

ಗಡ್ಟಿರೋಲಿ: ಕರೊನಾ ಎರಡನೆಯ ಅಲೆ ಹೆಜ್ಜೆಹೆಜ್ಜೆಗೂ ಆತಂಕ ಸೃಷ್ಟಿಸುತ್ತಿರುವ ನಡುವೆಯೇ ಇನ್ನೊಂದೆಡೆ ನಕ್ಸಲರ ಕಾಟವೂ ಶುರುವಾಗಿದೆ.
ಮಹಾರಾಷ್ಟ್ರದ ಗಡ್ಟಿರೋಲಿ ಜಿಲ್ಲೆಯಲ್ಲಿ ನಕ್ಸಲರು ದಾಳಿ ನಡೆಸಿ ಹತ್ಯಾಕಾಂಡ ನಡೆಸಲು ಪ್ರಯತ್ನಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ಕಾಳಗ ನಡೆದಿದೆ. ಈ ಕಾಳಗದಲ್ಲಿ 13 ಮಂದಿ ನಕ್ಸಲರನ್ನು ಪೊಲೀಸರು ಹತ್ಯೆ ಮಾಡಿದ್ದಾರೆ.
ಎಡಪಲ್ಲಿ ಅರಣ್ಯ ಪ್ರದೇಶದಲ್ಲಿ ಮಹಾರಾಷ್ಟ್ರ ಪೊಲೀಸರು ಹಾಗೂ ನಕ್ಸಲರ ನಡುವೆ ಎನ್‌ಕೌಂಟರ್ ನಡೆದಿದ್ದು, 13 ನಕ್ಸಲರು ಹತ್ಯೆಗೀಡಾಗಿದ್ದಾರೆ. 6 ನಕ್ಸಲರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿ ಎಂದು ಮೂಲಗಳು ಹೇಳಿವೆ.
ಎಡಪಲ್ಲಿ ಅರಣ್ಯ ಪ್ರದೇಶದಲ್ಲಿ ಪೊಲೀಸ್ ಕಾರ್ಯಾಚರಣೆ ಮುಂದುವರೆದಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.