ಈ ನಟಿ ಅಟೆನ್ಷನ್​ ಸೀಕರ್​.. ಟವಲ್​ ಹಾಕೋಕೆ ಬಂದಿದ್ದಾರೆ ಅಷ್ಟೇ: ರಮ್ಯಾ ವಿರುದ್ಧ ನಲಪಾಡ್​ ಕಿಡಿ

nalpad
Published on

ಉಡುಪಿ: ಮಾಜಿ ಸಂಸದೆ, ನಟಿ ರಮ್ಯಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರ ಟ್ವೀಟ್ ವಾರ್ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಹ್ಯಾರಿಸ್ ಹೇಳಿಕೆ ನೀಡಿದ್ದು, ರಮ್ಯ ಇಷ್ಟು ದಿನ ಎಲ್ಲಿದ್ದರೂ ಅಂತ ನನಗೂ ಗೊತ್ತಿಲ್ಲ ಎಂದಿದ್ದಾರೆ.

ಇಷ್ಟು ವರ್ಷ ಅವರು ಎಲ್ಲಿದ್ದರು? ಎಲ್ಲೂ ಇಲ್ಲದ ರಮ್ಯಾ ಸಡನ್ನಾಗಿ ಯಾಕೆ ಬಂದರು? ತಮ್ಮ ಅಸ್ತಿತ್ವ ತೋರಿಸಲು ಅವರು ಬಂದಿದ್ದಾರಾ ಅಥವಾ ನಾನೂ ಒಬ್ಬಳು ಇದೀನಿ ಅಂತ ತೋರಿಸಿಕೊಳ್ಳುತ್ತಿದ್ದಾರಾ ಎಂದು ಪ್ರಶ್ನಿಸಿದರು.

ಯಾವುದಾದರೂ ಒಂದು ಕುರ್ಚಿ ಮೇಲೆ ಟವಲ್ ಹಾಕಲು ರಮ್ಯಾ ಬಂದಿದ್ದಾರಾ ಎನಿಸುತ್ತಿದೆ. ಅವರು ಬಂದದ್ದು ಯಾಕೆ, ಹೀಗೆಲ್ಲ ಮಾಡುತ್ತಿರುವುದು ಯಾವುದಕ್ಕೆ ಅಂತ ನಾವು ಅರ್ಥಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದ್ದಾರೆ.

ಡಿಕೆ ಶಿವಕುಮಾರ್ ಅವರು ಬಹಳ ಕ್ಲಿಯರಾಗಿ ಇವತ್ತು ಸ್ಪಷ್ಟಪಡಿಸಿದ್ದಾರೆ. ಎಂ.ಬಿ ಪಾಟೀಲ್ ಅಶ್ವತ್ಥ ನಾರಾಯಣ ಅವರನ್ನು ಭೇಟಿ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದಾರೆ. ಹೌದಪ್ಪ.. ಬಂದಿರಬಹುದು ರಕ್ಷಣೆಗೋಸ್ಕರ ಎಂದು ಹೇಳಿದ್ದಾರೆಯೇ ವಿನಾ ಎಂಬಿ ಪಾಟೀಲ್ ಹೋಗಿದ್ದಾರೆ ಎಂದು ಎಲ್ಲೂ ಡಿಕೆ ಶಿವಕುಮಾರ್ ಎಲ್ಲಿಯೂ ಹೇಳಿಲ್ಲ ಎಂದರು.

ಕಾಂಗ್ರೆಸ್​ನ ಎಲ್ಲ ನಾಯಕರು ಒಗ್ಗಟ್ಟಾಗಿದ್ದಾರೆ. ಡಿಕೆಶಿ, ಎಂಬಿ ಪಾಟೀಲ್, ಸಿದ್ದರಾಮಯ್ಯ ನಾವೆಲ್ಲರೂ ಜೊತೆಗಿದ್ದೇವೆ. ಸುಮ್ಮನೆ ಡಿಸ್ಟರ್ಬೆನ್ಸ್ ಕ್ರಿಯೇಟ್ ಮಾಡಲು ಅವರು ಪ್ರಯತ್ನಿಸುತ್ತಿದ್ದಾರೆ. ಅಷ್ಟಕ್ಕೂ ರಮ್ಯಾ ಅಟೆನ್ಷನ್​ ಸೀಕರ್​. ನಾನೂ ಇನ್ನೂ ಇದ್ದೀನಿ ಎಂದು ತೋರಿಸಿ ಕೊಳ್ಳುತ್ತಿರಬಹುದು ಎಂದು ಕಿಡಿ ಕಾರಿದ್ದಾರೆ.

ರಮ್ಯಾ ಅವರ ಹಳೆಯ ಟ್ವೀಟ್ ಗಳನ್ನು ತೆಗೆದುಕೊಂಡು ನೋಡಿ, ಆಗ ಯಾವುದೋ ಸಿನಿಮಾಗಳ ಬಗ್ಗೆ ಮಾತ್ರ ಟ್ವೀಟ್ ಮಾಡಿಕೊಂಡಿದ್ದರು. ಇತ್ತೀಚಿಗೆ ಅವರು ಯಾವುದೇ ರಾಜಕೀಯ ಟ್ವೀಟ್ ಗಳನ್ನು ಮಾಡಿಲ್ಲ. ಇದೀಗ ಸಡನ್ನಾಗಿ ಯಾಕೆ ನಮ್ಮ ನಾಯಕರ ಮೇಲೆ ಬಿದ್ದಿದ್ದಾರೋ ಗೊತ್ತಾಗ್ತಿಲ್ಲ. ಇದರಲ್ಲಿ ಯಾವುದೋ ಒಳ ಉದ್ದೇಶ ಇದೆ. ನಟಿ ರಮ್ಯಾಗೆ ಯಾರೂ ಹೆಚ್ಚು ಮಹತ್ವ ಕೊಡಬಾರದು ಎಂದು ಹೇಳಿದರು.

ರಮ್ಯಾ ಅವರು ಒಳ್ಳೆಯವರೇ ಚಿಕ್ಕ ವಯಸ್ಸಿನಲ್ಲಿ ಸಂಸದರಾದವರು. ಅವರು ಈಗಾಗಲೇ ಒಳ್ಳೆಯ ಸಾಧನೆಗಳನ್ನು ಮಾಡಿದ್ದಾರೆ. ನಾನು ಅವರ ವಿರುದ್ಧ ಇಲ್ಲ. ಆದರೆ ಅವರು ಇಂತಹ ಚೀಪ್ ಪಾಲಿಟಿಕ್ಸ್ ಮಾಡಬಾರದು, ಅವರ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಟಾಂಗ್​ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

ಇಲ್ಲಿದೆ ನೋಡಿ ಘಟನೆ ಹಿನ್ನೆಲೆ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net