್ಹತ್ ಲೋಕಸಭಾ ಕ್ಷೇತ್ರದ ತೃಣಮೂಲ ಟಿಎಂಸಿ ಸಂಸದೆ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದೇನೆಂದರೆ ಇವರೀಗ ಏಕಾಏಕಿ ಕಾಣೆಯಾಗಿದ್ದಾರೆ ಎಂದು ಎಲ್ಲೆಡೆ ಪೋಸ್ಟರ್‌ ಹಚ್ಚಲಾಗಿದೆ. ಇದನ್ನು ನೋಡಿ ಬಹುತೇಕ ಮಂದಿಗೆ ಶಾಕ್‌ ಆಗಿದೆ.

ನುಸ್ರತ್ ಜಹಾನ್ ನಾಪತ್ತೆಯಾಗಿದ್ದು ಅವರನ್ನು ಹುಡುಕಿಕೊಡಿ ಎಂಬ ಪೋಸ್ಟರ್‌ ಬಸಿರ್ಹತ್ ಲೋಕಸಭಾ ಕ್ಷೇತ್ರದ ಚಪಾತಲಾ ಮತ್ತು ಕಿಯಾದಂಗ ಪ್ರದೇಶಗಳಲ್ಲಿ ಕಂಡುಬಂದಿವೆ. ಈ ಪೋಸ್ಟರ್‌ ಅಂಟಿಸಿದವರ ಬಗ್ಗೆ ಇದೀಗ ರಾಜಕೀಯ ವಲಯದಲ್ಲಿ ಭಾರಿ ಕೋಲಾಹಲ, ಮಾತಿನ ಚಕಮಕಿ ಶುರುವಾಗಿದೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಅಸಲಿಗೆ ನುಸ್ರತ್‌ ಅವರಿಗೆ ಏನೂ ಆಗಲಿಲ್ಲ. ಅವರು ಸಂಸದೆಯಾಗಿ ಆಯ್ಕೆಯಾದ ಆರಂಭದಲ್ಲಿ ಜನರನ್ನು ಭೇಟಿಯಾಗುತ್ತಿದ್ದರು. ಆಮೇಲೆ ಶುರುವಾಗಿದ್ದು ಅವರ ವೈಯಕ್ತಿಕ ಜೀವನದಲ್ಲಿ ಹಲವು ಅಲ್ಲೋಲ- ಕಲ್ಲೋಲ. ಚುನಾವಣೆಯಲ್ಲಿ ಆಯ್ಕೆಯಾಗಲು ಹಿಂದೂಗಳ ಮತ ಬರುವ ಸಲುವಾಗಿ ಹಿಂದೂ ಅವರನ್ನು ಮದುವೆಯಾಗಿ ಕೊನೆಗೆ ಅವರಿಗೂ ತನಗೂ ಸಂಬಂಧವೇ ಇಲ್ಲ ಎಂದಿರುವ ಆರೋಪ ಇವರ ಮೇಲಿದೆ. ಈ ನಡುವೆಯೇ ಗರ್ಭಿಣಿಯಾಗಿ ಈಕೆಯ ಹಿಂದೂ ಪತಿ ಅದು ತಮ್ಮದಲ್ಲ ಎಂದು ಮತ್ತಷ್ಟು ಗೊಂದಲ ಸೃಷ್ಟಿಯಾಗಿತ್ತು

ಕೊನೆಗೆ ತಮ್ಮ ಮಗುವಿನ ತಂದೆ ಯಾರೆಂದು ಬೇರೊಬ್ಬರನ್ನು ನುಸ್ರತ್ ಜಹಾನ್ ತೋರಿಸಿದ್ದರು. ಇವೆಲ್ಲಾ ಆಗುತ್ತಿರುವಾಗ ಅವರು ತವರು ಕ್ಷೇತ್ರ ಬಸಿರ್‌ಹತ್‌ಗೆ ಹೋಗಲು ಸಾಧ್ಯವಾಗಲಿಲ್ಲ. ಇದೇ ಕಾರಣಕ್ಕೆ ಸಂಸದರು ಮಿಸ್ಸಿಂಗ್‌ ಎಂಬ ಪೋಸ್ಟರ್‌ ಹಾಕಲಾಗಿದೆ.

ಈ ಭಾಗದ ಅಭಿವೃದ್ಧಿಯಲ್ಲಿ ಸಂಸದೆ ನುಸ್ರತ್ ಜಹಾನ್ ಅವರ ಪಾತ್ರವಿದೆ ಮತ್ತು ಸ್ಥಳೀಯ ಮುಖಂಡರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಟಿಎಂಸಿ ಕಾರ್ಯಕರ್ತರು ಹೇಳುತ್ತಾರೆ. ಆದರೆ ಪ್ರತಿಪಕ್ಷಗಳು ಮಾತ್ರ ಭಾರಿ ಟೀಕೆ ಮಾಡುತ್ತಿದ್ದು, ಸದ್ಯ ಈ ಪೋಸ್ಟರ್‌ ತಲ್ಲಣ ಸೃಷ್ಟಿಸಿವೆ. ಇವೆಲ್ಲವುಗಳ ನಡುವೆಯೇ ನುಸ್ರತ್‌ ಕೆಲ ದಿನಗಳ ಹಿಂದೆ ಬಿಕಿನಿ ತೊಟ್ಟಿರುವ ಫೋಟೋಗಳನ್ನು ಶೇರ್ ಮಾಡಿ ಸಂಚಲನ ಮೂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net